Advertisement

ಅರ್ಧದಷ್ಟು ವಿದ್ಯಾರ್ಥಿಗಳು ಉದ್ಯೋಗಕ್ಕೆ ಅರ್ಹರು

10:20 AM Dec 23, 2019 | Team Udayavani |

ದೇಶದ ಆರ್ಥಿಕತೆಯನ್ನು ಪ್ರತಿಬಿಂಬಿಸುವ ಮಾನದಂಡ ಗಳಲ್ಲಿ ಶಿಕ್ಷಣವೂ ಒಂದು. ಇದಕ್ಕೆ ಪೂರಕವಾಗಿ ಪದವಿ ಮುಗಿಸಿದ ಅರ್ಧದಷ್ಟು ಪದವೀಧರರು ಉದ್ಯೋಗ ಪಡೆಯುವುದಕ್ಕೆ ಅರ್ಹರಾಗಿ ದ್ದಾರೆ ಎಂದು ಸಮೀಕ್ಷೆಯ ವರದಿಯೊಂದು ತಿಳಿಸಿದೆ.

Advertisement

ಇಂಡಿಯಾ ಸ್ಕಿಲ್ಸ್‌ ವರದಿ
ವೀಬಾಕ್ಸ್, ಪೀಪಲ್‌ ಸ್ಟ್ರಾಂಗ್‌ ಮತ್ತು ಸಿಐಐ ಜಂಟಿ ನೇತೃತ್ವದಲ್ಲಿ (ಇಂಡಿಯಾ ಸ್ಕಿಲ್ಸ್‌) ಎಂಬ ಸಮೀಕ್ಷೆ ನಡೆಸಿದ್ದು, ಅಗತ್ಯವಾದ ಕೌಶಲ ಮತ್ತು ಕ್ರಿಯಾಶೀಲತೆಯನ್ನು ಹೊಂದಿ ಉದ್ಯೋಗ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿಗಳ ಪೂರೈಕೆಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ವರದಿ ತಿಳಿಸಿದೆ.

ಶೇ.47ರಷ್ಟು ಉದ್ಯೋಗಕ್ಕೆ ಅರ್ಹರು
2019ರಲ್ಲಿ ಪದವಿ ಶಿಕ್ಷಣ ಪೂರೈಸಿ ದವರ ಪೈಕಿ ಶೇ.47ರಷ್ಟು ಯುವಕರು ಉದ್ಯೋಗ ಪಡೆದುಕೊಳ್ಳಲು ಅರ್ಹರು ಎಂದು ಹೇಳಿದೆ.

ಶೇ.54ರಷ್ಟು ಎಂಬಿಎ ವಿದ್ಯಾರ್ಥಿಗಳು ಅರ್ಹ
ಉದ್ಯೋಗಕ್ಕೆ ಅರ್ಹರಾದ ವಿದ್ಯಾರ್ಥಿಗಳ ಪೈಕಿ ಎಂಬಿಎ ಪದವೀಧರರು ಸಿಂಹ ಪಾಲು ಪಡೆದುಕೊಂಡಿದ್ದು, ಶೇ.54ರಷ್ಟು ಎಂಬಿಎ ವಿದ್ಯಾರ್ಥಿಗಳು ಕೆಲಸ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. 2014ರಲ್ಲಿ ಇದರ ಪ್ರಮಾಣ ಶೇ.40ರಷ್ಟಿತ್ತು.

ಶೇ.13ರಷ್ಟು ಹೆಚ್ಚಳ
2014ರಲ್ಲಿ ಪದವಿ ಶಿಕ್ಷಣ ಪೂರೈಸಿ ಉದ್ಯೋಗ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿಗಳ ಪೈಕಿ ಕೇವಲ ಶೇ.33.9ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋ ಗಕ್ಕೆ ಅರ್ಹರಾಗಿದ್ದರು. ಆದರೆ 2019ರ ವೇಳೆಗೆ ಶೈಕ್ಷಣಿಕ ಕ್ಷೇತ್ರ ಸುಧಾರಣೆ ಕಂಡಿದ್ದು, ಇದರ ಪ್ರಮಾಣದಲ್ಲಿ ಶೇ.13ರಷ್ಟು ಏರಿಕೆಯಾಗಿದೆ.

Advertisement

ಹಿನ್ನಡೆ ಸಾಧಿಸಿದ ಕೋರ್ಸ್‌ಗಳು
ಬಿಟೆಕ್‌, ಇತರ ಎಂಜಿನಿಯರಿಂಗ್‌ ಸ್ಟ್ರೀಮ್‌ಗಳು, ಎಂಸಿಎ, ತಾಂತ್ರಿಕ ಮತ್ತು ಕಂಪ್ಯೂಟರ್‌ ಸಂಬಂಧಿತ ಕೋರ್ಸ್‌ ಪೂರೈಸಿ ಹೊರಬರುವ ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಕೆ ಅರ್ಹರಾದವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಮೀಕ್ಷೆ ಉಲ್ಲೇಖೀಸಿದೆ.

ಕರ್ನಾಟಕಕ್ಕೆ 4ನೇ ಸ್ಥಾನ
ಉದ್ಯೋಗ ಅರ್ಹತೆ ಇರುವ ವಿದ್ಯಾರ್ಥಿಗಳನ್ನು ಹೊಂದಿರುವ ಅಗ್ರ ಹತ್ತು ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಟಾಪ್‌ 5 ರಾಜ್ಯ
-  ಮಹಾರಾಷ್ಟ್ರ
-  ತಮಿಳುನಾಡು
-  ಉತ್ತರಪ್ರದೇಶ
-  ಕರ್ನಾಟಕ
-  ಆಂಧ್ರಪ್ರದೇಶ

ಸುಧಾರಣೆ
ಫಾರ್ಮೆಸಿ, ಪಾಲಿಟೆ ಕ್ನಿಕ್‌, ಬಿಕಾಂ ಮತ್ತು ಬಿಎ ಕೋರ್ಸ್‌ಗಳು ಸುಧಾರಣೆ ಕಂಡಿದ್ದು, ಪದವಿ ಮುಗಿಸಿ ಬರುವ ಶೇ.15ರಷ್ಟು ವಿದ್ಯಾರ್ಥಿಗಳು ಉದ್ಯೋಗಕ್ಕೆ ಅರ್ಹರಾಗಿದ್ದಾರೆ.

3,500 ಶಿಕ್ಷಣ ಸಂಸ್ಥೆಗಳು
ಸಮೀಕ್ಷೆಗೆ ದೇಶದ 3,500 ಶಿಕ್ಷಣ ಸಂಸ್ಥೆಗಳನ್ನು ಒಳಪಡಿಸಿದ್ದು, 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.

ಮಹಾರಾಷ್ಟ್ರ ಮುಂಚೂಣಿ
ಮಹಾರಾಷ್ಟ್ರ ಈ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಅತೀ ಹೆಚ್ಚು ಪದವಿ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳಲು ಅರ್ಹರಾ ಗಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next