Advertisement

ಭಾರತ ತಲುಪಿದ ಹಮೀದ್‌ ಅನ್ಸಾರಿ

10:21 AM Dec 19, 2018 | Harsha Rao |

ಹೊಸದಿಲ್ಲಿ: ಸ್ನೇಹಿತೆಯನ್ನು ಭೇಟಿಯಾಗಲು ತೆರಳಿದ್ದಾಗ ಪಾಕಿಸ್ಥಾನದಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ಎಂಜಿನಿಯರ್‌ ಹಮೀದ್‌ ಅನ್ಸಾರಿ ಬಿಡುಗಡೆಗೊಂಡು ಮಂಗಳವಾರ ಭಾರತಕ್ಕೆ ವಾಪಸಾಗಿದ್ದಾರೆ. ಈತನನ್ನು ಕುಟುಂಬದವರು ಭಾವುಕವಾಗಿ ಸ್ವಾಗತಿಸಿದ್ದಾರೆ. ಪೇಶಾವರದ ಜೈಲಿನಿಂದ ಅನ್ಸಾರಿಯವರನ್ನು ಬಿಡುಗಡೆ ಮಾಡಲಾಗಿದೆ. ಅತ್ತಾರಿ -ವಾಘಾ ಗಡಿಯಲ್ಲಿ ಅನ್ಸಾರಿ ಆಗಮಿಸುತ್ತಿದ್ದಂತೆ ಅವರ ಕುಟುಂಬ ಸದಸ್ಯರು ಅಪ್ಪಿ ಸ್ವಾಗತಿಸಿದ್ದಾರೆ. ಗಡಿಯಲ್ಲಿ ಅವರ ತಾಯಿ ಫೌಜಿಯಾ, ತಂದೆ ನಿಹಾಲ್‌ ಅನ್ಸಾರಿ ಸೇರಿದಂತೆ ಕುಟುಂಬ ಸದಸ್ಯರು ಭೇಟಿಯಾದರು.

Advertisement

2012ರಲ್ಲಿ ಸ್ನೇಹಿತೆಯನ್ನು ಭೇಟಿಯಾಗಲು ಆಫ್ಘಾನಿಸ್ತಾನ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದ ಮುಂಬೈ ನಿವಾಸಿ ಅನ್ಸಾರಿಯನ್ನು ಭಾರತದ ಗುಪ್ತಚರ ಇಲಾಖೆ ಸಿಬ್ಬಂದಿ ಎಂಬ ಗುಮಾನಿ ಮೇಲೆ ಪಾಕ್‌ ಸೆರೆಹಿಡಿದಿತ್ತು. 3 ವರ್ಷಗಳ ಅಧಿಕೃತ ಜೈಲು ಶಿಕ್ಷೆ ಸೇರಿ ಒಟ್ಟು 6 ವರ್ಷಗಳ ಕಾಲ ಅವರನ್ನು ಒತ್ತೆ ಇರಿಸಿಕೊಂಡಿತ್ತು. ಕಳೆದ ಡಿ.15ರಂದು ಬಿಡುಗಡೆ ಮಾಡಿತ್ತು. ಆದರೂ ಅವರ ದಾಖಲೆ ಪತ್ರಗಳು ಸಮರ್ಪಕವಾಗಿರಲಿಲ್ಲ ಎಂದು ಇಸ್ಲಾಮಾಬಾದ್‌ನಲ್ಲಿ ಅವರನ್ನು ಇರಿಸಲಾಗಿತ್ತು. ಕಡೆಗೂ ಮಂಗಳವಾರ ಅವರನ್ನು ಭಾರತಕ್ಕೆ ಕಳಿಸಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next