Advertisement

ಗುಣಮುಖರಾದರೂ ಸೋಂಕು ಲಕ್ಷಣ!

08:31 PM May 12, 2022 | Team Udayavani |

ನವದೆಹಲಿ: ಕೊರೊನಾ ಸೋಂಕು ಬಂದು ಅದರಿಂದ ಚೇತರಿಸಿಕೊಂಡು ಎರಡು ವರ್ಷವಾದರೂ ಬಹುತೇಕರಲ್ಲಿ ಸೋಂಕಿನ ಕೆಲ ಲಕ್ಷಣ ಇನ್ನೂ ಉಳಿದುಕೊಂಡಿದೆ.

Advertisement

ಹೀಗೆಂದು “ದಿ ಲ್ಯಾನ್ಸೆಟ್‌’ ವೈದ್ಯಕೀಯ ಜರ್ನಲ್‌ ನಡೆಸಿರುವ ವರದಿ ಪ್ರಕಟಿಸಿದೆ.

“ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಬಹುತೇಕರಲ್ಲಿ ಹಲವು ಅಂಗಾಂಗಗಳು ದೀರ್ಘಾವಧಿ ಸಮಸ್ಯೆಗೆ ತೆರೆದುಕೊಂಡಿರುವುದು ಕಂಡುಬಂದಿದೆ.

2 ವರ್ಷಗಳಲ್ಲಿ ಅವರು ಮಾನಸಿಕವಾಗಿ ಸಾಕಷ್ಟು ಸುಧಾರಣೆಗಳನ್ನು ಕಂಡು ಕೆಲಸಕ್ಕೆ ಮರಳಿದ್ದಾರಾದರೂ ಅನೇಕ ರೋಗ ಲಕ್ಷಣಗಳು ಇನ್ನೂ ಉಳಿದುಕೊಂಡಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಅದನ್ನು “ದೀರ್ಘಾವಧಿ ಕೊರೊನಾ’ ಎಂದು ಹೆಸರಿಸಲಾಗಿದ್ದು, ಅದರತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next