ಹೌದು! ಎರಡು ಬೋಗಿವುಳ್ಳ ಡೀಸೆಲ್ ರೈಲು ಮಾದರಿಯ ವಾಹನದಲ್ಲಿ ಕುಳಿತು ಪ್ರಸಿದ್ಧ ಸ್ಮಾರಕ ದರ್ಶನ ಪಡೆಯುವ ಭಾಗ್ಯ ಇದೀಗ ಪ್ರವಾಸಿಗರಿಗೆ ದೊರೆತಿದೆ. ಈ ಮೂಲಕ ಬಹುದಿನದ “ಹಂಪಿ ಆನ್ ವ್ಹೀಲ್ಸ್’ ಯೋಜನೆ ಸಾಕಾರಗೊಂಡಿದೆ.
Advertisement
ಹಂಪಿ ವಿಶ್ವ ಪರಂಪರೆ ಪ್ರದೇಶಾಭಿವೃದ್ಧಿ ನಿರ್ವಾಹಣಾ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರು ಮೂಲದ ಪ್ರಿವಲೆನ್ಸ್ ಗ್ರೀನ್ ಸಲ್ಯೂಶನ್ ಸಂಸ್ಥೆ ಎರಡು ಬೋಗಿವುಳ್ಳ ಡೀಸೆಲ್ ರೈಲನ್ನು ಹಂಪಿಯಲ್ಲಿ ಓಡಾಡಿಸುತ್ತಿದೆ.
ಕಡಲೆ ಕಾಳು ಗಣಪ, ಸಾಸಿವೆ ಕಾಳು ಗಣಪ,ಶ್ರೀಕೃಷ್ಣ ದೇಗುಲ, ಬಡವಿ ಲಿಂಗ, ಉಗ್ರ ನರಸಿಂಹ, ಹಜಾರ ರಾಮ ದೇಗುಲ, ಉದ್ದಾನ
ವೀರಭದ್ರೇಶ್ವರ ದೇಗುಲ, ನೆಲಸ್ತರದ ಶಿವ ದೇಗುಲ, ಕಮಲ ಮಹಲ್, ಆನೆಲಾಯ,ಮಹಾನವಮಿ ದಿಬ್ಬ, ರಾಣಿಯರ ಸ್ನಾನಗೃಹದಿಂದ
ಗೆಜ್ಜಲ ಮಂಟಪದವರೆಗೆ ಸಾಗಲಿದೆ. ಗೆಜ್ಜಲ ಮಂಟಪದಿಂದ ವಿಜಯ ವಿಠಲ, ಕಲ್ಲಿನತೇರು, ಪುರಂದರದಾಸರ ಮಂಟಪಗಳನ್ನು ಬ್ಯಾಟರಿ
ಚಾಲಿತ ವಾಹನದಲ್ಲಿ ತೆರಳಿ ನೋಡುವ ವ್ಯವಸ್ಥೆ ಕೂಡ ಮಾಡಲಾಗಿದೆ. ಇದಕ್ಕಾಗಿ ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ಕಾಯ್ದಿರಿಸಲಾಗಿದೆ. ಇದನ್ನೂ ಓದಿ:ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಜಾರಿ
Related Articles
ಶ್ರೀ ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಟಿಕೆಟ್ ಕೌಂಟರ್ ತೆರೆಯಲಾಗಿದ್ದು, ಎರಡು ಬೋಗಿಯ ರೈಲಿನಲ್ಲಿ 20 ಜನರು ಕುಳಿತು ತೆರಳಬಹುದು. 18 ವರ್ಷ ಮೇಲ್ಪಟ್ಟವರಿಗೆ ತಲಾ ಒಬ್ಬರಿಗೆ 354 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಇನ್ನೂ 5 ವರ್ಷದೊಳಗಿನ ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು. 6 ವರ್ಷದಿಂದ 17 ವರ್ಷದ ಮಕ್ಕಳಿಗೆ ತಲಾ 177 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ನಿತ್ಯ ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳುವ ರೈಲು ಪ್ರಯಾಣ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇಗುಲದ ದರ್ಶನಕ್ಕೆ ಇದೇ ಸಂಸ್ಥೆ ಭಕ್ತರಿಗೆ ರೈಲಿನ ವ್ಯವಸ್ಥೆ ಕಲ್ಪಿಸಿದೆ. ಇನ್ನೂ ಬೆಂಗಳೂರಿನ ಲಾಲ್‌ಬಾಗ್‌ನಲ್ಲೂ ಸದ್ಯದಲ್ಲೇ ಚುಕುಬುಕು ರೈಲಿನ ವ್ಯವಸ್ಥೆ ಮಾಡಲಿದೆ.ಈಗ ಹಂಪಿಯಲ್ಲಿ ಚುಕುಬುಕು ರೈಲಿನ ವ್ಯವಸ್ಥೆ ಕಲ್ಪಿಸಿದ್ದು, ಪ್ರವಾಸಿಗರು ಹರ್ಷಿತರಾಗಿದ್ದಾರೆ.
Advertisement