Advertisement

ಶೃಂಗೇರಿ ಶಾರದಾಂಬೆಗೆ ಹಂಸವಾಹನ ಅಲಂಕಾರ

11:11 PM Sep 29, 2019 | Lakshmi GovindaRaju |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿದ್ದು, ನವರಾತ್ರಿಯ ಮೊದಲ ದಿನವಾದ ಭಾನುವಾರ ಶಾರದಾಂಬೆಗೆ ಹಂಸವಾಹನಾಲಂಕಾರ ಮಾಡಲಾಗಿತ್ತು. ತಾಯಿ ಶಾರದೆ ಕೈಯಲ್ಲಿ ಕಮಂಡಲ, ಪುಸ್ತಕ, ಪಾಶ, ಅಕ್ಷರಮಾಲೆ ಮತ್ತು ಚಿನ್ಮುದ್ರೆ ಧರಿಸಿ, ಹಂಸವಾಹನರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು.

Advertisement

ಶಾರದಾ ಪ್ರತಿಷ್ಠೆ: ಶಾರದಾ ಪ್ರತಿಷ್ಠೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಗ್ಗೆ ಶಾರದಾ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿಗಳು ನಡೆದವು. ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು ಗುರುಭವನದಿಂದ ಆಗಮಿಸಿ, ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ನೀಡಿದರು. ನಂತರ, ಕಿರಿಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ತೆಪ್ಪದ ಮೂಲಕ ತುಂಗಾ ನದಿಯನ್ನು ದಾಟಿ, ಗಂಗಾ ಪೂಜೆ ನೆರವೇರಿಸಿದರು. ನಂತರ, ಮಠದ ಎಲ್ಲಾ ದೇಗುಲಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಶಾರದಾ ಸನ್ನಿ ಧಿಯಲ್ಲಿ ಶ್ರೀಸೂಕ್ತ, ದೇವಿ ಸೂಕ್ತ, ಸಪ್ತಶತಿ ಪಾರಾಯಣ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next