Advertisement

ಚಾಲುಕ್ಯರ ನಾಡಲ್ಲಿ ಕೈ, ಕಮಲ ಬಲ ಪ್ರದರ್ಶನ 

06:00 AM Apr 25, 2018 | Team Udayavani |

ಬಾಗಲಕೋಟೆ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಬಲ ಪ್ರದರ್ಶನ ನಡೆಸಿದವು. 

Advertisement

ಬಿ.ಶ್ರೀರಾಮುಲು ಅವರು ಬಾದಾಮಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ ಮೂಲಕ ಆಗಮಿಸಿದರು. ಬಳಿಕ ಚಾವಡಿ ಹನಮಪ್ಪನ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದರು. ಅಲ್ಲಿಂದ ತಹಶೀಲ್ದಾರ್‌ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಬಳಿಕ ರೋಡ್‌ ಶೋ ನಡೆಸಿದರು. ಈ ಮಧ್ಯೆ, ಮಧ್ಯಾಹ್ನ 2.20ಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಬಳಿಕ, ಅಲಂಕೃತ ವಾಹನದಲ್ಲಿ ಬೃಹತ್‌ ರೋಡ್‌  ಶೋ ನಡೆಸಿದರು. ಸಚಿವರಾದ ಎಚ್‌.ಎಂ. ರೇವಣ್ಣ, ಆರ್‌.ಬಿ. ತಿಮ್ಮಾಪುರ, ಎಂ.ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ ಹಾಗೂ ಇತರ ನಾಯಕರು ಸಾಥ್‌ ನೀಡಿದರು. ಸುಮಾರು 2 ಗಂಟೆಗಳ ಕಾಲ ರೋಡ್‌ ಶೋ ನಡೆಯಿತು.

ಯಡಿಯೂರಪ್ಪ ಎಲ್ಲದರಲ್ಲೂ ವೀಕ್‌
ಬಿಎಸ್‌ವೈದು ಕುಟುಂಬ ರಾಜಕಾರಣವಲ್ಲವೇ?: ಸಿಎಂ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮಗನಿಗೆ ಟಿಕೆಟ್‌ ಕೊಡಿಸುವುದರಲ್ಲಿ ಮಾತ್ರವಲ್ಲ, ಎಲ್ಲದರಲ್ಲೂ ವೀಕ್‌ ಆಗಿದ್ದಾರೆ. ಕಳಂಕಿತ ವ್ಯಕ್ತಿಯಾಗಿರುವ ಅವರಿಗೆ ಸಾರ್ವಜನಿಕವಾಗಿ ಯಾವುದೇ ಮೌಲ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕುಟುಂಬ ರಾಜಕೀಯ ಮಾಡಲ್ಲ ಎಂದು ಶಪಥಗೈದಿದ್ದ ಯಡಿಯೂರಪ್ಪಈಗ ಮಾಡುತ್ತಿರುವುದು ಏನು? ಬಿ.ವೈ.ರಾಘವೇಂದ್ರ ಯಾರ ಮಗ? ಆತ ಅಪ್ಪನ ಮಗನೋ ಅಥವಾ ಅಮ್ಮನ ಮಗನೋ?. ಬಿ.ವೈ.ರಾಘವೇಂದ್ರಗೆ ಬಿಜೆಪಿ ಟಿಕೆಟ್‌ ನೀಡಿ ಸಂಸದರು, ಶಾಸಕರನ್ನಾಗಿ ಮಾಡಿರುವುದು ವಂಶ ಪಾರಂಪರ್ಯ ಅಲ್ಲವೇ?’ ಎಂದು ಟೀಕಿಸಿದರು. 

ಮೈಸೂರು ಭಾಗದಲ್ಲಿ ಬಿಜೆಪಿ ಎಲ್ಲಿದೆ? 
ಆಕಾಶದಿಂದ ಬರೋದಕ್ಕೆ ಸಾಧ್ಯವಾ? ಮೈಸೂರು, ಚಾಮರಾಜನಗರದಲ್ಲಿ ಬಿಜೆಪಿ ಒಂದೂ ಸ್ಥಾನ ಗೆದ್ದಿಲ್ಲ. ಹೀಗಾಗಿ ಬಿಜೆಪಿಗೆ ಈ ಭಾಗದಲ್ಲಿ ಅಸ್ತಿತ್ವವಿಲ್ಲ. ಬಿಜೆಪಿ ಪರ ಜನರ ಒಲವಿಲ್ಲ, ಅವರದ್ದು ಬರೀ ನಾಟಕ. ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಾರೇ ನಿಂತರೂ ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ. ನಾನು ಎಲ್ಲರನ್ನೂ ಎದುರಿಸಲು ಸಿದಟಛಿನಿದ್ದೇನೆ. ಚುನಾವಣೆ ಸಮೀಕ್ಷೆಯಲ್ಲಿ ಶೇ.30 ಜನ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ. ಇದು ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬ ಅರ್ಥವಾಗಿದ್ದು, ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಯತೀಂದ್ರಗೆ ವೀರಶೈವ,ಲಿಂಗಾಯತರ ಬೆಂಬಲ
ಮೈಸೂರು: ನಗರದಲ್ಲಿ ನಡೆದ ವರುಣಾಕ್ಷೇತ್ರದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಯತೀಂದ್ರ ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಮುಖಂಡರು ಒಕ್ಕೊರಲಿನಿಂದ ಘೋಷಿಸಿದರು. ಯಡಿಯೂರಪ್ಪ, ವಿಜಯೇಂದ್ರ ನಮಗೆ  ಗೊತ್ತಿಲ್ಲ, ಕ್ಷೇತ್ರದಲ್ಲಿ ವೀರಶೈವ- ಲಿಂಗಾಯತರ ಗ್ರಾಮಗಳಿಗೆ 300 ಕೋಟಿ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದೀರಿ, ಆದ್ದರಿಂದ ನೀವೇ ನಮ್ಮ ನಾಯಕರು ಎಂದು ಮುಖಂಡರು ಹೇಳಿದರು.

ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, 16 ಗ್ರಾಮದಲ್ಲಿ 20 ಕೋಟಿ ರೂ. ಖರ್ಚು ಮಾಡಿ ಕಾಂಕ್ರೀಟ್‌ ರಸ್ತೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ.90 ಮತಗಳನ್ನು ಬಿಜೆಪಿಗೆ ಹಾಕಿದ ಗ್ರಾಮದ ಅಭಿವೃದಿಟಛಿಗೂ ಕೋಟಿಗಟ್ಟಲೆ ಹಣ
ನೀಡಿದ್ದೀರಿ, ನಮ್ಮ ಕೆಲಸ ಮಾಡಿರುವ ಸಿದ್ದರಾಮಯ್ಯ, ಮಹದೇವಪ್ಪ, ಡಾ.ಯತೀಂದ್ರರವರೇ ನಮ್ಮ ನಾಯಕರು. ನಮ್ಮ ಸಮಾಜ ಯಾವಾಗಲೂ ನಿಮ್ಮ ಬೆಂಬಲಕ್ಕೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತೊರೆದು ಹಲವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next