ಹುಬ್ಬಳ್ಳಿ: ಕರಕುಶಲಕರ್ಮಿಗಳ ಕೈಗಳಲ್ಲಿ ಅರಳಿದ ವಿವಿಧ ಉತ್ಪನ್ನಗಳು, ಮಣ್ಣು, ಕಟ್ಟಿಗೆ, ಚರ್ಮ ಬಳಸಿ ತಯಾರಿಸುವ ಉತ್ಪನ್ನಗಳ ಪ್ರಾತ್ಯಕ್ಷಿಕೆ, ಅಂದ-ಚೆಂದದ ಅಲಂಕಾರಿಕವಸ್ತುಗಳು, ಮನಮೋಹಕ ಕಿನ್ನಾಳ ಗೊಂಬೆಗಳು, ಕಲಘಟಗಿಯ ತೊಟ್ಟಿಲು, ಬಟ್ಟೆ ಮಿಲ್‌ಗಳಿಗೆ ಸವಾಲು ಹಾಕುವ ಕೈಮಗ್ಗದಿಂದ ತಯಾರಾದ ವಸ್ತ್ರಗಳು, ಆಟಿಕೆ ಸಾಮಾನುಗಳ ರೂಪದ ಕೃಷಿ ಸಲಕರಣೆಗಳು, ಬಾಯಲ್ಲಿ ನೀರೂರಿಸುವ ಆಹಾರ ಪದಾರ್ಥ, ತಿಂಡಿ-ತಿನಿಸುಗಳು, ಸ್ವಾಗತಕೋರುವ ಗೊಂಬೆಗಳು..
ಹೀಗೆ ಗ್ರಾಮೀಣ ಸೊಗಡು, ಜನಜೀವನದ ಭವ್ಯ ಪರಂಪರೆಯೇ ಅಲ್ಲಿ ನೆಲೆಗೊಂಡಿದೆ. ಗ್ರಾಮಭಾರತದ ಗತವೈಭವ ವಿಜೃಂಭಿಸಿದಂತೆ ಭಾಸವಾಗುತ್ತಿದೆ. ಮುಖ್ಯದ್ವಾರಕ್ಕೆ ಜೋಳದ ದಂಟಿನಿಂದ ಅಲಂಕರಿಸುವ ಮೂಲಕ ಕೃಷಿಯಾಧಾರಿತ ಭಾರತದ ಸೊಬಗಿನ ಸ್ವಾಗತ ಕೋರಲಾಗಿದೆ.
ಒಳ ಪ್ರವೇಶಿಸಿದರೆ ಸಾಲಾಗಿ ನಿಂತ ಬಣ್ಣಬಣ್ಣದ ದೊಡ್ಡ ಬೊಂಬೆಗಳು ಆಕರ್ಷಿಸುತ್ತಿವೆ.ಮತ್ತೂಂದು ಮೂಲೆಯಲ್ಲಿ ಅಲಂಕೃತಶೆಡ್‌ನಲ್ಲಿ ಗೋಮಾತೆ ದರ್ಶನವಾಗುತ್ತದೆ.ಮತ್ತೂಂದು ಮಗ್ಗಲಿಗೆ ಗ್ರಾಮೀಣಭಾರತದ ಕೌಶಲ-ಪ್ರತಿಭೆ ಬಿಂಬಿಸುವ ಕಟ್ಟಿಗೆ ಕಲ್ಲುಗಳನ್ನು ಬಳಸಿ ಮೂರ್ತಿಗಳನ್ನುತಯಾರಿಸುವ, ಮಗ್ಗಗಳಿಂದ ಸ್ಥಳದಲ್ಲೇ ಜಮಖಾನ ಇನ್ನಿತರ ಉತ್ಪನ್ನಗಳ ತಯಾರಿಕೆ,ಚರ್ಮದಿಂದ ಕೊಲ್ಲಾಪುರ ಚಪ್ಪಲಿ ತಯಾರಿಕೆಯ ಪ್ರಾತ್ಯಕ್ಷಿಕೆ ಗ್ರಾಮೀಣಹಿನ್ನೆಲೆಯ ಮಧ್ಯವಯಸ್ಕರಿಗೆ ಕರಕುಶಲತೆವಿವಿಧ ವೃತ್ತಿಗಳ ಉತ್ಪನ್ನಗಳ ನೆನಪಿನ ಪುಟತೆರೆದರೆ, ನಗರದವರು, ಮಕ್ಕಳಿಗೆ ಅಚ್ಚರಿಯ ಮುದ ನೀಡುತ್ತದೆ.
ಕಟ್ಟಿಗೆ, ಕಲ್ಲು, ಲೋಹ, ಮಣ್ಣು, ಖಾದಿ, ಕೈಮಗ್ಗ, ಹ್ಯಾಂಡಿಕ್ರಾಫ್ಟ್, ಗೋವುಉತ್ಪನ್ನ, ಚರ್ಮದ ಉತ್ಪನ್ನ, ಗಾಜಿನ ಉತ್ಪನ್ನ, ನಾಟಿ ಔಷ ಧ, ಪಾರಂಪರಿಕಆಟಿಕೆ ಮತ್ತು ಸಂಗೀತ ವಾದ್ಯಗಳು ಹೀಗೆವಿವಿಧ ಪ್ರಕಾರಗಳ ಮಳಿಗೆಗಳು ಕೈ ಮಾಡಿ ಕರೆಯುತ್ತಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಿಂದ ವಿವಿಧ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳೊಂದಿಗೆ ಆಗಮಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕಿನ್ನಾಳದ ಸುಮಾರು 21ಕ್ಕೂ ಹೆಚ್ಚು ಕರಕುಶಲಕರ್ಮಿಗಳುತಮ್ಮ ಉತ್ಪನ್ನಗಳೊಂದಿಗೆ ಆಗಮಿಸಿದ್ದು, ವಿವಿಧ ಗೊಂಬೆಗಳು ನೋಡುಗರನ್ನು ತಮ್ಮತ್ತ ಸೆಳೆಯುತ್ತಿವೆ. ಹಾವೇರಿ ಜಿಲ್ಲೆಯ ಕರಕುಶಲಕರ್ಮಿ ಮಣ್ಣಿನ ಉತ್ಪನ್ನಗಳೊಂದಿಗೆಆಗಮಿಸಿದ್ದರೆ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಕರಕುಶಲಕರ್ಮಿಗಳುಖಾದಿ, ಕೈಮಗ್ಗ ವಸ್ತ್ರ-ಉತ್ಪನ್ನಗಳೊಂದಿಗೆ ಆಗಮಿಸಿದ್ದಾರೆ.
ಗೋ ಆಧಾರಿತ ವಿಭೂತಿ, ಧೂಪ, ಗೋಅರ್ಕ ಸೇರಿದಂತೆ ವಿವಿಧ ಉತ್ಪನ್ನಗಳು, ಸಾವಯವ ಪದಾರ್ಥಗಳು, ಬಿಸಿ ಬಿಸಿ ಪರೋಟಾ, ನನ್ನಾರಿ ಜ್ಯೂಸ್, ಬೆಳವಲಹಣ್ಣುಉತ್ಪನ್ನಗಳು, ಗಿರ್ಮಿಟ್, ಮಹಿಳೆಯರು ತಯಾರಿಸಿದ ಸ್ವಾದಿಷ್ಟ ತಿಂಡಿ-ತಿನಿಸುಗಳು,ರಾಗಿ ಮಜ್ಜಿಗೆ, ನಾಟಿ ವೈದ್ಯಕೀಯ ಔಷಧಉತ್ಪನ್ನಗಳು, ಮಹಿಳೆಯರಿಗೆ ಅಲಂಕಾರಿಕಉತ್ಪನ್ನಗಳು ಭಾರತೀಯ ಕಲೆ-ಕೌಶಲ ವೈಭವವನ್ನು ಬಿಂಬಿಸುತ್ತಿವೆ.