ಜೆರುಸಲೇಂ: ಗಾಜಾದಲ್ಲಿನ ನಾಗರಿಕರ ಮನೆಗಳ ಮೇಲೆ ಇಸ್ರೇಲಿ ನಡೆಸಿದ ದಾಳಿಗೆ ಪ್ರತಿಯಾಗಿ ಉಗ್ರಗಾಮಿಗಳು ನಾಗರಿಕ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಹಮಾಸ್ ನ ಸೇನಾ ವಿಭಾಗದ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬಿಡುಗಡೆಯಾದ ಆಡಿಯೋ ಹೇಳಿಕೆಯಲ್ಲಿ, ಕಸ್ಸಾಮ್ ಬ್ರಿಗೇಡ್ ಗಳ ವಕ್ತಾರ ಅಬು ಒಬೇದಾ, ಗಾಜಾದ ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ತೀವ್ರವಾದ ಇಸ್ರೇಲಿ ದಾಳಿಗಳನ್ನು ಖಂಡಿಸಿದ್ದಾರೆ.
ಟೆಲ್ ಅವೀವ್ ಗೆ ಬೆಂಬಲ ನೀಡುವುದನ್ನು ಮುಂದುವರೆಸಿದರೆ ಶನಿವಾರ ಇಸ್ರೇಲ್ ನಲ್ಲಿ ತಮ್ಮ ಹಠಾತ್ ದಾಳಿಯ ಸಮಯದಲ್ಲಿ ತನ್ನ ಹೋರಾಟಗಾರರಿಂದ ಸೆರೆಹಿಡಿಯಲ್ಪಟ್ಟ ಯುಎಸ್ ನಾಗರಿಕರನ್ನು ಕೊಲ್ಲುವುದಾಗಿ ಹಮಾಸ್ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.
ಹಮಾಸ್ ನ ಮಿಲಿಟರಿ ವಿಭಾಗವಾದ ಕಸ್ಸಾಮ್ ಬ್ರಿಗೇಡ್ ಗಳನ್ನು ಪ್ರತಿನಿಧಿಸುವ ಅಬು ಒಬೇದಾ, ಗಾಜಾದ ವಸತಿ ಪ್ರದೇಶಗಳ ಮೇಲೆ ಭಾರಿ ಬಾಂಬ್ ದಾಳಿಗೆ ತಮ್ಮ ಪ್ರತಿಕ್ರಿಯೆಯನ್ನು ಒತ್ತಿಹೇಳಿದರು.”ನಾವು ಇದನ್ನು ಕೊನೆಗಾಣಿಸಲು ನಿರ್ಧರಿಸಿದ್ದೇವೆ. ಇನ್ನು ಮುಂದೆ, ಪೂರ್ವ ಎಚ್ಚರಿಕೆಯಿಲ್ಲದೆ ನಮ್ಮ ಜನರನ್ನು, ಅವರ ಮನೆಗಳಲ್ಲಿ ಗುರಿಪಡಿಸಿ ದಾಳಿ ನಡೆಸಿದರೆ ಅದು ನಾವು ಹಿಡಿದಿರುವ ನಾಗರಿಕ ಒತ್ತೆಯಾಳುಗಳಲ್ಲಿ ಒಬ್ಬನನ್ನು ಮರಣದಂಡನೆಗೆ ಕಾರಣವಾಗುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ:World Cup 2023: ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾದ ಶುಬಮನ್ ಗಿಲ್; ಹೆಚ್ಚಿದ ಆತಂಕ
ಮಹತ್ವದ ಬೆಳವಣಿಗೆಗಳಲ್ಲಿ, ಇಸ್ರೇಲಿ ರಕ್ಷಣಾ ಪಡೆಗಳು ಗಾಜಾ ಗಡಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದೆ ಎಂದು ಹೇಳಿಕೊಂಡಿದೆ. ಐಡಿಎಫ್ ನ ಉನ್ನತ ವಕ್ತಾರರಾದ ರಿಯರ್ ಅಡ್ಮ್ ಡೇನಿಯಲ್ ಹಗರಿ ಅವರು, ಗಡಿ ಬೇಲಿಯ ಭಾಗಗಳನ್ನು ನಾಶಪಡಿಸಿದ ಹಮಾಸ್ ದಾಳಿಯ ನಂತರ, ಹಿಂದೆ ಉಲ್ಲಂಘಿಸಿದ ಗಾಜಾ ಗಡಿಯ ಮೇಲೆ ನಿಯಂತ್ರಣವನ್ನು ಮರಳಿ ಪಡೆಯುವುದನ್ನು ದೃಢಪಡಿಸಿದರು.
“ಕಳೆದ ದಿನ ಒಬ್ಬನೇ ಒಬ್ಬ ಭಯೋತ್ಪಾದಕನು ಗಡಿಯಿಂದ ಪ್ರವೇಶಿಸಲಿಲ್ಲ” ಎಂದು ಹಗರಿ ಸುದ್ದಿಗಾರರಿಗೆ ಮಾಹಿತಿ ನೀಡಿದರು, ಗಾಜಾ ಪಟ್ಟಿಯಲ್ಲಿರುವ ಅನೇಕ ಹಮಾಸ್ ಗುರಿಗಳ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಗಳನ್ನು ಉಲ್ಲೇಖಿಸಿದ್ದಾರೆ.