Advertisement

ಮತದಾರರ ಬೇಟೆಗೆ ಕೈ-ಕಮಲದ ಅಬ್ಬರ

11:54 AM Dec 07, 2021 | Team Udayavani |

ಕಲಬುರಗಿ: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು, ಮತದಾರರ ಬೇಟೆಗೆ ಬಿಜೆಪಿ-ಕಾಂಗ್ರೆಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ.

Advertisement

ಹಣವಂತ-ಗುಣವಂತ, ಬಡವ- ಶ್ರೀಮಂತ, ಮತದಾರರ ಸಮಸ್ಯೆ ಗೊತ್ತಿದ್ದವರು-ಗೊತ್ತಿಲ್ಲದವರು, ನಾವು ಗೆದ್ದರೆ ಮತದಾರರ ಬಳಿಗೆ, ಅವರು ಗೆದ್ದರೆ ಮನೆ ಎದುರು ಕಾಯುವುದು, ಸ್ಥಳೀಯ ಮತದಾರರಿಗೆ ಸ್ಪಂದಿಸದಿರುವುದು, ನಾವು ಸ್ಪಂದಿಸುತ್ತೇವೆ. ಹೀಗೆ ಕಾಂಗ್ರೆಸ್‌-ಬಿಜೆಪಿ ನಡುವೆ ವಾಕ್ಸಮರ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಹಾಲಿ ಸದಸ್ಯ ಬಿ.ಜಿ.ಪಾಟೀಲ ಅಭ್ಯರ್ಥಿ ಎಂಬುದು ಮೊದಲೇ ಗೊತ್ತಿತ್ತು. ಆದರೆ ಕಾಂಗ್ರೆಸ್‌ ಪಕ್ಷ ಅಳೆದು-ತೂಗಿ ಎಲ್ಲವನ್ನು ವಿಚಾರಿಸಿ ಕೊನೆಗೆ ಜಿಲ್ಲಾ ಪಂಚಾಯತ್‌ ವಿರೋಧ ಪಕ್ಷದ ಮಾಜಿ ನಾಯಕ ಶಿವಾನಂದ ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಕಾಂಗ್ರೆಸ್‌ ಪಕ್ಷ ನಾಮಕಾವಾಸ್ತೆ ಸ್ಪರ್ಧಿಸಿದೆ ಎಂದಿತ್ತು. ಆದರೆ ಕಾಂಗ್ರೆಸ್‌ ಪಕ್ಷ ಕೆಳಹಂತದಿಂದ ಅದರಲ್ಲೂ ಸಂಘಟನಾತ್ಮಕವಾಗಿ ಪ್ರಚಾರಕ್ಕೆ ಇಳಿದಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.

ಕಾಂಗ್ರೆಸ್‌ ಪಕ್ಷದಿಂದ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಮತದಾನ ಹಕ್ಕು ಕೊಟ್ಟಿದ್ದೇ ತಾವು ಹಾಗೂ ಕಳೆದ ಲೋಕಸಭೆ ಚುನಾವಣೆ ಸೋಲಿಗೆ ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸುವ ಮುಖಾಂತರ ತಕ್ಕ ಉತ್ತರ ನೀಡಿ ಎಂಬುದು ಹೇಳಿರುವುದು ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ.

ಬಿಜೆಪಿಯಿಂದ ಹಿರಿಯ ಸಚಿವರಾದ ಕೆ.ಎಸ್‌. ಈಶ್ವರಪ್ಪ, ಮುರುಗೇಶ ನಿರಾಣಿ ಹಾಗೂ ಇತರರು ಪ್ರಚಾರ ನಡೆಸಿದ್ದಾರೆ. ಇನ್ನುಳಿದಂತೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ| ಉಮೇಶ ಜಾಧವ ಹಾಗೂ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಚುನಾವಣೆ ಕಾವು ಇಮ್ಮಡಿಗೊಂಡಿದೆ.

ಬಹಿರಂಗ ಚರ್ಚೆಗೆ ಆಹ್ವಾನ

Advertisement

ಚುನಾವಣೆ ಸಂದರ್ಭದಲ್ಲಿ ಪರಸ್ಪರ ಆರೋಪ ಹಾಗೂ ಟೀಕೆಗಳು ಕೇಳಿಬರುವುದು ಸಹಜ. ಅಭಿವೃದ್ಧಿ ಕೆಲಸಗಳು ಹಾಗೂ ಅನುದಾನ ಹಂಚಿಕೆ ಕುರಿತಾಗಿ ಬಹಿರಂಗ ಚರ್ಚೆಗೆ ಸಿದ್ಧ ಎಂಬುದಾಗಿ ಬಿಜೆಪಿ ಅಭ್ಯರ್ಥಿ ಹಾಲಿ ಸದಸ್ಯ ಬಿ.ಜಿ. ಪಾಟೀಲ ಆಹ್ವಾನ ನೀಡಿದ್ದು, ಚುನಾವಣೆ ಅಖಾಡ ಮತ್ತಷ್ಟು ರಂಗೇರಿದೆ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next