Advertisement

ಸಂಪೂರ್ಣ ಶಾಪಿಂಗಾಯಣ ಇಲ್ಲಿ ಎಲ್ಲವೂ ಸಿಗುತ್ತಂತೆ!

10:43 AM Jun 23, 2018 | Team Udayavani |

ಕರಕುಶಲ ವಸ್ತುಗಳು ಹಾಗೂ ಕರಕುಶಲಕರ್ಮಿಗಳ ಸಂಪೂರ್ಣ ಸೊಸೈಟಿ ವತಿಯಿಂದ ಸಂಪೂರ್ಣ ಸಂತೆ ಹೆಸರಿನ ಕರಕುಶಲ ಮೇಳ ನಡೆಯುತ್ತಿದೆ. ಸುಮಾರು 100ಕ್ಕೂ ಹೆಚ್ಚು ಕರಕುಶಲಕರ್ಮಿಗಳ ತಂಡವು, ತಾವು ತಯಾರಿಸಿರುವ ಕರಕುಶಲ ವಸ್ತು ಹಾಗೂ ಕೈಮಗ್ಗದ ಬಟ್ಟೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಿದ್ದಾರೆ.

Advertisement

ಹತ್ತು ದಿನ ನಡೆಯುವ ಈ ಬೃಹತ್‌ ಮೇಳದಲ್ಲಿ 19 ರಾಜ್ಯಗಳ ಕರಕುಶಲಕರ್ಮಿಗಳ ಮಳಿಗೆ ಇರಲಿದ್ದು,
ಕಲಾಕೃತಿ, ಕರಕುಶಲ ವಸ್ತುಗಳು, ವಸ್ತ್ರಗಳು, ಗೃಹಾಲಂಕಾರ ವಸ್ತುಗಳು ಹಾಗೂ ಪೀಠೊಪಕರಣಗಳು ಲಭ್ಯ.

ಗುಜರಾತ್‌, ಅಫ್ಘಾನಿಸ್ತಾನ,ರಾಜಸ್ಥಾನ… ಈಗ ಎಲ್ಲ ಕಡೆಯೂ ಮರುಬಳಕೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ. ನಿಮಗೂ ಅಂಥ ವಸ್ತುಗಳು ಬೇಕೆನಿಸಿದರೆ, “ಚತುರ್‌ ಚಿಡಿಯಾ’ ಮಳಿಗೆಗೆ ಭೇಟಿ ಕೊಡಿ. ಇದು ಗುಜರಾತ್‌ ಮೂಲದ ಬ್ರ್ಯಾಂಡ್‌ ಆಗಿದ್ದು, ಬಿದಿರು, ಬಟ್ಟೆ, ಜೇಡಿಮಣ್ಣು, ಕಾಗದದಂಥ ಮರುಬಳಕೆಯ ವಸ್ತುಗಳನ್ನು ಬಳಸಿ ತಯಾರಿಸಿಸಲ್ಪಟ್ಟ ವಸ್ತುಗಳು ಇಲ್ಲಿ ಲಭ್ಯ. ಸಾಂಪ್ರದಾಯಕ ಅಫ್ಘಾನಿ ಬಟ್ಟೆಗಳನ್ನು ಇಷ್ಟಪಡುವವರಿಗಾಗಿ, ಅಫ್ಘಾನಿಸ್ತಾನದ ಅಬ್ದುಲ್‌ ಗಫ‌ೂರ್‌ ಅವರು ಬುಡಕಟ್ಟು ಜನರ ಸಾಂಪ್ರದಾಯಿಕ ಆಭರಣಗಳು, ವಿವಿಧ ಬಣ್ಣಗಳ ಸ್ಟೋಲ್‌ಗ‌ಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಮಧ್ಯಪ್ರದೇಶದ ಪುರಾತನ ಬುಡಕಟ್ಟು ಜನಾಂಗದವರು ರಚಿಸುತ್ತಿದ್ದ, ಜನಪದ ಪೇಂಟಿಂಗ್‌ಗಳಾದ ಗೊಂಡ್‌ ಮತ್ತು ಭಟ್ಟಿಗಳ ಮಳಿಗೆಗಳೂ ಇಲ್ಲಿವೆ. ಸವಾಯಿ ಮಧೋಪುರ್‌ನ ದಸ್ತ್ಕಾರ್‌ ರಣಥಂಬೋರ್‌ ದೊರೆಯಲಿದ್ದು, ಇದು ರಾಜಸ್ಥಾನ ಮೂಲದ ಗೃಹಾಲಂಕಾರ ವಸ್ತುವಾಗಿದೆ.

ಬೊಂಬೆ ಹೇಳುತೈತೆ..
ಬೊಂಬೆ ಬೇಕೆನ್ನುವವರಿಗೆ ಚನ್ನಪಟ್ಟಣದ ಮಾಯಾ ಆರ್ಗಾನಿಕ್‌, ರಾಜಸ್ಥಾನದ ಜೋಧ್‌ಪುರದ “ದಿ
ವುಡ್‌ ಪೀಕರ್ಸ್‌’ ಮಳಿಗೆಗಳಿವೆ. ಜೊತೆಗೆ ಪ್ರಾಚೀನ ವಸ್ತುಗಳು, ಲೋಹದ ಆಭರಣಗಳು, ಮಡಕೆಗಳು,
ಬೋರ್ಡ್‌ ಗೇಮ್‌ಗಳು, ಕಲಾಕೃತಿಗಳನ್ನೂ ಖರೀದಿಸಬಹುದು. ಗ್ರಾಹಕರು ಹಾಗೂ ಕರಕುಶಲಕರ್ಮಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ ಸಂಪೂರ್ಣ ಸಂತೆಯ ರಂಗಿನಲ್ಲಿ ನೀವೂ ಭಾಗಿಯಾಗಿ. 

ಎಲ್ಲಿ?: ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜು, ಬೆನ್ಸನ್‌ ಟೌನ್‌
 ಯಾವಾಗ?: ಜೂನ್‌ 23- ಜುಲೈ 1,ಬೆಳಗ್ಗೆ 11-ರಾತ್ರಿ 8
 ಸಂಪರ್ಕ: 9742204002
 ಪ್ರವೇಶ ದರ: ಉಚಿತ 

Advertisement
Advertisement

Udayavani is now on Telegram. Click here to join our channel and stay updated with the latest news.

Next