Advertisement

ಎಲ್‌ಸಿಎಚ್‌ ಪ್ರಯೋಗ ಯಶಸ್ವಿ

12:30 AM Jan 18, 2019 | Team Udayavani |

ಭುವನೇಶ್ವರ: ಒಡಿಶಾದ ಚಾಂದಿಪುರದಲ್ಲಿ ಇತ್ತೀಚೆಗೆ ನಡೆಸಲಾದ ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್‌ನ (ಎಲ್‌ಸಿಎಚ್‌) ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ ಎಂದು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ತಿಳಿಸಿದೆ. ದೇಶೀಯ ಯುದ್ಧ ವಿಮಾನ ಹಾರಾಟಗಳ ಸಂಶೋಧನೆಯಲ್ಲಿ ಎಲ್‌ಸಿಎಚ್‌ ಯಶಸ್ವಿ ಸಂಚಾರ ಮಹತ್ವದ ಮೈಲುಗಲ್ಲು ಎಂದು ಬಣ್ಣಿಸಿರುವ ಎಚ್‌ಎಎಲ್‌, ಪರೀಕ್ಷಾರ್ಥ ಹಾರಾಟದ ಸಂದರ್ಭದಲ್ಲಿ ಚಲಿಸುತ್ತಿರುವ ಗುರಿಗಳ ಮೇಲೆ ಏರ್‌-ಟು-ಏರ್‌ ಕ್ಷಿಪಣಿ ಪ್ರಯೋಗ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಎಲ್ಲಾ ಪರೀಕ್ಷೆಗಳಲ್ಲಿ ಹೆಲಿಕಾಪ್ಟರ್‌ ನಿರೀಕ್ಷಿತವಾಗಿ ಯಶಸ್ವಿಯಾಗಿದೆ ಎಂದು ಹೇಳಿದೆ. 

Advertisement

ಎಚ್‌ಎಎಲ್‌ನ ಅಧೀನ ಸಂಸ್ಥೆಯಾದ ರೋಟರಿ ವಿಂಗ್‌ ರಿಸರ್ಚ್‌ ಮತ್ತು ಡಿಸೈನ್‌ ಸೆಂಟರ್‌ (ಆರ್‌ಡಬ್ಲೂಆರ್‌ಡಿಸಿ), ಈ ಹೆಲಿಕಾಪ್ಟರ್‌ ತಯಾರಿಸಿದೆ. ಸಮಕಾಲೀನ ಕದನ ಕೌಶಲಗಳನ್ನು ಒಳಗೊಂಡಂತೆ ತಯಾರಾಗಿರುವ ಈ ಲಘು ಯುದ್ಧ ವಿಮಾನ, ಭಾರತೀಯ ವಾಯು ಪಡೆಯ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸವನ್ನು ಎಚ್‌ಎಎಲ್‌ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next