Advertisement

ಕೈ-ಕಮಲ ನೇರಾನೇರ ಫೈಟ್‌

11:40 AM Feb 21, 2018 | |

ಕೊಪ್ಪಳ: ಬಿಸಿಲನಾಡು ಕೊಪ್ಪಳ ಜಿಲ್ಲೆಯಲ್ಲಿ ಚುನಾವಣಾ ಕಾವು ಭರ್ಜರಿ ರಂಗೇರಿದೆ. 2013ರಲ್ಲಿ ಕಳೆದುಕೊಂಡ ಕ್ಷೇತ್ರಗಳಲ್ಲಿ ಮತ್ತೆ ಕಮಲ ಅರಳಿಸಬೇಕು ಎಂದು ಬಿಜೆಪಿ ಸಜ್ಜಾಗಿ ನಿಂತಿದ್ದರೆ, ಕೈ ಕೋಟೆಗಳನ್ನೇ ಗಟ್ಟಿಗೊಳಿಸಲು ಕಾಂಗ್ರೆಸ್‌ ಪಣ ತೊಟ್ಟಿದೆ.

Advertisement

ಈ ಮಧ್ಯೆ ಪ್ರತಿ ಕ್ಷೇತ್ರದಲ್ಲೂ ಪ್ರಬಲ ಸಮುದಾಯದ ನಾಯಕರಿಗೆ ಜೆಡಿಎಸ್‌ ಗಾಳ ಹಾಕಿ ದೊಡ್ಡಾಟ ಆಡಲು ಸಜ್ಜಾಗಿದೆ. ಆದರೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾಳಗ ನೇರಾನೇರ ನಡೆದಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಲಿಂಗಾಯತರು, ಕುರುಬರು, ಮುಸ್ಲಿಮರು, ನಾಯಕ್‌ ಸಮು ದಾಯ ಸೇರಿದಂತೆ ಪರಿಶಿಷ್ಟ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿವೆ. 

ಕೊಪ್ಪಳ: ಇಲ್ಲಿ 20 ವರ್ಷ ಕರಡಿ-ಹಿಟ್ನಾಳ ಕುಟುಂಬವೇ ರಾಜಕಾರಣ ಮಾಡಿವೆ. ಬಿಜೆಪಿ, ಜೆಡಿಎಸ್‌, ಪಕ್ಷೇತರರಾಗಿ 4 ಬಾರಿ ಸಂಗಣ್ಣ ಕರಡಿ ಶಾಸಕರಾಗಿದ್ದರು. ಬಿಜೆಪಿಯಿಂದ ಸಂಗಣ್ಣ ಕರಡಿ ಅಥವಾ ಅವರ ಪುತ್ರ  ಅಮರೇಶ ಕರಡಿ,  ಸಿ.ವಿ.ಚಂದ್ರಶೇಖರ ಹೆಸರು ಪ್ರಮುಖ ವಾಗಿ ಕೇಳಿ ಬರುತ್ತಿವೆ. ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ಈ ಬಾರಿ ಕಣಕ್ಕಿಳಿಯಲು ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

ಜೆಡಿಎಸ್‌ನ ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಗಳ ಹೆಸರಿಲ್ಲ. ಜೆಡಿಎಸ್‌ನಿಂದ ಕರಿಯಪ್ಪ ಮೇಟಿ, ಪ್ರದೀಪಗೌಡ ಪಾಟೀಲ, ಕೆ.ಎಂ.ಸೆ„ಯದ್‌  ಪೈಪೋಟಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಇಲ್ಲಿ ನಿಲ್ತಾರೆ ಎನ್ನುವ ಗಾಳಿ ಮಾತಿದೆ. ಕೊಪ್ಪಳ ತವರು ಮನೆಯಿದ್ದಂತೆ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ.

ಗಂಗಾವತಿ: ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದ ಈ ಕ್ಷೇತ್ರದಲ್ಲಿ ಎಚ್‌.ಜಿ. ರಾಮುಲು ಕುಟುಂಬ ದರ್ಬಾರ್‌ ನಡೆಸಿತ್ತು. ಬಿಜೆಪಿಯಿಂದ  ಪರಣ್ಣ ಮುನವಳ್ಳಿ, ಎಚ್‌.ಆರ್‌. ಚನ್ನಕೇಶವ, ವಿರೂಪಾ ಕ್ಷಪ್ಪ ಸಿಂಗನಾಳ, ಶಿವರಾಮೇಗೌಡರ ಹೆಸರು ತೇಲಿ ಬಂದಿವೆ. ಜೆಡಿಎಸ್‌ನಲ್ಲಿ ಬಂಡಾಯವೆದ್ದು ಕೈ ಹಿಡಿದಿರುವ ಇಕ್ಬಾಲ್‌ ಅನ್ಸಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.  ಆದಾಗ್ಯೂ ಮಾಜಿ ಶಾಸಕ ಮಲ್ಲಿಕಾರ್ಜುನ ನಾಗಪ್ಪ ಟಿಕೆಟ್‌ ಪ್ರಯತ್ನದಲ್ಲಿದ್ದಾರೆ.

Advertisement

ಅನ್ಸಾರಿ ಆಟ ನಿಲ್ಲಿ ಸಲು ದೇವೇಗೌಡ್ರು ಭರ್ಜರಿ ಪ್ಲಾನ್‌ ಮಾಡಿ ದ್ದಾರೆ. ಕಾಂಗ್ರೆಸ್‌ ಖಜಾನೆಯಂತಿದ್ದ ಎಚ್‌.ಜಿ. ರಾಮುಲು ಕುಟುಂಬ ಹೋಳಾಗಿ ಜೆಡಿಎಸ್‌ನತ್ತ ವಾಲಿದೆ. ಎಚ್‌.ಆರ್‌. ಶ್ರೀನಾಥ್‌ ತೆನೆ ಹೊರಲು ಸಜ್ಜಾಗಿದ್ದರೆ, ಹೇರೂರು ವಿರೂಪಾ ಕ್ಷಪ್ಪ, ರಾಘವೇಂದ್ರ ಗಂಗಾವತಿ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ.  ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಿದ್ದ ಕಾರಣ ಜೆಡಿಎಸ್‌ ನಾಯಕ ಬಿ.ಎಂ. ಫಾರೂಖ್‌  ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಮಾತಿದೆ.

ಯಲಬುರ್ಗಾ: ಉನ್ನತ ಸಚಿವರಾಗಿರುವ ಬಸವರಾಜ ರಾಯರಡ್ಡಿ ಈ ಕ್ಷೇತ್ರದ ಶಾಸಕರಾಗಿದ್ದು, ಯಾವಾಗಲೂ ರಾಯಲ್‌ ದಾಳ ಉರುಳಿಸುತ್ತಲೇ ಬಂದಿದ್ದಾರೆ. ಈ ಬಾರಿ ಕಣಕ್ಕಿಳಿಯಲು ಸಜ್ಜಾಗು ತ್ತಿದ್ದಂತೆ ರಾಯರಡ್ಡಿಗೆ ಕ್ಷೇತ್ರದಲ್ಲಿ ಪಕ್ಷದೊಳಗೇ ವಿರೋಧಿ  ಅಲೆ ಕಾಣಿಸಿಕೊಂಡಿದೆ. ಬಿಜೆಪಿಯಿಂದ ಹಾಲಪ್ಪ ಆಚಾರ್‌ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.   ಜೆಡಿಎಸ್‌ನಿಂದ ವೀರನಗೌಡ ಪಾಟೀಲ್‌  ಹೆಸರು ಘೋಷಣೆಯಾಗಿದೆ.

ಕುಷ್ಟಗಿ: ಇಲ್ಲಿ ಒಮ್ಮೆ ಗೆದ್ದವರು ಮತ್ತೂಮ್ಮೆ ಗೆಲುವು ಸಾಧಿ ಸಿದ ಉದಾಹರ ಣೆಯಿಲ್ಲ. 2013ರಲ್ಲಿ ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ ಗೆದ್ದು ಶಾಸಕರಾಗಿ ದ್ದಾರೆ. ಈ ಬಾರಿ ಅವರೇ ಕಣಕ್ಕಿಳಿ ಯುವುದು ಪಕ್ಕಾ ಆಗಿದೆ. ಕೆ.ಶರಣಪ್ಪ ಸೇರ್ಪಡೆಯಿಂದ ಕಮಲಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಕಾಂಗ್ರೆಸ್‌ನಿಂದ  ಅಮರೇಗೌಡ ಬಯ್ನಾಪುರ ಕಣಕ್ಕಿಳಿಯ ಲಿದ್ದಾರೆ. ಅಚ್ಚರಿ ಬೆಳವಣಿಗೆಯಲ್ಲಿ ಜೆಡಿಎಸ್‌ನಿಂದ ಪ್ರೊ.ಎಚ್‌.ಸಿ.ನೀರಾವರಿ ಅವರ ಹೆಸರನ್ನು ಪ್ರಕಟಿಸಲಾಗಿದೆ.

ಕನಕಗಿರಿ: ಲಕ್ಕಿ ಸ್ಟಾರ್‌ ಎಂಬಂತೆ ಶಿವರಾಜ ತಂಗಡಗಿ 2 ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ- ಕಾಂಗ್ರೆಸ್‌ ಸರ್ಕಾರದಲ್ಲೂ ಸಚಿವ ರಾಗಿದ್ದು ನಾನಾ ಕಾರಣಕ್ಕೆ ಸಚಿವ ಸ್ಥಾನ ಕಳೆದುಕೊಂಡರು. ಹ್ಯಾಟ್ರಿಕ್‌ ಜಯಕ್ಕಾಗಿ ಕಣಕ್ಕಿಳಿಯಲಿದ್ದಾರೆ. ಆದರೆ, ಕನಕಗಿರಿ- ಕಾರಟಗಿ ತಾಲೂಕು ರಚನೆ ವಿಚಾರದಲ್ಲಿ ಅವರು ಮೆತ್ತಗಾಗಿದ್ದಾರೆ.

2013ರಲ್ಲಿ ತಂಗಡಗಿ ವಿರುದ್ದ ಕಡಿಮೆ ಅಂತರದಲ್ಲಿ ಸೋತಿದ್ದ ಬಸವರಾಜ ದಡೆಸೋರು ಮತ್ತೆ ಬಿಜೆಪಿಯಿಂದ ಸಜ್ಜಾಗಿದ್ದಾರೆ. ಬಿಎಸ್‌ವೈ ಸಹಿತ ಬಸವರಾಜ ಹೆಸರು ಘೋಷಿಸಿದ್ದು, ಮುಕುಂದರಾವ್‌ ಭವಾನಿಮಠನಲ್ಲಿ ಇರುಸು ಮುರುಸು ತಂದಿದೆ. ಗಾಯತ್ರಿ ತಿಮ್ಮಾರಡ್ಡಿ ಕೂಡಾ  ಪೈಪೋಟಿಯಲ್ಲಿದ್ದಾರೆ.  ಜೆಡಿಎಸ್‌ನಿಂದ ಮಂಜುಳಾ  ಹೆಸರು ಅಂತಿಮಗೊಂಡಿದೆ. 

* ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next