Advertisement

ಹಂಪನಕಟ್ಟೆ: ಬೆಳಗ್ಗೆ ಸಿಗ್ನಲ್‌ ಮಾಯ; ಸಂಜೆ ಸಿಗ್ನಲ್‌ ಮಯ!

12:47 PM Jul 04, 2022 | Team Udayavani |

ಹಂಪನಕಟ್ಟೆ: ಹಂಪನಕಟ್ಟೆ ಜಂಕ್ಷನ್‌ನಲ್ಲಿ ವರ್ಷದ ಹಿಂದಿನಿಂದ (2021 ಜೂ. 30)ಜಾರಿ ಯಲ್ಲಿದ್ದ ಸ್ಮಾರ್ಟ್‌ ಸಿಗ್ನಲ್‌ ಲೈಟ್‌ ವ್ಯವಸ್ಥೆಯನ್ನು ರವಿ ವಾರ ಬೆಳಗ್ಗೆ ಬದಲಾಯಿಸಿ ಸಂಜೆ ವೇಳೆಗೆ ಮತ್ತೆ ಜಾರಿಗೊಳಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Advertisement

ಸುಗಮ ಸಂಚಾರ, ಅಪಘಾತ ನಿಯಂತ್ರಣದ ಹಿತದೃಷ್ಟಿಯಿಂದ ಸಂಚಾರಿ ಪೊಲೀಸರು ಹಂಪನಕಟ್ಟೆ ಜಂಕ್ಷನ್‌ ನಲ್ಲಿ ಪ್ರಾಯೋಗಿಕವಾಗಿ ಸಿಗ್ನಲ್‌ ಫ್ರೀ ವ್ಯವಸ್ಥೆಗೆ ಮುಂದಾಗಿದ್ದರು. ಇದರಂತೆ ರವಿವಾರ ಮುಂಜಾನೆ ಯಿಂದಲೇ ಹಂಪನಕಟ್ಟೆ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಸಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಂಜೆ ವೇಳೆ ಕೆಲವರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಗ್ನಲ್‌ ಫ್ರೀ ವ್ಯವಸ್ಥೆಯನ್ನು ದಿಢೀರ್‌ ಕೈ ಬಿಟ್ಟು ಬ್ಯಾರಿಕೇಡ್‌ ತೆರವು ಮಾಡಲಾಯಿತು. ಜಂಕ್ಷನ್‌ನಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಕೈಗೊಂಡ ಸುಂದರೀಕರಣಕ್ಕೆ ಧಕ್ಕೆ ಆಗಲಿದೆ ಎಂಬ ನೆಪದಿಂದ ಬ್ಯಾರಿಕೇಡ್‌ ತೆರವು ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಮಧ್ಯೆ, ಸಿಗ್ನಲ್‌ ಫ್ರೀ ವ್ಯವಸ್ಥೆಯೇ ಇಲ್ಲಿ ಸೂಕ್ತ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಗ್ನಲ್‌- ಫ್ರೀ ಸಿಗ್ನಲ್‌! ಹಂಪನಕಟ್ಟೆ ಜಂಕ್ಷನ್‌ನಲ್ಲಿ ಸುಲಲಿತ ಸಂಚಾರ ವ್ಯವಸ್ಥೆಗಾಗಿ ಹಲವಾರು ವರ್ಷಗಳಿಂದ ಇದ್ದ ಸಿಗ್ನಲ್‌ ಲೈಟ್‌ ವ್ಯವಸ್ಥೆಯನ್ನು ಕಾರಣಾಂತರಗಳಿಂದ 9 ವರ್ಷಗಳ ಹಿಂದೆ ರದ್ದು ಪಡಿಸಲಾಗಿತ್ತು. 7 ರಸ್ತೆಗಳು (ಬಲ್ಮಠ ರಸ್ತೆ, ಫಳ್ನೀರ್‌ ರಸ್ತೆ, ಕೆ.ಎಸ್‌.ರಾವ್‌ ರಸ್ತೆ, ರೈಲು ನಿಲ್ದಾಣ ರಸ್ತೆ, ಮಾರ್ಕೆಟ್‌ ರಸ್ತೆ, ಅತ್ತಾವರ ರಸ್ತೆ, ಸ್ಟೇಟ್‌ಬ್ಯಾಂಕ್‌ ಕಡೆಯಿಂದ ಬಲ್ಮಠ/ ಫಳ್ನೀರ್‌/ ಅತ್ತಾವರ ಕಡೆಗೆ ಹೋಗುವ ರಸ್ತೆ) ಸಂಗಮಿ ಸುವ ಈ ಜಂಕ್ಷನ್‌ನಲ್ಲಿ ವಾಹನಗಳ ಒತ್ತಡ ವಿಪರೀತ ವಾಗಿ ಹೆಚ್ಚಳವಾದ ಕಾರಣ, ಡಿಸಿ/ ಪೊಲೀಸ್‌/ ಅಗ್ನಿ ಶಾಮಕ ವಾಹನಗಳಿಗೆ ತುರ್ತು ಸಂದರ್ಭಗಳಲ್ಲಿ ಓಡಾಡಲು ಅಸಾಧ್ಯವಾದ್ದರಿಂದ, ಪ್ರತಿಭಟನೆ ಅಥವಾ ಇನ್ನಿತರ ಮೆರವಣಿಗೆಯ ಸಂದರ್ಭಗಳಲ್ಲಿ ಇಡೀ ನಗರದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಆಗುತ್ತಿರುವುದನ್ನು ಮನಗಂಡು 2013ರಲ್ಲಿ ಹಂಪನಕಟ್ಟೆ ಜಂಕ್ಷನನ್ನು ಸಿಗ್ನಲ್‌ ಫ್ರೀ ಮಾಡಲಾಗಿತ್ತು. ಅಂದಿನಿಂದ ಇಲ್ಲಿ ಸಿಗ್ನಲ್‌ ಲೈಟ್‌ ವ್ಯವಸ್ಥೆ ಇರಲಿಲ್ಲ. ಬಳಿಕ 2021ರಲ್ಲಿ ಮತ್ತೆ ಸಿಗ್ನಲ್‌ ಲೈಟ್‌ ವ್ಯವಸ್ಥೆ ಜಾರಿಯಾಗಿತ್ತು.

ಪ್ರಾಯೋಗಿಕ ಪರಿಶೀಲನೆ: ಹಂಪನಕಟ್ಟೆ ಜಂಕ್ಷನ್‌ನಲ್ಲಿ ಸಿಗ್ನಲ್‌ ಫ್ರೀ ವ್ಯವಸ್ಥೆ ಬಗ್ಗೆ ಅವಲೋಕನಕ್ಕಾಗಿ ರವಿವಾರ ಬೆಳಗ್ಗೆ ಪ್ರಾಯೋಗಿಕವಾಗಿ ಮಾತ್ರ ಕ್ರಮ ಕೈಗೊಳ್ಳಲಾಗಿತ್ತು. ಮುಂದೆ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿಕೊಂಡು ಸಾರ್ವ ಜನಿಕರಿಗೆ ಮಾಹಿತಿ ನೀಡಿ ಈ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕೆ ಸಿಗ್ನಲ್‌ ವ್ಯವಸ್ಥೆಯೇ ಮುಂದುವರಿಯಲಿದೆ. –ಗೀತಾ ಕುಲಕರ್ಣಿ, ಎಸಿಪಿ ಟ್ರಾಫಿಕ್‌ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next