Advertisement
ಕನ್ನಡ ವಿವಿಯ ಈಗಿನ ಕಾರ್ಯವೈಖರಿ ಬಗ್ಗೆ ಹೊರಗಿನವರು ಹೇಳುವುದಕ್ಕಿಂತ ಸ್ವತಃ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘವೇ ಈ ಕುರಿತು ಚಕಾರವೆತ್ತಿದೆ.
Related Articles
Advertisement
ಇದರಿಂದ ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಬಂದಿದ್ದ ದೂರಶಿಕ್ಷಣ ನಿರ್ದೇಶನಾಲಯವೂ ಮಾನ್ಯತೆ ಕಳೆದುಕೊಳ್ಳುವಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಈ ಪತ್ರದಲ್ಲಿ ಕನ್ನಡ ವಿವಿ ನಿವೃತ್ತ ನೌಕರರ ಉಪಲಬ್ದಿಗಳ ಮೊತ್ತ ಪಾವತಿ, ಮರಣ ಹೊಂದಿದ ನೌಕರರ ಕುಟುಂಬಕ್ಕೆ ಅನುಕಂಪದ ನೌಕರಿ, ಸಹ ಪ್ರಾಧ್ಯಾಪಕರ ಮುಂಬಡ್ತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ನೇಮಕಾತಿ ಮುಂದೂಡಲು ಒತ್ತಾಯ: ಈ ನಡುವೆ ಅಧ್ಯಾಪಕರ ಸಂಘದಿಂದ ನ. 12ರಂದು ಕನ್ನಡ ವಿವಿ ಕುಲಸಚಿವ ಡಾ| ಸುಬ್ಬಣ್ಣ ರೈ ಅವರಿಗೆ ಮನವಿಪತ್ರ ಕೂಡ ಸಲ್ಲಿಸಲಾಗಿದೆ. ಕನ್ನಡ ವಿವಿ 2021ರ ಸೆಪ್ಟೆಂಬರ್ 3ರಂದು ಬೋಧಕ ಹುದ್ದೆಗಳ ನೇಮಕಾತಿಗೆ ಅಧಿ ಸೂಚನೆ ಪ್ರಕಟಿಸಿದ್ದು, ಸರ್ಕಾರದ ನಿಯಮದನ್ವಯ ಶೇ. 50ರ ನೇರ ಮೀಸಲಾತಿ ಮತ್ತು ಸಮತಲ ಮೀಸಲಾತಿ ಹಾಗೂ ಶೇ. 33 ಮಹಿಳಾ ಮೀಸಲಾತಿ ರೋಸ್ಟರ್ ಪಾಲನೆಯಾಗಿರುವುದಿಲ್ಲ. ಜೊತೆಗೆ ಯುಜಿಸಿ 2018ರ ನಿಯಮದಂತೆ ನೇಮಕಾತಿ ಪರೀಕ್ಷೆ ನಡೆಸಲು ಅವಕಾಶ ಇರುವುದಿಲ್ಲ. ಅದಕ್ಕೆ ಸಂಬಂಸಿದ ಕನ್ನಡ ವಿಶ್ವವಿದ್ಯಾಲಯ ಅ ಧಿನಿಯಮ 1991ರ ಅಡಿ ನೇಮಕಾತಿ ಪರಿನಿಯಮವು ಪ್ರಕಟವಾಗಿರುವುದಿಲ್ಲ. ಇಷ್ಟೆಲ್ಲ ಕ್ರಮಲೋಪಗಳಿದ್ದರೂ ನ. 15ರಂದು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ಈಗ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ತಕ್ಷಣ ಈ ಪ್ರಕ್ರಿಯೆ ನಿಲ್ಲಿಸಲು ಕೈಗೊಳ್ಳುವಂತೆ ಒತ್ತಾಯಿಸಿದೆ.
ಪರೀಕ್ಷೆ ಮುಂದೂಡಿಕೆ : ಹಂಪಿ ಕನ್ನಡ ವಿವಿಯ ಬೋಧಕ ಹುದ್ದೆಗಳ ನೇಮಕಾತಿಗೆ ನ. 15ರಂದು ಲಿಖೀತ ಪರೀಕ್ಷೆ ನಿಗದಿಯಾಗಿತ್ತು. ಕಾರಣಾಂತರದಿಂದ ನೇಮಕಾತಿ ಹುದ್ದೆಗಳ ಲಿಖೀತ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕವನ್ನು ನಂತರದಲ್ಲಿ ಪ್ರಕಟಿಸಲಾಗುವುದು ಎಂದು ಕುಲಸಚಿವ ಡಾ| ಸುಬ್ಬಣ್ಣ ರೈ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಕೋವಿಡ್ ಹಿನ್ನೆಲೆ ಹಂಪಿ ಕನ್ನಡ ವಿವಿಯಲ್ಲಿ ಆರ್ಥಿಕ ಸಂಕಷ್ಟ ನಡುವೆಯೂ ಮಹನೀಯರ ಜಯಂತಿಗಳನ್ನೇ ವಿಚಾರ ಸಂಕಿರಣಗಳನ್ನಾಗಿಸಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ವಿವಿಯಲ್ಲಿ ಸದ್ಯ ವಿದ್ಯುತ್ ಬಿಲ್ ಪಾವತಿಗೂ ಹಣವಿಲ್ಲ. ಹಾಗಾಗಿ ಅಕಾಡೆಮಿಕ್‌ಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ನೇಮಕಾತಿಯನ್ನು ನಿಯಮಾನುಸಾರ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಲೋಪವಿಲ್ಲ. ನಿಯಮಗಳ ಪಾಲನೆ ಮಾಡಲಾಗುತ್ತಿದೆ. ∙ಡಾ| ಸ.ಚಿ. ರಮೇಶ, ಹಂಪಿ ಕನ್ನಡ ವಿವಿ ಕುಲಪತಿ