ಕುಷ್ಟಗಿ: ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಶ್ರೀ ಈಶ್ವರ ದೇವಸ್ಥಾನದಲ್ಲಿ 23ನೇ ದೊಡ್ಡ ಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದೇವೇಂದ್ರಪ್ಪ ಹಿಟ್ನಾಳ ಮಾತನಾಡಿ, ಕೊಪ್ಪಳ ಜಿಲೆಯ ಪೌಷ್ಟಿಕತೆ ಕೊರತೆಯ ಹಿನ್ನೆಲೆಯಲ್ಲಿ ಗರ್ಭಿಣಿಯರಲ್ಲಿ ರಕ್ತ ಹೀನತೆ ಪ್ರಕರಣಗಳು ಹೆಚ್ಚುತ್ತಿವೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪ್ರಾರಂಭವಾದಾಗಿನಿಂದ ರಕ್ತದ ಕೊರತೆ ನೀಗಿದೆ. ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತ ಅವಶ್ಯವಾಗಿದ್ದು, ಸಕಾಲದಲ್ಲಿ ರಕ್ತ ದೊರೆತರೆ ಬಾಣಂತಿ, ಮಗು ಬದುಕಿಸಲು ಸಾಧ್ಯವಿದೆ ಎಂದರು.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಕೇವಲ ದಾನರೂಪದಲ್ಲಿ ಪಡೆಯಲು ಸಾಧ್ಯ. ಹೀಗಾಗಿ ರಕ್ತದಾನ ಜೀವನದ ಅತ್ಯಂತ ಪುಣ್ಯದ ಕೆಲಸ ಒಂದು ರೀತಿಯ ಜೀವದಾನವೂ ಹೌದು ಎಂದರು. ರಕ್ತವನ್ನು ಎಲ್ಲಾ ಆರೋಗ್ಯವಂತರು ದಾನ ಮಾಡಬಹುದಾಗಿದೆ. ದೇಹವು ಲವವಿಕೆಯಿಂದ ಕೂಡಿರಲು ಸಾಧ್ಯವಿದ್ದು, ಹೊಸ ರಕ್ತ ಸಂಗ್ರಹಣೆ, ಜ್ಞಾಪಕ ಶಕ್ತಿ ವೃದ್ಧಿಸುವ ಜೊತೆಗೆ ಉತ್ತಮ ಆರೋಗ್ಯ ಲಭಿಸಲಿದ್ದು, ರಕ್ತದಾನ ಮಾಡಿದರೆ ಹೃದಯಾಘಾತ ತಡೆಯಬಹುದಾಗಿದೆ. ಯುವಕರು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ದೊಡ್ಡಪ್ಪ ರಸರಡ್ಡಿ, ಮಲ್ಲಿಕಾರ್ಜುನ ಲಿಂಗದಳ್ಳಿ, ಅಮರೇಗೌಡ ಪಾಟೀಲ, ಬಸವರಾಜ್ ಲಿಂಗದಳ್ಳಿ, ರಾಜಶೇಖರ ಪಾಟೀಲ ಮತ್ತಿತರಿದ್ದರು.