Advertisement

ಗ್ರಾಮೀಣಾಭಿವೃದ್ಧಿಗೆ ಸಿಕ್ಕಿದ್ದು ಅರ್ಧದಷ್ಟು ಹಣ

08:24 AM Mar 08, 2017 | Team Udayavani |

ಬೆಂಗಳೂರು: ರಾಜ್ಯವನ್ನು ಕಾಡುತ್ತಿರುವ ತೀವ್ರ ಬರಗಾಲದ ನಡುವೆ ಕೃಷಿಕರು ಹಾಗೂ ಗ್ರಾಮೀಣ ಭಾಗದ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಇಲಾಖೆಗಳಿಗೆ 2016-17ನೇ ಸಾಲಿನಲ್ಲಿ ಅನುದಾನ ಕೊರತೆ ಕಡಿಮೆಯಾಗಿದ್ದರಿಂದ ಅಭಿವೃದ್ಧಿಯೂ ಕುಸಿದಿದೆ.

Advertisement

ರಾಜ್ಯದ ಜನಸಂಖ್ಯೆಯಲ್ಲಿ ಶೇ. 65ಕ್ಕೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಭಾಗದ ಮೂಲಾಧಾರ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಆ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನೀರಾವರಿ ಹಾಗೂ ಸಹಕಾರ ಇಲಾಖೆಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವೇ ಕಡಿಮೆ, ಅಂತಹದರಲ್ಲಿ ಬಿಡುಗಡೆಯಾಗಿದ್ದು
ಅರ್ಧದಷ್ಟು ಮಾತ್ರ.

2016-17ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನದ ಪೈಕಿ ಡಿಸೆಂಬರ್‌ ಅಂತ್ಯದವರೆಗೆ ಶೇ. 51ರಷ್ಟು ಅನುದಾನ ಮಾತ್ರ ಬಿಡುಗಡೆಯಾಗಿ ದ್ದರಿಂದ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಸಂಪೂರ್ಣ ಅನುಷ್ಠಾನವಾಗಿಲ್ಲ. ಏಳು ಇಲಾಖೆಗಳಿಗೆ ಬಜೆಟ್‌ನಲ್ಲಿಸುಮಾರು 33,262 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದ್ದು, ಡಿಸೆಂಬರ್‌ ಅಂತ್ಯದವರೆಗೆ 17,080 ಕೋಟಿ ರೂ.ನಷ್ಟು ಮಾತ್ರ ಬಿಡುಗಡೆಯಾಗಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಸುಮಾರು 4 ಸಾವಿರ ಕೋಟಿ ರೂ. ನಷ್ಟು ಬಿಡುಗಡೆಯಾಗಿದ್ದು, ಜಲ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೊರತುಪಡಿಸಿ
ಉಳಿದ 3 ಇಲಾಖೆಗಳಲ್ಲಿ ಇನ್ನೂ ಬಿಡುಗಡೆಯಾದ ಹಣ ಪೂರ್ಣ ಪ್ರಮಾಣದಲ್ಲಿ ವೆಚ್ಚ ಸಹ ಆಗಿಲ್ಲ. ಬರ ಹಿನ್ನೆಲೆ ರೈತಾಪಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಲು ಮೇಲ್ಕಂಡ ಇಲಾಖೆಗಳಿಗೆ ಅನುದಾನ ಒದಗಿಸದ ಕಾರಣ ಸಮಗ್ರ ಅಭಿವೃದ್ಧಿ ಎಂಬುದು
ಬಾಯಿಮಾತಿನಲ್ಲೇ ಉಳಿಯುವಂತಾಗಿದೆ.

ಪಶು ಸಂಗೋಪನೆ ಮತ್ತು ಮೀನುಗಾರಿಕೆ: ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು 4 ರೂ.ನಿಂದ 5 ರೂ.ಗೆ ಹೆಚ್ಚಿಸುವ ಮೂಲಕ ಪಶು ಸಂಗೋಪನಾ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರುವ ಮುನ್ಸೂಚನೆ ನೀಡಿದ್ದ ಸರ್ಕಾರಕ್ಕೆ ಬರ ತೀವ್ರ
ಹಿನ್ನಡೆ ಉಂಟುಮಾಡಿತ್ತು. ಸರ್ಕಾರ ಸೂಕ್ತ ಅನುದಾನ ಒದಗಿಸದ ಕಾರಣ ಸಕಾಲಕ್ಕೆ ಹಾಲು ಪ್ರೋತ್ಸಾಹ ಧನ ತಲುಪದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. 2016-17ನೇ ಸಾಲಿನಲ್ಲಿ ಪಶು ಸಂಗೋಪನೆ, ಮೀನುಗಾರಿಕೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಒಟ್ಟು 2187.26 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತಾದರೂ ಡಿಸೆಂಬರ್‌ ಅಂತ್ಯದವರೆಗೆ 1162.90 ರೂ. ಮಾತ್ರ 
ಬಿಡುಗಡೆಯಾಗಿದೆ. ಇದರ ನಡುವೆಯೂ ಕುರಿ ಸಾಕಣೆ ಉದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿದ್ದು ಈ ಬಾರಿಯ ಪ್ರಮುಖ ಸಾಧನೆ.

ಜಲ ಸಂಪನ್ಮೂಲ ಇಲಾಖೆಯಲ್ಲೂ ಅದೇ ಕಥೆ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿಕ ಜಲಾಶಯ ನಿರ್ಮಾಣ ಕುರಿತು
1971ರಿಂದ ಚರ್ಚೆಯಲ್ಲೇ ಇದ್ದ ಯೋಜನೆಗೆ (5912 ಕೋಟಿ ರೂ. ವೆಚ್ಚ) ಸರ್ಕಾರ ತಾತ್ವಿಕ ಅನುಮೋದನೆ ನೀಡಿದ್ದು ಈ ವರ್ಷದ ಜಲ ಸಂಪನ್ಮೂಲ ಇಲಾಖೆಯ ಪ್ರಮುಖ ಸಾಧನೆ. ಜಲ ಸಂಪನ್ಮೂಲ ಇಲಾಖೆಗೆ (ಸಣ್ಣ ನೀರಾವರಿ ಸೇರಿ) 2016-17ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು 11389.26 ಕೋಟಿ ರೂ. ಹಂಚಿಕೆಯಾಗಿದ್ದು, ಈ ಪೈಕಿ ಡಿಸೆಂಬರ್‌ ಅಂತ್ಯದವರೆಗೆ 4484.27 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.  

Advertisement

ಕೃಷಿ ಮತ್ತು ತೋಟಗಾರಿಕೆ 2016-17ನೇ ಸಾಲಿನಲ್ಲಿ ಮುಂದುವರಿದ ಕಾರ್ಯಕ್ರಮಗಳ ಜತೆಗೆ ಹೊಸದಾಗಿ ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ, ವಿಶೇಷ ಕೃಷಿ ವಲಯ, ಸುವರ್ಣ ಕೃಷಿ ಗ್ರಾಮ ಯೋಜನೆ, ದ್ವಿದಳ ಧಾನ್ಯ ಅಭಿಯಾನ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ ಮತ್ತಿತರ ಕಾರ್ಯ ಕ್ರಮಗಳನ್ನು ಪ್ರಕಟಿಸಿದ್ದ ಸರ್ಕಾರ, ಅದಕ್ಕಾಗಿ ಒಟ್ಟು 5464.27
ಕೋಟಿ ರೂ. ಅನುದಾನ ನಿಗದಿಪಡಿಸಿತ್ತು. ಈ ಪೈಕಿ ಡಿಸೆಂಬರ್‌ ಅಂತ್ಯದವರೆಗೆ 2947.01 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.  

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಗ್ರಾಮೀಧಿಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ 2016-ಧಿ17ನೇ ಸಾಲಿನಲ್ಲಿ
12758.14 ಕೋಟಿ ರೂ. ನಿಗದಿಪಡಿಸಿ, ಡಿಸೆಂಬರ್‌ ಅಂತ್ಯದವರೆಗೆ 7736.19 ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮ
ವಿಕಾಸ, ನಮ್ಮ ಗ್ರಾಮ ನಮ್ಮ ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ಹಮ್ಮಿಕೊಳ್ಳಲಾಗಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಇಲಾಖೆಗೆ ಹಣ ಬಿಡುಗಡೆಯಾಗದ ಕಾರಣ ಯೋಜನೆಗಳು ಸಮರ್ಪಕವಾಗಿ
ಜಾರಿಗೆ ಬಂದಿಲ್ಲ. ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಸರ್ಕಾರ ಗುರಿ ಸಾಧನೆ ಮಾಡುವ ಮೂಲಕ ಏಳು ಸಾವಿರಕ್ಕೂ ಹೆಚ್ಚು ಘಟಕಗಳನ್ನು ಸ್ಥಾಪಿಸಿದೆಯಾದರೂ ಆ ಪೈಕಿ ಸಾಕಷ್ಟು ಘಟಕಗಳು ಸಮರ್ಪಕ ಕಾರ್ಯಧಿನಿರ್ವಹಿಸುತ್ತಿಲ್ಲ. ಬರ ಸಂದರ್ಭದಲ್ಲಿ ದುಡಿಧಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ ಕೇಂದ್ರದಿಂದ 2400 ಕೋಟಿ ರೂ.
(ರಾಜ್ಯದ ಪಾಲು ಶೇ. 10) ಜತೆಗೆ ಹೆಚ್ಚುವರಿಯಾಗಿ 1600 ಕೋಟಿ ರೂ. ಲಭಿಸಿದೆ. ಬರ ಪರಿಸ್ಥಿತಿ ಹಿನ್ನೆಲೆ ಉದ್ಯೋಗದ ದಿನಗಳನ್ನು 150ಕ್ಕೆ ಹೆಚ್ಚಿಸಿ ಒಟ್ಟು ಕೆಲಸದ ದಿನಗಳನ್ನು 10 ಕೋಟಿಗೆ ಹೆಚ್ಚಿಸಿದ ಪರಿಣಾಮ ದುಡಿಯುವ ಕೈಗಳಿಗೆ ಕೆಲಸ ದೊರೆತಿದ್ದು
ಸಮಾಧಾನಕರ ಸಂಗತಿ. 

Advertisement

Udayavani is now on Telegram. Click here to join our channel and stay updated with the latest news.

Next