Advertisement

ಹಂಪಿ ಸ್ಮಾರಕ ಧ್ವಂಸ: ನಾಲ್ವರ ಬಂಧನ

12:48 AM Feb 08, 2019 | Team Udayavani |

ಬಳ್ಳಾರಿ: ಐತಿಹಾಸಿಕ ಹಂಪಿಯ ಸ್ಮಾರಕಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಆಧರಿಸಿ ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ ಎಂದು ಎಸ್‌ಪಿ ಅರುಣ್‌ ರಂಗರಾಜನ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯುಷ್‌ ಸಾಹು, ರಾಜಬಾಬು, ರಾಜ್‌ ಆರ್ಯನ್‌, ರಾಜೇಶ ಚೌಧರಿ ಬಂಧಿತರು. ಇವರಲ್ಲಿ ಮೂವರು ಬಿಹಾರ ಹಾಗೂ ಮತ್ತೂಬ್ಬ ಮಧ್ಯಪ್ರದೇಶ ಮೂಲದವ. ಈ ಪೈಕಿ ಒಬ್ಬ ಸಾಫ್ಟ್‌ವೇರ್‌ ಇಂಜಿನಿಯರ್‌, ಮತ್ತೂಬ್ಬ ಎಚ್ಎಎಲ್‌ ಉದ್ಯೋಗಿ, ಇನ್ನೊಬ್ಬ ಆರ್‌ಆರ್‌ಬಿ ಪರೀಕ್ಷೆ ಬರೆಯಲು ಬಳ್ಳಾರಿಗೆ ಆಗಮಿಸಿದ್ದ ಹಾಗೂ ಮತ್ತೂಬ್ಬ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಿದರು.

ಹಂಪಿ ವೀಕ್ಷಣೆಗೆಂದು ಇತ್ತೀಚೆಗೆ ಐವರ ಗುಂಪು ಆಗಮಿಸಿತ್ತು. ಇವರಲ್ಲಿ ಒಬ್ಬ ಸ್ಮಾರಕಗಳನ್ನು ವೀಕ್ಷಿಸಲೆಂದು ಹಂಪಿಯಲ್ಲೇ ಸುತ್ತಾಡಿದ್ದಾನೆ. ಉಳಿದ ನಾಲ್ವರಲ್ಲಿ ಮೂವರು ಕಂಬಗಳನ್ನು ಉರುಳಿಸಿದರೆ, ಮತ್ತೂಬ್ಬ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಈ ವಿಡಿಯೋ ಆಧರಿಸಿ ತನಿಖೆ ನಡೆಸಿದಾಗ ಬೆಂಗಳೂರಿನಲ್ಲಿ ಇಬ್ಬರನ್ನು, ಹೈದ್ರಾಬಾದ್‌ನಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಮಧ್ಯಪ್ರದೇಶ ಮೂಲದ ಆರೋಪಿಗೆ ತಾನಾಗಿಯೇ ಶರಣಾಗುತ್ತೀಯಾ? ಅಥವಾ ನಾವಾಗಿ ಬಂಧಿಸಬೇಕಾ ಎಂಬ ಸಂದೇಶವನ್ನು ಮೊದಲು ಕಳುಹಿಸಲಾಗಿತ್ತು. ಬಳಿಕ ಆತನನ್ನೂ ಬಂಧಿಸಲಾಯಿತು. ತನಿಖೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next