Advertisement

ಬಸ್‌ ಮುಖಾಮುಖೀ ಡಿಕ್ಕಿ: 68ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

07:48 PM Jul 03, 2022 | Team Udayavani |

ಹಾನಗಲ್ಲ: ತಾಲೂಕಿನ ಬೈಚವಳ್ಳಿ-ಚಿನ್ನಳ್ಳಿತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖಾಮುಖೀ ಡಿಕ್ಕಿ ಹೊಡೆದಪರಿಣಾಮ ಎರಡೂ ಬಸ್‌ಗಳಲ್ಲಿಪ್ರಯಾಣಿಸುತ್ತಿದ್ದ ಒಟ್ಟು 68ಕ್ಕೂ ಹೆಚ್ಚುಪ್ರಯಾಣಿಕರು ಗಾಯಗೊಂಡ ಘಟನೆಶನಿವಾರ ಬೆಳಗ್ಗೆ ನಡೆದಿದೆ.
ಶನಿವಾರ ಬೆಳಗ್ಗೆ ಹಾನಗಲ್‌ನಿಂದಬಮ್ಮನಹಳ್ಳಿಗೆ ಚಲಿಸುತ್ತಿದ್ದ ಬಸ್‌ ಹಾಗೂದಶರಥಕೊಪ್ಪದಿಂದ ಹಾನಗಲ್ಲಿಗೆಚಲಿಸುತ್ತಿದ್ದ ಬಸ್‌ಗಳ ಮಧ್ಯ ಈಅಪಘಾತ ಸಂಭವಿಸಿದೆ. ಶನಿವಾರಬೆಳಗಿನ ಶಾಲೆ ಇರುವುದರಿಂದಹಾನಗಲ್ಲ ಮತ್ತು ಅಕ್ಕಿಆಲೂರಿನಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿಅಪಘಾತದಲ್ಲಿ ಗಾಯಗೊಂಡಿದ್ದಾರೆ.

Advertisement

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಸಂಭವಿಸಿಲ್ಲ. ಬಸ್‌ ಚಾಲಕ ಸೇರಿದಂತೆಒಟ್ಟು 14 ಜನರನ್ನು ಹಾವೇರಿಯಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಒಬ್ಬರಿಗೆ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆದಾಖಲಿಸಿದ್ದಾರೆ. ಇನ್ನುಳಿದವರಿಗೆಹಾನಗಲ್‌ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗಿದೆ. ಎರಡೂ ಬಸ್‌ನ ಡ್ರೈವರ್‌ಗಳಿಗೆ ಗಂಭೀರ ಗಾಯಗಳಾಗಿವೆ.ಘಟನಾ ಸ್ಥಳಕ್ಕೆ ಹಾನಗಲ್ಲ ಪೊಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next