Advertisement
ಏಜೆಂಟ್ ಮೂಲಕ ಬಂದಿದ್ದ ಯುವತಿ :ಉತ್ತರ ಕನ್ನಡದಲ್ಲಿ ಕೆಲಸದ ಅಭಾವದಿಂದ ಅಲ್ಲಿನ ಯುವಕ, ಯುವತಿಯರು ಉಳ್ಳಾಲ ಸಹಿತ ರಾಜ್ಯದ ವಿವಿಧೆಡೆ ಕೆಲಸಕ್ಕೆ ತೆರಳುವುದು ಸಹಜ. ಅದೇ ರೀತಿಯಲ್ಲಿ ದೋಂಡಿಬಾೖ ಕೂಡಾ ಉಳ್ಳಾಲದ ಕೈಕೋದಲ್ಲಿರುವ ಫಿಶ್‌ಮಿಲ್‌ನಲ್ಲಿ ಕೆಲಸಕ್ಕೆ ಎಂಟು ತಿಂಗಳ ಹಿಂದೆ ಸೇರಿದ್ದರು. ಆಕೆಯನ್ನು ಸುನಿತಾ ಹೆಸಧಿರಿನ ಯಲ್ಲಾಪುರದ ಯುವತಿ ಉಳ್ಳಾಲಕ್ಕೆ ಕರೆದುಕೊಂಡು ಬಂದಿದ್ದರು. ಸುನೀತಾ ಫಿಶಮಿಲ್ ಮತ್ತು ಕಾರ್ಮಿಕರ ನಡುವೆ ಎಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ ಒಬ್ಬಳ ಸಂಬಳದಲ್ಲಿ 500ರೂ, ನಂತೆ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಆಕೆ ಈ ಸಾಗರೋತ್ಪನ್ನ ಪ್ಯಾಂಕಿಂಗ್ ಮಾಡುವ ಸಂಸ್ಥೆಗೆ ಸುಮಾರು 20 ಯುವತಿಯರನ್ನು ಕರೆದುಕೊಂಡು ಬಂದಿದ್ದರು.ಎನ್ನಲಾಗಿದೆ.
ಸಂಶಯಕ್ಕೀಡು ಮಾಡಿದ ಮೆಸೇಜ್ : 5ನೇ ತರಗತಿ ತನಕ ಮಾತ್ರ ಕಲಿತಿರುವ ದೋಂಡಿಬಾೖ ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡದ ಮೆಸೇಜ್ ಹಾಕಿರುವುದು ಆಕೆಯನ್ನು ಯಾರಾದರೂ ಅಪಹರಿಸಿರಬಹುದು ಎನ್ನುವ ಸಂಶಯ ಆಕೆಯ ಸಂಬಂಧಿಕರೊಂದಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದಾರೆ. ಆಕೆಗೆ ಸರಿಯಾಗಿ ಇಂಗ್ಲಿಷ್ ಓದಲು ಬರುವುದಿಲ್ಲ, ಆದರೆ ಆಕೆಯ ಮೊಬೈಲ್ ನಂಬ್ರದಿಂದ ಇಂಗ್ಲಿಷ್ ಮೆಸೇಜ್ ಬಂದಿರುವುದರಿಂದ ಆಕೆಯೊಂದಿಗೆ ಯಾರಿದ್ದಾರೆ ಎನ್ನುವ ಸಂಶಯದಿಂದ ಯುವತಿಯನ್ನು ಮಾರಾಟ ಮಾಡಲಾಗಿದೆಯಾ ಎನ್ನುವ ಊಹಾಪೋಹಗಳು ಹುಟ್ಟಿಕೊಂಡಿದೆ. ಪೊಲೀಸರು ತನಿಖೆ ನಡೆಸಿದಾಗ ಆಕೆಯ ಮೊಬೈಲ್ ಟವರ್ ಉಳ್ಳಾಲ – ಕೋಟೆಕಾರು ಮದ್ಯದಲ್ಲಿ ಇರುವುದರಿಂದ ಆಕೆಯನ್ನು ಯಾರಾದರೂ ಗೃಹ ಬಂಧನಲ್ಲಿ ಇರಿಸಿದ್ದಾರ ಎನ್ನುವ ಸಂಶಯ ವ್ಯಕ್ತವಾಗಿದೆ. ಇನ್ನೊಂದೆಡೆ ಆಕೆಯ ಏಜೆಂಟ್ ಸುನಿತಾ ಮತ್ತು ಸಂಸ್ಥೆಯ ಪ್ರಬಂಧಕ ಗೋವಿಂದ ಅವರು ಮನೆಯವರ ಕರೆಗೆ ಸರಿಯಾಗಿ ಉತ್ತರಿ ಸದ ಕಾರಣ ಅವರ ಇಬ್ಬರ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಲಾಗಿದೆ.
Related Articles
Advertisement