Advertisement
ಎಲ್ಲೆಲ್ಲಿ ಬಳಸಬಹುದು?ಹ್ಯಾಂಗಿಂಗ್ ಪಾಟ್‌ಗಳನ್ನು ಮನೆಯ ಮುಂದಿನ ಸಿಟೌಟ್ ಗಳಲ್ಲಿ ಹೆಚ್ಚಾಗಿ ಬಳಸಬಹುದು. ಟೆರೇಸ್‌ನಲ್ಲಿ ಇವುಗಳನ್ನು ನೇತಾಡಿಸುವುದರಿಂದ ಮನೆಗೆ ಅಂದವಾದ ಲುಕ್ ಸಿಗುತ್ತದೆ. ಮನೆಯ ಸುತ್ತ ಬದಿಗಳಲ್ಲಿ, ಕಾಂಪೌಂಡ್‌ಗಳಲ್ಲಿ ಇವುಗಳನ್ನು ನೇತಾಡಿಸಬಹುದು. ಮನೆಯನ್ನು ಪ್ರವೇಶಿಸುವ ಬಾಗಿಲುಗಳ ಎರಡು ಬದಿಯಲ್ಲಿ ನೇತಾಡಿಸಬಹುದು. ಅತಿ ಹೆಚ್ಚು ಸಂಖ್ಯೆಯಲ್ಲಿ ಹ್ಯಾಂಗಿಂಗ್ ಪಾಟ್ ಗಳನ್ನು ಬಳಸವುದು ಕೂಡ ಮನೆಯ ಅಂದಗೆಡಿಸಬಹುದು. ಆದ್ದರಿಂದ ಸೀಮಿತವಾಗಿ ಬಳಸಿ ಹ್ಯಾಂಗಿಂಗ್ ಪಾಟ್ ಬಳಸಿ ಮನೆಯನ್ನು ಅಂದವಾಗಿ ಕಾಣುವಂತೆ ಮಾಡಬಹುದು.
ಹ್ಯಾಂಗಿಂಗ್ ಪಾಟ್‌ಗಳು ಸಣ್ಣದಾಗಿರುವುದರಿಂದ ಅದರಲ್ಲಿ ನೀರಿಗೆ ಜಾಗ ಕಡಿಮೆಯಿರುತ್ತದೆ. ಆದ್ದರಿಂದ ಅವುಗಳಿಗೆ ನೀರುಣಿಸುತ್ತಾ ಇರುವುದು ಅಗತ್ಯ. ಜತೆಗೆ ಕಡಿಮೆ ಮಣ್ಣು ಬಳಸುವುದರಿಂದ ಅದರ ಫಲವತ್ತತೆ ಕಡಿಮೆಯಾಗುತ್ತದೆ. ಅದಕ್ಕಾಗಿ ಅವುಗಳಿಗೆ ಬೇಕಾದಷ್ಟು ಫಲವತ್ತತೆ ನೀಡಬೇಕಾಗುತ್ತದೆ. ಪಾಟ್‌ಗಳಲ್ಲಿ ಇತರ ಕಳೆಗಳು, ಕಸ ತುಂಬಿದ್ದರೆ ಅವುಗಳನ್ನು ಕೀಳಿ ಸ್ವಚ್ಛಗೊಳಿಸುವುದರಿಂದ ಗಿಡ ಸುಂದರವಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೆ ಗಿಡಗಳು ಹೆಚ್ಚು ದೊಡ್ಡದಾಗಿ ಬೆಳೆದಾಗ ಅವುಗಳನ್ನು ಕತ್ತರಿಸುವುದು ಕೂಡ ಅತ್ಯಗತ್ಯ. ಕೃತಕ ಗಿಡಗಳನ್ನೂ ಬಳಸಬಹುದು
ಕೃತಕ ಗಿಡಗಳನ್ನು ಮನೆಯ ಮುಂದೆ ಹ್ಯಾಂಗಿಂಗ್ ಪಾಟ್ ಗಳಲ್ಲಿ ಬಳಸಬಹುದು. ಇದು ನೈಜ ಗಿಡಗಳಂತೆಯೇ ಕಾಣುವಂತೆ ಮಾಡುತ್ತದೆ. ಇವುಗಳನ್ನು ನಿರ್ವಹಣೆ ಮಾಡಬೇಕಾದ ಅಗತ್ಯ ಇರುವುದಿಲ್ಲವಾದ್ದರಿಂದ ಇದು ಮನೆಯನ್ನು ಸುಂದರಗೊಳಿಸಲು ಅತ್ಯಂತ ಸುಲಭ ವಿಧಾನ.
Related Articles
ಹ್ಯಾಂಗಿಂಗ್ ಪಾಟ್‌ಗಳನ್ನು ಖರಿದಿಸುವಾಗ ಮನೆಯ ಪರಿಸರಕ್ಕೆ ಅನುಗುಣವಾಗಿ ಖರೀದಿಸಬೇಕಾಗುತ್ತದೆ. ಬಿಸಿಲು ತಾಗುವಲ್ಲಿ ಬಳಸುವುದಾದರೆ ಅದಕ್ಕ ಸರಿಹೊಂದುವ ಗಿಡಗಳನ್ನು ಆಯ್ಕೆ ಮಾಡಬೇಕು. ಮನೆಯ ಒಳಗಡೆ ಅಥವಾ ನೆರಳಿರುವಲ್ಲಿ ಬಳಸುವುದಾದರೆ ಅದಕ್ಕೆ ಸೂಕ್ತವಾಗುವ ಗಿಡಗಳನ್ನೇ ಖರೀದಿಸಬೇಕು. ಅಷ್ಟೇ ಅಲ್ಲದೆ ಗಿಡಗಳನ್ನು ಆಯ್ಕೆ ಮಾಡುವಾಗ ಅವುಗಳ ಬಣ್ಣ, ಆಕೃತಿಗಳನ್ನು ಗಮನಿಸಿ ಆಯ್ಕೆ ಮಾಡಬೇಕಾಗುತ್ತದೆ. ಒಂದೇ ಬಣ್ಣದ, ಒಂದೇ ಆಕೃತಿಯ ಗಿಡಗಳನ್ನು ಖರೀದಿಸುವ ಬದಲು ವಿವಿಧ ಬಣ್ಣಗಳನ್ನು ಆಯ್ಕ ಮಾಡಬಹುದು. ಗಿಡಗಳ ಬಣ್ಣಗಳ ಆಯ್ಕೆಯಲ್ಲೂ ಹೆಚ್ಚು ಆಕರ್ಷಕ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಮನೆಗೆ ಆಕರ್ಷಕ ಲುಕ್ ನೀಡುತ್ತದೆ.
Advertisement
ರಂಜಿನಿ ಮಿತ್ತಡ್ಕ