Advertisement
ಈ ಭಾಗದಲ್ಲಿ ಐಟಿ ಉದ್ಯಮ ಬೆಳೆಯಬೇಕು, ಪದವೀಧರರ ವಲಸೆ ತಡೆಯಬೇಕು, ಇನ್ಫೋಸಿಸ್ ಕಂಪೆನಿ ಹುಬ್ಬಳ್ಳಿ ಶಾಖೆ ಆರಂಭಿಸಬೇಕು, ಕೊರೊನಾ ಇನ್ನಿತರ ಕಾರಣಗಳಿಂದಾಗಿ ಬೆಂಗಳೂರು, ಮುಂಬೈ ಇನ್ನಿತರ ಕಡೆಯಲ್ಲಿರುವ ಉತ್ತರ ಕರ್ನಾಟಕದ ಐಟಿ ಉದ್ಯೋಗಿ-ಉದ್ಯಮಾಸಕ್ತರು ಈ ಕಡೆ ಮರಳುವಂತಾಗಬೇಕು ಎಂಬ ಅನಿಸಿಕೆಗಳನಡುವೆಯೇ ಐಟಿ ಪಾರ್ಕ್ ಕಟ್ಟಡ ಸೌಲಭ್ಯಗಳಕೊರತೆಯಿಂದ ನರಳುತ್ತಿದೆ. ಇದ್ದ ಒಂದಿಷ್ಟು ಕಂಪೆನಿ, ಸಂಸ್ಥೆಗಳು ಹೊರಹೋಗಿದ್ದು, ಶೇ.50 ಖಾಲಿ ಉಳಿಯುವಂತಾಗಿದೆ.
Related Articles
Advertisement
ಬಾಡಿಗೆ ದುಬಾರಿ?: ಐಟಿ ಪಾರ್ಕ್ ಕಟ್ಟಡದಲ್ಲಿ ಸಮರ್ಪಕ ನಿರ್ವಹಣೆ ಕೊರತೆ ಗೋಚರಿಸುತ್ತದೆ. ಆದರೆ, ಕಟ್ಟಡದಲ್ಲಿ ಬಾಡಿಗೆ ಮಾತ್ರ ಪ್ರತಿ ಚದರ ಅಡಿಗೆ 24 ರೂ. ನಿಗದಿ ಪಡಿಸಿರುವುದು, ಸಮರ್ಪಕಸೌಲಭ್ಯಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಐಟಿ ಉದ್ಯಮಿಗಳು ಕಟ್ಟಡದಲ್ಲಿ ಕಚೇರಿ ಆರಂಭಕ್ಕೆಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.ಸರಕಾರದಿಂದ ಕೋಟ್ಯಂತರ ರೂ. ವೆಚ್ಚದಲ್ಲಿನಿರ್ಮಾಣಗೊಂಡಿರುವ ಐಟಿ ಪಾರ್ಕ್ ನಿರ್ವಹಣೆಜತೆಗೆ ವಿವಿಧ ಸೌಲಭ್ಯಗಳ ನೀಡಿಕೆಯೊಂದಿಗೆ ಐಟಿ ಉದ್ಯಮಿಗಳನ್ನು ಆಕರ್ಷಿಸುವ ಯತ್ನಕ್ಕೆಮುಂದಾಗಬೇಕಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿಬೆಂಗಳೂರು, ಮುಂಬೈ ಇನ್ನಿತರ ಕಡೆಯ ಉತ್ತರ ಕರ್ನಾಟಕದ ಐಟಿ ಉದ್ಯೋಗಿಗಳು, ಉದ್ಯಮಿಗಳು ಹಾಗೂ ನವೋದ್ಯಮಿಗಳು ಈ ಭಾಗದಲ್ಲಿ ಉದ್ಯಮ ಆರಂಭಕ್ಕೆ ಆಸಕ್ತಿತೋರುತ್ತಿದ್ದು, ಅಂತಹವರನ್ನು ಆಕರ್ಷಿಸುವ ನಿಟ್ಟಿನಲ್ಲಿ ಗಂಭೀರ ಯತ್ನಗಳು ನಡೆಯಬೇಕಾಗಿದೆ ಎಂಬುದು ಹಲವರ ಅನಿಸಿಕೆಯಾಗಿದೆ.
ಈಡೇರದ ಕಿಯೋನೆಕ್ಸ್ ಎಂಡಿ ಭರವಸೆ :
ಇತ್ತೀಚೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕಿಯೋನೆಕ್ಸ್ ವ್ಯವಸ್ಥಾಪಕನಿರ್ದೇಶಕ ಸಿದ್ರಾಮಪ್ಪ ಅವರು, ಐಟಿ ಪಾರ್ಕ್‌ನಲ್ಲಿ ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಸಮರ್ಪಕ ನಿರ್ವಹಣೆ ಇಲ್ಲದಿರುವುದುಇನ್ನಿತರ ಸಮಸ್ಯೆಗಳನ್ನುಖುದ್ದಾಗಿ ವೀಕ್ಷಿಸಿದ್ದರು. ದುರಸ್ತಿ ಹಾಗೂ ಸುಧಾರಣೆ ಕ್ರಮದಭರವಸೆ ನೀಡಿದ್ದು, ಅದಿನ್ನೂ ಜಾರಿಯಾಗಬೇಕಾಗಿದೆ.
ಮತ್ತೂಂದು ಐಟಿ ಪಾರ್ಕ್‌ಗೆ ಚಿಂತನೆ? :
ಗೋಕುಲ ರಸ್ತೆಯ ಅರ್ಜುನ ವಿಹಾರದಲ್ಲಿ ಕಿಯೋನೆಕ್ಸ್‌ಗೆ ನೀಡಲಾದ ಸುಮಾರು 1 ಎಕರೆ ಭೂಮಿ ಇದ್ದು, ಅಲ್ಲಿ ಮತ್ತೂಂದು ಐಟಿ ಪಾರ್ಕ್ ಅನ್ನು ಸುಸಜ್ಜಿತರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂಬುದು ಕೆಲಐಟಿ ಉದ್ಯಮಿಗಳ ಪ್ರಸ್ತಾವನೆಯಾಗಿದೆ. ಇನ್ನೊಂದು ಐಟಿ ಪಾರ್ಕ್ ನಿರ್ಮಾಣ ಕುರಿತಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹಾಗೂ ಕಿಯೋನೆಕ್ಸ್ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ತರಲಾಗಿದ್ದು, ಸದ್ಯದ ಸ್ಥಿತಿಯಲ್ಲಿ ಕಟ್ಟಡ ನಿರ್ಮಾಣಕಷ್ಟಸಾಧ್ಯವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿನಿರ್ಮಾಣಕ್ಕೆ ಮುಂದಾದರೂ ಕೋವಿಡ್-19ಹೊಡೆತದ ಹಿನ್ನೆಲೆಯಲ್ಲಿ ಖಾಸಗಿ ಪಾಲುದಾರರುಮುಂದಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.
-ಅಮರೇಗೌಡ ಗೋನವಾರ