Advertisement

ಬರಲಿದೆ ಮತ್ತೊಂದು ಸ್ಕ್ಯಾಮ್‌ ಸಿರೀಸ್:‌ ʼಸ್ಕ್ಯಾಮ್‌ 2010: ಸುಬ್ರತಾ ರಾಯ್ʼ ಅನೌನ್ಸ್

05:18 PM May 16, 2024 | Team Udayavani |

ಮುಂಬಯಿ: ಭಾರತದ ದೊಡ್ಡ ಹಗರಣಗಳ ಬಗ್ಗೆ ವೆಬ್ ಸಿರೀಸ್ ಮಾಡಿ ಸೈ ಎನ್ನಿಸಿರುವ ನಿರ್ದೇಶಕ ಹನ್ಸಲ್ ಮೆಹ್ತಾ ಮೆತ್ತೊಂದು ಹಗರಣದ ಕುರಿತು ಸಿರೀಸ್‌ ಮಾಡಲು ಸಿದ್ದರಾಗಿದ್ದು, ಹೊಸ ಸಿರೀಸ್‌ ಅನೌನ್ಸ್‌ ಮಾಡಿದ್ದಾರೆ.

Advertisement

ದೇಶದ ಷೇರು ಮಾರುಕಟ್ಟೆಯಲ್ಲಿ ನಡೆದ ಅತಿದೊಡ್ಡ ಹಗರಣದಲ್ಲಿ ಭಾಗಿಯಾದ ಹರ್ಷದ್‌ ಮೆಹ್ತಾ ಅವರ ಕುರಿತಾಗಿ ಬಂದ ʼಸ್ಕ್ಯಾಮ್‌ 1992ʼ ವೆಬ್ ಸಿರೀಸ್ ನೋಡುಗರ ಗಮನ ಸೆಳೆದಿತ್ತು. ಇದಾದ ಬಳಿಕ ಭಾರತದ ನಾನಾ ರಾಜ್ಯಗಳಲ್ಲಿನ ರೂ. 30,000 ಕೋಟಿಗೂ ಹೆಚ್ಚಿನ ನಕಲಿ ಛಾಪಾ ಕಾಗದ ಹಗರಣ ರೂವಾರಿ ಕರೀಂ ಲಾಲಾ ತೆಲಗಿ ಜೀವನಗಾಥೆಯನ್ನು ನಿರ್ದೇಶಕ ಹನ್ಸಲ್ ಮೆಹ್ತಾ ಅವರು ʼಸ್ಕ್ಯಾಮ್ 2003: ದಿ ತೆಲ್ಗಿ ಸ್ಟೋರಿ ʼಯನ್ನು ಸಿರೀಸ್‌ ಆಗಿ ತಂದಿದ್ದರು.

ಈ ಎರಡು ಸಿರೀಸ್‌ ಭಾರತದ ಅತೀ ದೊಡ್ಡ ಹಗರಣದ ಕಥೆಯನ್ನು ತೆರೆದಿಟ್ಟಿತ್ತು. ಇದೀಗ ಮೆಹ್ತಾ ಮತ್ತೊಂದು ಸ್ಕ್ಯಾಮ್‌ ಕಥೆಯನ್ನು ತರಲಿದ್ದಾರೆ.

ʼಸ್ಕ್ಯಾಮ್‌ 2010: ಸುಬ್ರತಾ ರಾಯ್ ಸಾಗಾʼ ವನ್ನು ಮೆಹ್ತಾ ಹೇಳಲಿದ್ದಾರೆ.  ಸ್ಕ್ಯಾಮ್‌ ಇಸ್‌ ಬ್ಯಾಕ್‌ ಎಂದು ಬರೆದುಕೊಂಡು, ಸ್ಕ್ಯಾಮ್‌ ಸಿರೀಸ್‌ ನ ಹಿನ್ನೆಲೆ ಮ್ಯೂಸಿಕ್‌ ನೊಂದಿಗೆ ಹೊಸ ಸಿರೀಸ್‌ ನ್ನು ಅನೌನ್ಸ್‌ ಮಾಡಿರುವುದನ್ನು ʼಸೋನಿ ಲಿವ್‌ʼ ನಲ್ಲಿ ಹಂಚಿಕೊಳ್ಳಲಾಗಿದೆ.

ಸುಬ್ರತಾ ಅವರು ʼಸಹಾರಾ ಇಂಡಿಯಾ ಪರಿವಾರ್‌ʼ ವ್ಯಾಪಾರ ಸಮೂಹದ ಸ್ಥಾಪಕರಾಗಿದ್ದರು. ಹೂಡಿಕೆದಾರರ ಖಾತೆಯಲ್ಲಿ ವಂಚನೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.

Advertisement

ಸೆಬಿಗೆ ಸಹಾರಾ ಸಮೂಹದ ಕಂಪನಿಗಳು ಹೂಡಿಕೆದಾರರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ 2009ರಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ಮುಂದುವರಿದಾಗ ಮೂರು ಕೋಟಿಗೂ ಹೆಚ್ಚು ಹೂಡಿಕೆದಾರರಿಗೆ 24,000 ಕೋಟಿ ರೂ. ವಂಚಿಸಿರುವ ಹಗರಣ ಬಯಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಸುಬ್ರತಾ ರಾಯ್ ತಿಹಾರ್‌ ಜೈಲು ಸೇರಿದ್ದರು.

2016 ರಲ್ಲಿ ಪೆರೋಲ್‌ ಮೂಲಕ ಅವರು ಜೈಲಿನಿಂದ ಹೊರಬಂದಿದ್ದರು. ನಂತರ ಸೆಬಿ ಅವರ ಪೆರೋಲ್ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರಿಂದ ಅವರು ಮತ್ತೆ ಜೈಲು ಪಾಲಾಗಿದ್ದರು. 2023 ರ ನವೆಂಬರ್‌ ನಲ್ಲಿ ಅವರು ನಿಧನ ಹೊಂದಿದರು.

ಶೀಘ್ರದಲ್ಲಿ ವೆಬ್‌ ಸಿರೀಸ್‌ ಬರಲಿದೆ ಎಂದು ಅನೌನ್ಸ್‌ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next