Advertisement

ಆನ್‌ಲೈನ್‌ನಲ್ಲಿ ಸಿಗಲಿದೆ ಕೈಮಗ್ಗ ಸೀರೆ

05:07 PM Jul 22, 2019 | Suhan S |

ಪಾವಗಡ: ಗ್ರಾಮದ ಕೈ ಮಗ್ಗಗಳಲ್ಲಿ ಉತ್ಪತ್ತಿಯಾಗುವ ಗುಣಮಟ್ಟದ ರೇಷ್ಮೆ ಸೀರೆಗಳು ಆನ್‌ಲೈನ್‌ನಲ್ಲೂ ಲಭ್ಯವಾಗಲಿವೆ ಎಂದು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಎಸ್‌.ಯೋಗೇಶ್‌ ತಿಳಿಸಿದರು.

Advertisement

ವೈ.ಎನ್‌.ಹೊಸಕೋಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೈಮಗ್ಗ ಉತ್ಪನ್ನಗಳ ಆನ್‌ಲೈನ್‌ ಮಾರ್ಕೆಟಿಂಗ್‌ ಜಾಗೃತಿ ಶಿಬಿರದಲ್ಲಿ ಮಾತನಾಡಿದರು. ಮಾರುಕಟ್ಟೆ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ನೇಕಾರಿಕೆ ಬೆಳೆಯಬೇಕಿದೆ. ಅದಕ್ಕಾಗಿ ಸರ್ಕಾರದ ಪ್ರಾಯೋಜಕತ್ವದಲ್ಲಿ ‘ಅಲಂಕಾರಿ ಡಾಟ್ಕಾಂ’ ಜಾಲತಾಣ ಸೃಷ್ಟಿಸಿದ್ದು, ಅದರ ಮೂಲಕ ಅಪ್ಪಟ ಕೈಮಗ್ಗ ನೇಕಾರಿಕೆಯ ರೇಷ್ಮೆ ಸೀರೆ ಗ್ರಾಹಕರು ಖರೀದಿಸಬಹುದಾಗಿದೆ. ಇದರಿಂದ ನೇಕಾರರಿಗೆ ಮತ್ತು ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ರೇಷ್ಮೆ ಕೈ ಮಗ್ಗ ನೇಕಾರಿಕೆ ಮಾರುಕಟ್ಟೆ ಇಲ್ಲದ ಹೋದರೆ ಮುಂದಿನ ದಿನಗಳಲ್ಲಿ ಕಣ್ಮರೆಯಾಗಲಿದೆ. ಅದಕ್ಕಾಗಿ ನೇಕಾರರು ತಮ್ಮ ವೃತ್ತಿಯನ್ನು ಮುಂದಿನ ಪರಂಪರೆಗೂ ಕಲಿಸಬೇಕು. ಸೀರೆಯ ಗುಣಮಟ್ಟ ಕಾಪಾಡಲು ಸಿಲ್ಕ್ ಮಾರ್ಕ್‌ ಮತ್ತು ಹ್ಯಾಂಡ್‌ಲೂಮ್‌ ಮಾರ್ಕ್‌ ಪ್ರತಿಯೊಬ್ಬರೂ ಪಡೆಯಬೇಕು. ವೈ.ಎನ್‌.ಹೊಸಕೋಟೆಯನ್ನು ಪ್ರಥಮ ಕ್ಲಸ್ಟರಾಗಿ ಆಯ್ಕೆ ಮಾಡಿಕೊಂಡು ಆನ್‌ಲೈನ್‌ ವ್ಯಾಪಾರ ಪ್ರಾರಂಭಿಸಲಾಗುತ್ತಿದೆ. ಈ ಬಗ್ಗೆ ನೋಡಲ್ ಅಧಿಕಾರಿ ಸುರೇಶ್‌ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜವಳಿ ಇಲಾಖೆಯ ಅಪರ ನಿರ್ದೇಶಕ ಅನಂದ ಪಿತ್ತೂರು ಅಧ್ಯಕ್ಷತೆ ವಹಿಸಿ ದ್ದರು. ಉಪನಿರ್ದೇಶಕ ದಿನೇಶ್‌ ಒಟ್ಟಾರ್‌, ಜಿಲ್ಲಾ ಉಪನಿರ್ದೇಶಕ ವಿರೂಪಾಕ್ಷಪ್ಪ, ಪ್ರವರ್ಧ ನಾಧಿ ಕಾರಿಗಳಾದ ಪುಷ್ಪ ಅಮಿತ್‌, ಸ್ಥಳೀಯ ನೇಕಾರರ ಸಹಕಾರಿ ಸಂಘಗಳ ಕಾರ್ಯದರ್ಶಿ ಗಳಾದ ಪ್ರಭಾಕರ, ಸಿ.ಎ. ಬಾಲಾಜಿ, ವಿಜಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next