Advertisement

ಹಂಪಿ ಉತ್ಸವ: ಹೆಸರು ಬದಲಾವಣೆಗೆ ಮನವಿ

02:32 PM Dec 21, 2019 | Suhan S |

ಹೊಸಪೇಟೆ: ಹಂಪಿ ಉತ್ಸವದ ಹೆಸರನ್ನು ಬದಲಾಯಿಸಿ ವಿಜಯನಗರ ಹಂಪಿ ಉತ್ಸವವೆಂದು ಮರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ನಗರದ ವಿಜಯನಗರ ಯುವಕರ ಬಳಗದ ಪದಾಧಿಕಾರಿಗಳು, ಸಹಾಯಕ ಆಯುಕ್ತ ಶೇಖ್‌ ತನ್ವೀರ್‌ ಆಸೀಪ್‌ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ.

Advertisement

ವಿಜಯನಗರ ಸಂಸ್ಥಾಪಕರಾದ ಹಕ್ಕಬುಕ್ಕರ ಹೆಸರನ್ನು ಮುಖ್ಯವೇದಿಕೆಗೆ ಇಡಬೇಕು. ಗಂಡುಗಲಿ ಕುಮಾರರಾಮ ಯುವ ವೇದಿಕೆಯನ್ನು ಸ್ಥಾಪಿಸಬೇಕು. ಹಂಪಿ ಉತ್ಸವವನ್ನು ಮೂರು ದಿನಗಳ ಕಾಲ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು. ಸ್ಥಳೀಯ ಗ್ರಾಮೀಣ ಕ್ರೀಡೆಗಳಾದ ಬಂಡಿ ಸ್ಪರ್ಧೆ, ಎತ್ತಿನ ಬಂಡಿ ಮೆರವಣೆಗೆ, ಕುಸ್ತಿ, ಗುಂಡು ಕಲ್ಲು ಎತ್ತುವ ಸ್ಪರ್ಧೆ, ಬಂಡಿ ಗಾಲಿ ಜೋಡಿಸುವ ಸ್ಪರ್ಧೆ, ಮೂಟೆ ಎತ್ತುವ ಸ್ಪರ್ಧೆ, ಮಹಿಳೆ ಮತ್ತು ಮಕ್ಕಳಿಗೊಸ್ಕರ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗುವ ಸ್ಪರ್ಧೆ, ಯುವಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಹಂಪಿ ಉತ್ಸವದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಯಾವುದೇ ಕಾರಣದಿಂದ ಕೈ ಬಿಡಬಾರದು. ಈ ಕಾರ್ಯಕ್ರಮವನ್ನು ವಿಜಯನಗರ ಸಾಮ್ರಾಜ್ಯದ ವೈಭವದ ಇತಿಹಾಸಕ್ಕೆ ಮೀಸಲಿಡಬೇಕು. ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಅಂಬಣ್ಣ ವಾಲ್ಮೀಕಿ, ಜಿ. ಯಲ್ಲಪ್ಪ, ಡಿ. ಪಂಪಾಪತಿ, ಮುತ್ತಣ್ಣ ಇನ್ನಿತರರು.

Advertisement

Udayavani is now on Telegram. Click here to join our channel and stay updated with the latest news.

Next