Advertisement

ಇಂದ್ರಮ್ಮನ ಕೆರೆ ಒಡೆದರೆ ಹಾನಿ

02:42 PM Aug 12, 2019 | Naveen |

ಹಳಿಯಾಳ: ಹಳ್ಳಗಳಲ್ಲಿ ಪ್ರವಾಹ ಸೃಷ್ಠಿಗೆ ಕಾರಣವಾದ ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದ್ರಮ್ಮನ ಕೆರೆ ಮಳೆರಾಯನ ಬಿಡುವಿನಿಂದ ಸದ್ಯ ಶಾಂತವಾಗಿದೆ. ಅಲ್ಲದೇ ಕೆರೆ ಒಡೆಯುತ್ತೆ ಎನ್ನುವ ಭೀತಿ ದೂರವಾಗಿದೆ.

Advertisement

ಪಟ್ಟಣದಿಂದ ಕೇವಲ 20 ಕಿಮೀ ಅಂತರದಲ್ಲಿರುವ ಅಳ್ನಾವರ ತಾಲೂಕು ಹುಲಿಕೇರಿ ಗ್ರಾಮದ ಪಕ್ಕದಲ್ಲೇ ವಿಶಾಲ ಗುಡ್ಡ-ಬೆಟ್ಟಗಳ ಮಧ್ಯ ಸುಮಾರು 700 ಎಕರೆ ವಿಶಾಲವಾದ ಪ್ರದೇಶದಲ್ಲಿದೆ ಇಂದ್ರಮ್ಮನ ಕೆರೆ. ಇಲ್ಲಿಂದಲೇ 3 ದಿನ ಹಳಿಯಾಳದ ನದಿ ಪಾತ್ರದಲ್ಲಿ ಪ್ರವಾಹ ಸೃಷ್ಟಿಯಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ, ಕೃಷಿ ಸಲಕರಣೆಗಳು, ಪಂಪ್‌ಸೆಟ್‌ಗಳು, ಮನೆಗಳು, ಕೊಟ್ಟಿಗೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ನಷ್ಟ ಸಂಭವಿಸಿತ್ತು.

ವಿಶಾಲವಾದ ಕೆರೆ ತನ್ನ ಸಾಮರ್ಥ್ಯಕ್ಕಿಂತ ಅಧಿಕ ನೀರು ಶೇಖರಣೆಯಾಗಿ ತಡೆಗೊಡೆ ಮುಂದಿನ ಸುಮಾರು 50 ಮೀಟರ್‌ಗೂ ಹೆಚ್ಚು ಸುತ್ತಳತೆ ಪ್ರದೇಶವನ್ನು ಕೊಚ್ಚಿಕೊಂಡು ದೊಡ್ಡ ಕಂದಕ ಸೃಷ್ಠಿಸಿ ಅಪಾರ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಹೊಸ ಹಳ್ಳವೇ ಇಲ್ಲಿ ನಿರ್ಮಾಣವಾಗಿದೆ.

ಇನ್ನೂ ಈ ಕೆರೆಗೆ ಇರುವ ತಡೆಗೊಡೆ ಎದುರಿಗೆ ಮಧ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಅಲ್ಲದೇ ಸಿಮೆಂಟಿನ ಗಟ್ಟಿಮುಟ್ಟಾದ ತಡೆಗೊಡೆಯೊಂದೆ ಈ ನೀರಿಗೆ ಹಾನಿಗೊಳಗಾಗದೆ ಹಿಡಿದಿಟ್ಟುಕೊಂಡಿದೆ. ಆದರೆ ಈ ಕೆರೆ ಮೇಲೆ ಇರುವ ತಡೆಗೊಡೆ 3 ಅಡಿ ಮೇಲ್ಮೈನಲ್ಲಿ ನೀರು ಗೊಡೆ ಒಳಗಿಂದ ಹರಿಯುತ್ತಿದೆ ಆದರೆ, ಕೆಳಭಾಗದಲ್ಲಿ ಬಲಿಷ್ಠ 20 ಮೀಟರ್‌ಗೂ ಅಧಿಕ ದೊಡ್ಡ ಕಾಂಕ್ರಿಟ್ ತಡೆಗೊಡೆ ಇರುವುದು ಕೆರೆ ಒಡೆಯದಂತೆ ತಡೆದಿರುವುದು ಜನರ ಅದೃಷ್ಠ.

ಮಿನಿ ಅಣೆಕಟ್ಟಿನಂತಿರುವ ಈ ಕರೆಯ ಗೇಟಗಳು ಭಾರಿ ಮಳೆಯ ಸಂದರ್ಭದಲ್ಲಿ ತೆರೆಯಲಾಗದೆ ಸಮಸ್ಯೆ ಎದುರಾಗಿತ್ತು. ಆದರೆ ಧಾರವಾಡ ಜಿಲ್ಲಾಡಳಿತ ಕೂಡಲೇ ಸಂಬಂಧಿಸಿದ ಇಲಾಖೆ ಇಂಜೀನಿಯರಗಳು ಹಾಗೂ ನುರಿತ ತಂತ್ರಜ್ಞರಿಂದ ಸಲಹೆ ಪಡೆದು ಸದ್ಯ ಒಂದು ಗೇಟ್ ತೆರೆದಿದೆ. ಪಕ್ಕದಲ್ಲಿ ದೊಡ್ಡ ಟ್ರೆಂಚ್ ತೊಡಿ ನೀರು ಹೊರಬಿಡಲಾಗುತ್ತಿದ್ದು ಕೆರೆಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ.

Advertisement

ಸದ್ಯ ಕೆರೆ ಸುರಕ್ಷಿತವಾಗಿದ್ದು ಒಂದುವೇಳೆ ತಡೆಗೊಡೆ ಒಡೆದರು ಹಳ್ಳಗಳು ತುಂಬಿ ಹರಿಯಲಿವೆ. ದೊಡ್ಡ ಪ್ರಮಾಣದ ಹಾನಿ ಸಂಭವಿಸುವುದಿಲ್ಲ ಎಂದು ಅನುಭವಿ ರೈತರು ಹೇಳುತ್ತಾರೆ. ಆದರೂ ಕೂಡ ಕೆರೆಯ ತಡೆಗೊಡೆಗೆ ಆಗಿರುವ ಹಾನಿ ಸರಿಪಡಿಸುವವರೆಗೆ ನದಿ ಪಾತ್ರದ ಜನರು ಕಟ್ಟೆಚ್ಚರದಿಂದ ಇರಲು ತಾಲೂಕಾಡಳಿತ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next