Advertisement
ರಸ್ತೆಯು ಸುಮಾರು 4 ಕಿ.ಮೀ. ಉದ್ದವಿದ್ದು, 2 ಕಿ.ಮೀ. ರಸ್ತೆಯು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಕಳೆದ ಜನವರಿಯಲ್ಲಿ ಮರುಡಾಮರೀಕರಣಗೊಂಡಿತ್ತು. ಈ ಹಿಂದೆ ಸ್ಥಳೀಯರು ಕ್ರಷರ್ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಸಿದ್ದ ಪರಿಣಾಮ ಕ್ರಷರ್ ಮಾಲಕರು ಅಲ್ಲಲ್ಲಿ ತೇಪೆಕಾರ್ಯ ನಡೆಸಿದ್ದು ಬಿಟ್ಟರೆ ಉಳಿದ 2 ಕಿ.ಮೀ. ರಸ್ತೆಗೆ ಯಾವುದೇ ಕಾಮಾಗಾರಿ ನಡೆದಿಲ್ಲ.
Related Articles
Advertisement
ಈ ಭಾಗದಲ್ಲಿ ಕ್ರಷರ್‌ಗಳಿದ್ದು ಬೃಹತ್ ಲಾರಿಗಳು ಸಂಚರಿಸಿ ರಸ್ತೆಗಳಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿವೆ. ಕಳೆದ ನಾಲ್ಕು ತಿಂಗಳ ಹಿಂದೆ ಕಲ್ಯಾ ಕೈರಬೆಟ್ಟು ನಿವಾಸಿಗಳು ಕ್ರಷರ್‌ಗಳ ವಿರುದ್ದ ಬೃಹತ್ ಘನ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದ್ದರು. ಘನವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಫೋನ್-ಇನ್ ಕಾರ್ಯಕ್ರಮದಲ್ಲಿಯೂ ಗ್ರಾಮಸ್ಥರು ಗಮನ ಸೆಳೆದಿದ್ದರು.
– ಸಂದೇಶ ಪಳ್ಳಿ