Advertisement
ಆನೆಗೊಂದಿಯಲ್ಲಿ ರಾಜ್ಯ ಪುರಾತತ್ವ ಇಲಾಖೆ ಸ್ಮಾರಕಗಳಿದ್ದು ಉಳಿದ ಹಳ್ಳಿಗಳಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಯಿಂದ ಗುರುತಿಸಲ್ಪಟ್ಟ ಸ್ಮಾರಕಗಳಿಲ್ಲ. ಆದ್ದರಿಂದ ಈ ಬಾರಿ ಪ್ರಾಧಿ ಕಾರದ ಮಾಸ್ಟರ್ ಪ್ಲಾನ್ ಮಾಡಿಫೈ ಮಾಡುವ ಸಂದರ್ಭದಲ್ಲಿ ಆನೆಗೊಂದಿ ಹಾಗೂ ಇತರೆ 15 ಹಳ್ಳಿಗಳನ್ನು ಪ್ರಾಧಿ ಕಾರದ ವ್ಯಾಪ್ತಿಯಿಂದ ಹೊರಗಿಡಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
Related Articles
Advertisement
ಪ್ರಾಧಿಕಾರದ ನಿಯಮದಂತೆ ಕೇಂದ್ರ-ರಾಜ್ಯ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ವ್ಯಾಪ್ತಿಯ ಸುತ್ತಲು ವ್ಯಾಪಾರ-ವಹಿವಾಟು ಮಾಡಲು ಅವಕಾಶವಿಲ್ಲ. ಆನೆಗೊಂದಿಯಲ್ಲಿ ಮಾತ್ರ ರಾಜ್ಯ ಪುರಾತತ್ವ ಇಲಾಖೆ ಸ್ಮಾರಕಗಳಿದ್ದು ಹನುಮನಹಳ್ಳಿ, ಸಾಣಾಪುರ, ಚಿಕ್ಕರಾಂಪುರ ಕ್ರಾಸ್, ಸಾಣಾಪುರ ತಿರುಮಲಾಪುರ, ಜಂಗ್ಲಿ ರಂಗಾಪುರ ಭಾಗದಲ್ಲಿ ಯಾವುದೇ ಸ್ಮಾರಕಗಳಿಲ್ಲ. ಆದರೂ ಪ್ರಾಧಿಕಾರದವರು ಸ್ಥಳೀಯರನ್ನು ಅಪರಾ ಧಿಗಳಂತೆ ಕಾಣುತ್ತಿದ್ದು ಕೂಡಲೇ ಆನೆಗೊಂದಿ ಭಾಗದ 15 ಹಳ್ಳಿಗಳ ಮೇಲೆ ಹೇರಿರುವ ಅವೈಜ್ಞಾನಿಕ ನಿಯಮ ಕೂಡಲೇ ತೆರವುಗೊಳಿಸುವಂತೆ ಆನೆಗೊಂದಿ, ಸಾಣಾಪುರ, ಸಂಗಾಪುರ, ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಜನರು ಸಂಸದರು, ಶಾಸಕರು, ಸಚಿವರಿಗೆ ಮನವಿ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಋಷಿಮುಖ ಪರ್ವತ, ಆನೆಗೊಂದಿ ನವವೃಂದಾವನ ಗಡ್ಡಿ ಹಾಗೂ ಆನೆಗೊಂದಿ ದೇಗುಲ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಇವರಿಗೆ ಊಟ, ವಸತಿ ಕಲ್ಪಿಸಲು ಸುತ್ತಲಿನ ಗ್ರಾಮಗಳಲ್ಲಿ ಸಣ್ಣ ಪುಟ್ಟ ಅಂಗಡಿ- ಮುಂಗಟ್ಟು ಆರಂಭಿಸಲಾಗಿದೆ. ಇವುಗಳ ಮೇಲೆ ಹೊಸಪೇಟೆ ಹೋಟೆಲ್ ಮಾಲೀಕರ ಕೆಂಗಣ್ಣು ಬಿದ್ದಿದ್ದು ಪ್ರಾಧಿ ಕಾರದ ಹೊಸ ಮಾಸ್ಟರ್ ಪ್ಲಾನ್‌ನಲ್ಲಿ ನಿಯಮ ಸರಳಗೊಳಿಸದೇ ಇನ್ನಷ್ಟು ಕಠಿಣಗೊಳಿಸಲು ಒತ್ತಡ ಹಾಕಲಾಗುತ್ತಿದ್ದು ಸ್ಥಳೀಯರ ಮನವಿಗೆ ಪ್ರಾಧಿಕಾರದ ಸ್ಪಂದನೆ ಇಲ್ಲವಾಗಿದೆ.