Advertisement

ಎಲ್‌ಯುಎಚ್‌ ಕಾಪ್ಟರ್‌ ಪರೀಕ್ಷೆ ಯಶಸ್ವಿ; ಲೇಹ್‌ನ ದೌಲತ್‌ ಬೇಗ್‌ ಓಲ್ಡಿಯಲ್ಲಿ 10 ದಿನ ಹಾರಾಟ

11:25 PM Sep 09, 2020 | mahesh |

ನವದೆಹಲಿ: ಲೇಹ್‌ನಲ್ಲಿ ಮಂಗಳವಾರ, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸಂಸ್ಥೆಯು ದೇಶೀಯವಾಗಿ ತಯಾರಿಸಿರುವ “ಮಿತ ಉಪಯೋಗಿ ಹೆಲಿಕಾಪ್ಟರ್‌’ನ (ಎಲ್‌ಯುಎಚ್‌) ಪ್ರಾಯೋಗಿಕ ಹಾರಾಟ ನಡೆಸಲಾಗಿದ್ದು, ಪ್ರಾಥಮಿಕ ಹಂತದ ಈ ಪರೀಕ್ಷೆಯಲ್ಲಿ ಹೆಲಿಕಾಪ್ಟರ್‌ ಉತ್ತೀರ್ಣವಾಗಿದೆ.

Advertisement

ದೌಲತ್‌ ಬೇಗ್‌ ಓಲ್ಡಿಯಲ್ಲಿ (ಡಿಬಿಒ) 10 ದಿನಗಳ ಕಾಲ ನಡೆದ ಈ ಪ್ರಾಯೋಗಿಕ ಹಾರಾಟದ ವೇಳೆ, ಹೆಲಿಕಾಪ್ಟರ್‌ಗೆ ಇರಬೇಕಾದ ಉಷ್ಣ ಹಾಗೂ ತೀವ್ರ ಮಾರುತಗಳ ಹವಾಮಾನ ಪರಿಸ್ಥಿತಿಗಳಲ್ಲಿ ಬಹು ಎತ್ತರದಲ್ಲಿ ಹಾರಾಡಬಲ್ಲ ಛಾತಿಯನ್ನು ಪರೀಕ್ಷೆಗೊಳಪಡಿಸಲಾಯಿತು. ಈ ಪರೀಕ್ಷೆಯ ವೇಳೆ ನಿಖರ ಫ‌ಲಿತಾಂಶಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಭೂ ಸೇನೆ ಹಾಗೂ ವಾಯುಪಡೆಗಾಗಿ ಈ ಕಾಪ್ಟರ್‌ ತಯಾರಿಸಲಾಗಿದೆ. ಇದು ಉಪಯೋಗಕ್ಕೆ ಬಂದ ನಂತರ, ಈಗ ಸೇವೆಯಲ್ಲಿರುವ ಚೀತಾ ಹಾಗೂ ಚೇತಕ್‌ ಹೆಲಿಕಾಪ್ಟರ್‌ಗಳು ನೇಪಥ್ಯಕ್ಕೆ ಸರಿಯಲಿವೆ. ಭೂ ಸೇನೆಯು ಎಲ್‌ಯುಎಫ್ ಮಾದರಿಯ ಒಟ್ಟು 126 ಕಾಪ್ಟರ್‌ಗಳನ್ನು ಖರೀದಿಸಲಿದ್ದು, ವಾಯುಪಡೆಯು 61 ಕಾಪ್ಟರ್‌ಗಳನ್ನು ಕೊಳ್ಳಲಿದೆ.

ಎಲ್‌ಯುಎಚ್‌ ವಿಶೇಷ
3 ಟನ್‌: ಹೆಲಿಕಾಪ್ಟರ್‌ನ ತೂಕ
235 ಕಿ.ಮೀ./ಗಂಟೆಗೆ: ಹೆಲಿಕಾಪ್ಟರ್‌ನ ಸರಾಸರಿ ವೇಗ
260 ಕಿ.ಮೀ./ಗಂಟೆಗೆ :
ಕಾಪ್ಟರ್‌ನ ಗರಿಷ್ಠ ವೇಗ
350 ಕಿ.ಮೀ. : ನಿರಂತರ ಹಾರಾಟದಡಿ ಕಾಪ್ಟರ್‌ ಸಾಗುವ ದೂರ
3.12 ಟನ್‌: ಹಾರಾಟದ ವೇಳೆ ಹೆಲಿಕಾಪ್ಟರ್‌ ಹೊರಬಲ್ಲ ಒಟ್ಟು ತೂಕ

Advertisement

Udayavani is now on Telegram. Click here to join our channel and stay updated with the latest news.

Next