Advertisement

ಹಳಿಯಾಳ ಪೊಲೀಸ್‌ ಠಾಣೆ ಸೀಲ್‌ಡೌನ್‌

09:54 AM Jul 24, 2020 | Suhan S |

ಹಳಿಯಾಳ: ಕಳೆದ ನಾಲ್ಕೂ ದಿನಗಳ ಹಿಂದೆಯಷ್ಟೇ ಸಿಪಿಐ ಠಾಣೆಯ ಒಬ್ಬ ಪೊಲೀಸ್‌ ಸಿಬ್ಬಂದಿಗೆ ಸೋಂಕು ತಗುಲಿ ಠಾಣೆ ಸೀಲ್‌ಡೌನ್‌ ಆಗಿತ್ತು. ಗುರುವಾರ ಹಳಿಯಾಳದ ಪಿಎಸ್‌ಐ ಕಚೇರಿಯ ಎಎಸ್‌ಐ ಒಬ್ಬರಿಗೆ ಸೋಂಕು ದೃಢಪಟ್ಟಿದ್ದರಿಂದ ಈ ಠಾಣೆಯನ್ನೂ ಸೀಲ್‌ಡೌನ್‌ ಮಾಡಲಾಗಿದ್ದು, ಕೋವಿಡ್ ಹೊಡೆತಕ್ಕೆ ಸದ್ಯಕ್ಕೆ ಎರಡೂ ಠಾಣೆ ಸಿಲ್‌ಡೌನ್‌ ಮಾಡಲಾಗಿದೆ.

Advertisement

ಈವರೆಗೆ ಹಳಿಯಾಳದ ಇಬ್ಬರು ಪೊಲೀಸರಿಗೆ ಸೋಂಕು ದೃಢಪಟ್ಟಿದ್ದರಿಂದ ಸಿಪಿಐ ಕಚೇರಿ ಹಾಗೂ ಪಿಎಸ್‌ಐ ಕಚೇರಿ ಎರಡೂ ಠಾಣೆ ಸಂಪೂರ್ಣ ಸ್ಯಾನಿಟೈಸರ್‌ ಮಾಡಲಾಗಿದೆ. ಎರಡೂ ಠಾಣೆಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಭಂದಿಸಿದ್ದು, ಅವಶ್ಯಕ ಪ್ರಕರಣಗಳಿಗೆ ಮಾತ್ರ ಹೊರಗೆ ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಮಾತನಾಡಿರುವ ಪಿಎಸ್‌ಐ ಯಲ್ಲಾಲಿಂಗ್‌ ಕುನ್ನೂರ, ಹಳಿಯಾಳ ಪೊಲೀಸ್‌ ಠಾಣೆ ಒಬ್ಬ ಸಿಬ್ಬಂದಿಗೆ ಗುರುವಾರ ಕೋವಿಡ್ ದೃಢಪಟ್ಟಿದ್ದರಿಂದ ಹಾಗೂ ಉಳಿದ ಸಿಬ್ಬಂದಿ ಸೋಂಕಿತನ ನೇರ ಸಂಪರ್ಕಕ್ಕೆ ಬಂದಿದ್ದರಿಂದ ಠಾಣೆಯನ್ನು ಕೆಲ ದಿನಗಳ ಮಟ್ಟಿಗೆ ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತನ ನೇರ ಸಂಪರ್ಕಕ್ಕೆ ಬರದ ಸಿಬ್ಬಂದಿ ಠಾಣೆ ಹೊರಗಿನಿಂದಲೇ ತಮ್ಮ ಕರ್ತವ್ಯ ನಿರ್ವಹಿಸಲಿದ್ದು, ತಾಲೂಕಿನ ಜನತೆ ಸಹಕರಿಸುವಂತೆ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next