ಕಾಪು : ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಶತ, ವಜ್ರ, ಸ್ವರ್ಣ ಸಂಭ್ರಮದ ಸವಿನೆನಪಿಗಾಗಿ ಡಾ| ಬಿ.ಆರ್. ಮತ್ತು ಸಿ.ಆರ್ ಶೆಟ್ಟಿ ಫೌಂಡೇಶನ್ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಮಲ್ಪೆಯಿಂದ ಕಾಪುವಿನವರೆಗೆ ಡಿ. 25ರಂದು ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್‌ಗೆ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಚಾಲನೆ ನೀಡಿದರು.
ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ನಡೆದ ಹಾಫ್ ಮ್ಯಾರಥಾನ್ ಓಟದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳ ಸುಮಾರು 300ಕ್ಕೂ ಅಧಿಕ ಮಂದಿ ವಿವಿಧ ವಯೋಮಾನದ ಜನರು ಪಾಲ್ಗೊಂಡರು. ಸೀನಿಯರ್ ವಿಭಾಗದ ವಿದ್ಯಾರ್ಥಿಗಳ ಹಾಫ್ ಮ್ಯಾರಥಾನ್‌ಗೆ ಮಲ್ಪೆಯಿಂದ ಮತ್ತು ಜೂನಿಯರ್ ವಿಭಾಗದ ಸ್ಪರ್ಧೆಗೆ ಮಟ್ಟುವಿನಿಂದ ಚಾಲನೆ ನೀಡಲಾಯಿತು.
ಉಡುಪಿ ಬಿ.ಆರ್. ಲೈಫ್ ಹಾಗೂ ಕೂಸಮ್ಮ ಶಂಭು ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಗಳು, ತ್ರಿವಳಿ ಸಂಸ್ಥೆಗಳ ಹಳೇ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪೋಷಕರು ಸ್ವಯಂ ಸೇವಕರಾಗಿ ಮ್ಯಾರಥಾನ್‌ನ ಯಶಸ್ಸಿಗೆ ಸಹಕರಿಸಿದರು.
ಪೊಲಿಪು ಸರಕಾರಿ ವಿದ್ಯಾ ಸಂಸ್ಥೆಗಳ ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ / ಶಾಸಕ ಲಾಲಾಜಿ ಆರ್. ಮೆಂಡನ್, ಅನಿವಾಸಿ ಭಾರತೀಯ ಉದ್ಯಮಿ ಬಾವುಗುತ್ತು ರಘುರಾಮ ಶೆಟ್ಟಿ, ಜಿಲ್ಲಾ ದೆ„ಹಿಕ ಶಿಕ್ಷಣಾಧಿಕಾರಿ ಕೆ. ಮಧುಕರ್, ಉಡುಪಿ ನಗರಸಭೆಯ ಸದಸ್ಯರಾದ ಲಕೀÒ$¾ ಮಂಜುನಾಥ್, ಎಡ್ವಿನ್ ಕರ್ಕಡ, ಶತ, ವಜ್ರ, ಸ್ವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಸರ್ವೋತ್ತಮ್ ಕುಂದರ್, ಪ್ರಧಾನ ಕಾರ್ಯದರ್ಶಿ ಕಿರಣ್ ಆಳ್ವ, ಮುಂಬೈ ಸಮಿತಿಯ ಅಧ್ಯಕ್ಷ ಸುರೇಂದ್ರ ಎನ್. ಸುವರ್ಣ, ಹಳೆ ವಿದ್ಯಾರ್ಥಿ ಭಾಸ್ಕರ್ ಶೆಟ್ಟಿ ಯುಎಸ್‌ಎ, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷ ಪ್ರವೀಣ್ ಕುಂದರ್, ಡಾ| ಶಿಶಿರ್ ಶೆಟ್ಟಿ ಮಂಗಳೂರು, ಡೊಮಿನಿಕ್ ಥಾಮಸ್, ಪೊಲಿಪು ಪ. ಪೂ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ಎಸ್., ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರಮಣಿ ವೈ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಎಚ್.ಎಸ್. ಅನಸೂಯಾ, ಹಳೇ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.