ನಾವು, ನಮ್ಮದು ಎಂಬುದರ ಮೇಲೆ ತುಸು ಹೆಚ್ಚೇ ವ್ಯಾಮೋಹವಿರುವುದು ಸಹಜ. ಹಾಗಾಗಿ ಕೈಮಗ್ಗ ಸೀರೆ, ಖಾದಿ ವಸ್ತ್ರಗಳನ್ನು ಕಂಡಾಗ ಖರೀದಿಸದೇ ಇರಲಾಗುವುದಿಲ್ಲ. ನೀವೂ ಇಂಥ ಮೋಹಕ್ಕೆ ಬೀಳುವವರಾಗಿದ್ದರೆ, ಸ್ವದೇಶಿ ವಸ್ತುಗಳ ಪ್ರದರ್ಶನದ ಬಗ್ಗೆ ಕೇಳಿದರೆ ಖುಷಿಯಾಗುತ್ತೀರಿ.
ನಿಮ್ಮ ಖುಷಿಯನ್ನು ಹೆಚ್ಚಿಸಲೆಂದೇ ಗೋ ಕೂಪ್‌ನವರು, “ಗೋ ಸ್ವದೇಶಿ’ ಎಂಬ, ನೇಕಾರರು ಹಾಗೂ ಕುಶಲಕರ್ಮಿಗಳು ತಯಾರಿಸಿರುವ ವಿಶಿಷ್ಟ ಕೈಮಗ್ಗ ಸೀರೆಗಳ ಪ್ರದರ್ಶನ ನಡೆಸುತ್ತಿದ್ದಾರೆ. ದೇಶಾದ್ಯಂತದ ನೇಕಾರರು ತಯಾರಿಸಿರುವ ಸೀರೆಗಳು ಹಾಗೂ ನಾನಾ ಬಗೆಯ ಕರಕುಶಲ ವಸ್ತುಗಳು ಈ ಪ್ರದರ್ಶನದಲ್ಲಿ ಮಾರಾಟಕ್ಕೆ ಲಭ್ಯ.
ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ ಕುಶಲಕರ್ಮಿಗಳು ತಯಾರಿಸಿರುವ ವಸ್ತುಗಳು, ಮೊಳಕಾಲ್ಮೂರು ಹಾಗೂ ಇಳಕಲ್ ಸೀರೆಗಳು, ಬಂಗಾಳದ ಜಾಮಾªನಿಗಳು, ತಂಗೈಲ್ ಸೀರೆ, ಉಪ್ಪಡ, ಪೋಚಂಪಳ್ಳಿ ಮತ್ತು ಒಡಿಶಾ ಇಕಾತ್‌ಗಳು, ಟುಸ್ಸಾರ್ ಸೀರೆಗಳೂ ಪ್ರದರ್ಶನದಲ್ಲಿರುತ್ತವೆ.
ಕಾಶ್ಮೀರ ಹಾಗೂ ಬಿಹಾರದ ನೇಯ್ಗೆದಾರರು ತಯಾರಿಸಿರುವ ಎಂಬ್ರಾಯರಿ ಡ್ರೆಸ್ ಮೆಟೀರಿಯಲ್‌ಗಳು ಪ್ರದರ್ಶನದ ಪ್ರಮುಖ ಆಕರ್ಷಣೆ. ಕೈಮಗ್ಗ ಬಟ್ಟೆಗಳು, ಗೃಹೋಪಾಲಂಕಾರಿಕ ವಸ್ತುಗಳು, ಪುರುಷರ ಉಡುಪುಗಳೂ ಲಭ್ಯವಿದ್ದು, ಮಹಿಳೆಯರ ಆಭರಣಗಳು, ಕರಕುಶಲ ಬ್ಯಾಗ್‌ಗಳು, ಸ್ಟೋಲ್‌ಗಳು, ದುಪಟ್ಟಾಗಳು ಪ್ರದರ್ಶನ ಸಂಗ್ರಹದಲ್ಲಿ ಇರಲಿವೆ.
ಎಲ್ಲಿ?: ಶಿಲ್ಪಕಲಾ ಮಂಟಪ, 9ನೇ ಕ್ರಾಸ್, ಜೆಪಿ ನಗರ, 3ನೇ ಹಂತ
ಯಾವಾಗ?: ಡಿ.16-19, ಬೆಳಗ್ಗೆ11-9
ಸಂಪರ್ಕ: 9885551541