Advertisement
ವಾಸ್ತವ ಬಿಚ್ಚಿಟ್ಟಿದ್ದಾರೆ: ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಸಂಗೀತ ನಿರ್ದೇಶಕ ಹಂಸಲೇಖ ಅವರ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿ ದರು. ಸಂಗೀತ ನಿರ್ದೇಶಕ ಹಂಸಲೇಖ ಅವರು ಅಸಮಾನತೆ, ತಾರತಮ್ಯ ಹಾಗೂ ವಾಸ್ತವಗಳ ಬಗ್ಗೆ ಮಾತನಾಡಿದ್ದಾರೆ. ಇದು ಒಂದು ವಿವಾದವಾಗಿರು ವುದು ಅಚ್ಚರಿಗೆ ಕಾರಣವಾಗಿದೆ ಎಂದರು. ಹೇಳಿಕೆಯಲ್ಲಿ ತಪ್ಪೇನಿದೆ..?
Related Articles
Advertisement
ನಾವು ಬೆಂಬಲಿಸುತ್ತೇವೆ: ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ನಾನೂ ಭಾಗಿ ಎಂದು ಹಂಸಲೇಖ ಅವರು ಹೇಳಿರುವುದು ಅವರ ಮಾತಿನಲ್ಲಿ ಅವರಿಗಿರುವ ಬದ್ಧತೆ ತೋರಿಸಿದೆ. ಹೀಗಾಗಿ ಅವರ ಬೆಂಬಲಕ್ಕೆ ತಾವೆಲ್ಲ ಇರುವುದಾಗಿ ತಿಳಿಸಿದರು.
ಮನುವಾದಿಗಳ ನಡೆಗೆ ಕಿಡಿ: ಮನುವಾದಿಗಳಿಗೆ ಅಪರೂಪಕ್ಕಾದರು ಸತ್ಯವನ್ನು ಸಹಿಸಿಕೊಳ್ಳುವ, ಸತ್ಯವನ್ನು ಒಪ್ಪಿಕೊಳ್ಳುವ ತಾವು ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ, ತಪ್ಪುಗಳನ್ನು ತಿದ್ದಿದವರಿಗೆ ಕೃತಜ್ಞತೆ ಸಲ್ಲಿಸುವ ದೊಡ್ಡ ಗುಣ ಇಲ್ಲಿಯವರೆವಿಗೂ ಬಾರದೇ ಇರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಪ್ರಗತಿಪರರಿಗೆ ಅಪಮಾನ: ಪ್ರಜಾಸತ್ತಾತ್ಮಕ ಸಂವಿಧಾನ ಜಾರಿಯಲ್ಲಿರುವ ಈ ನೆಲದಲ್ಲಿ ಕಾನೂನುಗಳು ಶ್ರೇಷ್ಠವೇ ಹೊರತು ಸಂಪ್ರದಾಯಗಳಲ್ಲ. ಜೀವ ವಿರೋಧಿ ಸಂಪ್ರದಾಯಗಳು, ಮೂಢನಂಬಿಕೆ ಮತ್ತು ಮೌಡ್ಯಗಳನ್ನು ತೊಲಗಿಸಲು ವೈಚಾರಿಕ ಮತ್ತು ವೈಜ್ಞಾನಿಕವಾಗಿ ಜಾಗೃತಿ ಮೂಡಿಸುತ್ತಿರುವ ಪ್ರಗತಿಪರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸೋಲಿಸಿ ಅಪಮಾನಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಸಮತಾ ಸೈನಿಕಾ ದಳದ ಡಾ.ಜಿ.ಗೋವಿಂದಯ್ಯ ಮಾತನಾಡಿದರು. ಒಕ್ಕೂಟದ ಮುಖಂಡರಾದ ಶಿವಕುಮಾರಸ್ವಾಮಿ, ಎಸ್.ಜಯಕಾಂತ, ಕೂಡ್ಲೂರು ರವಿಕುಮಾರ್, ಅಪ್ಪಗೆರೆ ಪ್ರದೀಪ್, ಮರಳವಾಡಿ ಮಂಜು, ಶಿವರಾಜು, ಸುರೇಶ್, ಡಾ.ಜಯಸಿಂಹ, ಕೀರ್ತಿರಾಜ್, ಲಕ್ಷ್ಮಣ್, ಬಿವಿಎಸ್ ವೆಂಕಟೇಶ್, ಹರೀಶ್ ಬಾಲು, ಕುಮಾರಸ್ವಾಮಿ, ಜೆ.ಎಂ.ಶಿವಲಿಂಗಯ್ಯ, ನರಸಿಂಹಯ್ಯ, ಜಯಚಂದ್ರ, ಪುಟ್ಟಸ್ವಾಮಿ, ಭಾಸ್ಕರ್, ಶ್ರೀನಿವಾಸ್, ಸಿದ್ದರಾಮು, ಬ್ಯಾಡರಹಳ್ಳಿ ಶಿವಕುಮಾರ್, ಬನಶಂಕರಿ ನಾಗು, ಜಿ.ಗೋಪಾಲ್ , ಶಿವಲಿಂಗಯ್ಯ, ಸುರೇಂದ್ರ ಶ್ರೀನಿವಾಸ್, ಸುಜೀವನ್, ಚಾಂದ್ ಪಾಷ, ಸೈಯದ್ ಮತೀನ್ , ಅಬ್ದುಲ್ಲಾ ಮತ್ತಿ ತರರು ಭಾಗವಹಿಸಿದ್ದರು