ಬೆಂಗಳೂರು : ರಾಜ್ಯಸಭೆ, ವಿಧಾನಸಭೆಗಳಲ್ಲಿ ನಡೆಯುತ್ತಿರುವ ಗದ್ದಲ, ಗಲಾಟೆ ತಡೆಯುವ ನಿಟ್ಟಿನಲ್ಲಿ ಚರ್ಚಿಸಲು ಅರ್ಧ ದಿನದ ಜಂಟಿ ಅಧಿವೇಶನ ಕರೆಯಲು ತೀರ್ಮಾನ ಮಾಡಲಾಗಿದೆ. ಸೆಪ್ಟಂಬರ್ 24 ರಂದು ಅರ್ಧ ದಿನ ಚರ್ಚೆಗೆ ತೀರ್ಮಾನಿಸಲಾಗಿದೆ ಎಂದು ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಿಯಮ ಪಾಲಿಸಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಆರು ತಿಂಗಳಾದ ಮೇಲೆ ಈ ಅಧಿವೇಶನ 10 ದಿನ ನಡೆಯಲಿದೆ. ಗಂಭೀರವಾಗಿ ಸದನ ನಡೆಸಲು ತೀರ್ಮಾನಿಸಿದ್ದೇವೆ. ಸಿಎಂ ಹಾಗೂ ಸಚಿವರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಾಗಲು ಸೂಚಿಸಿದ್ದೇನೆ. ಮಂತ್ರಿಗಳು ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದಂತೆ ಸೂಚಿಸಿದ್ದೇನೆ. ಯಾರೂ ರಜೆಯ ಪತ್ರ ನೀಡಬಾರದು ಅಂತ ಕೇಳಿಕೊಂಡಿದ್ದೇನೆ. ಅನಿವಾರ್ಯ ಕಾರಣ ಇದ್ದರೆ ಸಹಕರಿಸಲಾಗುವುದು. ಆದರೆ, ನೆಪ ಹೇಳಿ ಗೈರು ಹಾಜರಾಗಲು ಅವಕಾಶ ಇಲ್ಲ. ಸದಸ್ಯರಿಗೂ ಇದು ಅನ್ವಯಿಸುತ್ತದೆ. ವ್ಯವಸ್ಥೆ ಸುಧಾರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ : ರಚಿತಾ ರಾಮ್ ಥ್ರಿಲ್ ಆಗೋದಕ್ಕೆ ಸೋದರಿ ನಿತ್ಯಾ ರಾಮ್ ಕಾರಣವಂತೆ!
ಅಧಿಕಾರಿಗಳೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಉತ್ತರಗಳನ್ನು ಕಾಲ ಕಾಲಕ್ಕೆ ನೀಡಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ಬಲ. ಪಡಿಸಲು ಎಲ್ಲರೂ ಸಹಕರಿಸಬೇಕು. ಇನ್ನು, ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ತೀರ್ಮಾನ ಮಾಡಲಾಗಿದೆ. ಇದನ್ನು ಕಮಿಟಿ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ದಾರೆ.
ನೀತಿ ನಿರೂಪನಣಾ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿ ಸಿಎಂ ಪ್ರತಿಪಕ್ಷದ ನಾಯಕರು ಇರುತ್ತಾರೆ. ಅದರಲ್ಲಿ ಏನು ನಿಯಮ.ಇರಬೇಕು ಎಂದು ತೀರ್ಮಾನಿಸಿದೆ. ಸಂವಿಧಾನಿಕ ಕ್ಲಬ್ ಬಗ್ಗೆಯೂ ಚರ್ಚೆ ಮಾಡಲು ತೀರ್ಮಾನ ಮಾಡಲಾಗಿದೆ. ಇನ್ನು, ಈ ಬಾರಿ ನಮ್ಮ ಅನೇಕ ಹಿರಿಯರು ಸ್ವರ್ಗಸ್ಥರಾಗಿದ್ದಾರೆ. ಈ ಬಾರಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇದೆ. ಆದರೆ ಶಾಲೆ ಮಕ್ಕಳನ್ನು ಕರೆದುಕೊಂಡು ಬರಲು ಅವಕಾಶ ಇಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೈಗಾರಿಕಾ ವಲಯದ ನೌಕರರಿಗೆ ತಯಾರಾಗುತ್ತಿದೆ ಎಸಿ ಹೆಲ್ಮೆಟ್ | ವಿಶೇಷತೆ ಏನು.?ಇಲ್ಲಿದೆ ಮಾಹಿತಿ