Advertisement

ಹಳೇಬೀಡು ಪ್ರಥಮ ದರ್ಜೆ ಕಾಲೇಜು ಸೀಲ್‌ಡೌನ್‌

01:00 PM Jan 16, 2022 | Team Udayavani |

ಹಳೇಬೀಡು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಮಾರು 5 ಪ್ರಾಧ್ಯಾಪಕರಿಗೆ ಹಾಗೂ 9 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕು ಆರೋಗ್ಯ ಇಲಾಖೆ ಹಳೇಬೀಡು ಕಾಲೇಜನ್ನು ಸಂಪೂರ್ಣವಾಗಿ ಸೀಲ್‌ ಡೌನ್‌ ಮಾಡಿದೆ.

Advertisement

ಪ್ರಥಮ ದರ್ಜೆ ಕಾಲೇಜಿನಲ್ಲಿ 10ಕ್ಕೂ ಹೆಚ್ಚು ಪ್ರಾಧ್ಯಾಪಕರು, ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 300 ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಿತ್ತಿದ್ದು, ಇದರಲ್ಲಿ ಹೆಚ್ಚಿನ ಪ್ರಾಧ್ಯಾ ಪಕರು ಹಾಸನ ಮತ್ತು ಬೇಲೂರಿನಿಂದ ಬರುವವರಾಗಿದ್ದರು. 10 ಮಂದಿಯಲ್ಲಿ 5 ಮಂದಿಗೆ ಹಾಗೂ 09 ಮಂದಿ ವಿದ್ಯಾರ್ಥಿಗಳಿಗೆ ಸೋಂಕು ದೃಢಪಡ್ಡಿದ್ದು, ಎಲ್ಲ ಉಪನ್ಯಾಸಕರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಸಾಮೂಹಿವಾಗಿ ಕೊರೊನಾ ಪರೀಕ್ಷೆ: ಪ್ರಾಧ್ಯಾಪಕರಿಗೆ ಸೊಂಕು ದೃಢಪಟ್ಟ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಕೊರೊನಾ ಟೆಸ್ಟ್‌ ಮಾಡಿದರು. ಸೋಂಕು ವಿದ್ಯಾರ್ಥಿ ಗಳಿಗೆ ಹರಡುವ ಮುನ್ನೆಚ್ಚರಿಕೆ ಹಿನ್ನೆಲೆ 7 ದಿನಗಳ ಕಾಲ ಸೀಲ್‌ಡೌನ್‌ ಮಾಡಿದ್ದಾರೆ.

ಹಳೇಬೀಡು ವೈದ್ಯಾಧಿಕಾರಿ ಡಾ. ಅನಿಲ್‌ ಮಾತನಾಡಿ, ಪ್ರಥಮ ಹಂತದಲ್ಲಿಯೇ ಪ್ರಾಧ್ಯಾಪಕರು ಕೊರೊನಾ ಪರೀಕ್ಷೆ ಮಾಡಿಸಿದ್ದು, ಸೊಂಕು ದೃಢಪಟ್ಟ ತಕ್ಷಣ ತಮ್ಮ ಸಂಪರ್ಕದಲ್ಲಿರುವವರಿಗೆ ಟೆಸ್ಟ್‌ ಮಾಡಿ ಸಲು ತಿಳಿಸಿರುವ ಪರಿಣಾಮ ಹೆಚ್ಚು ಮಂದಿಗೆ ಸೊಂಕು ಹರಡದಂತೆ ತಡೆಯಲು ಸಾಧ್ಯವಾಗಿದೆ. ಹಳೇಬೀಡಿ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು.

ಮಾರ್ಗಸೂಚಿ ಪಾಲಿಸದಿದ್ದರೆ ದಂಡ :

Advertisement

ಕೊರೊನಾ ಸೋಂಕು ಹೋಬಳಿ ಹಂತದಲ್ಲೂ ಹೆಚ್ಚಾಗಿರುವ ಕಾರಣ ಕಠಿಣ ಕ್ರಮ ಕೈಗೊಳ್ಳ ಬೇಕಾಗಿದ್ದು ಅನಿವಾರ್ಯ. ಆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು ಅರಿವು ಮೂಡಿಸುವುದರ ಜತೆಗೆ ನಿಯಮ ಪಾಲಿಸ ದವರ ವಿರುದ್ಧ ದಂಡ ಹಾಕುವುದ ರೊಂದಿಗೆ ಕ್ರಮಕೈಗೊಳ್ಳಲಾಗುತ್ತದೆ. ಹಳೇಬೀಡು ವಿಶ್ವ ಪ್ರಸಿದ್ಧ ಸ್ಥಳವಾಗಿದ್ದು, ಹೊರರಾಜ್ಯ, ವಿದೇಶ ಗಳಿಂದ ಜನಆಗಮಿಸುತ್ತಾರೆ. ಹೀಗಾಗಿ ಆರೋಗ್ಯ ಭದ್ರತೆ ಅನಿವಾರ್ಯ ಆದ್ದರಿಂದ ಮಾಸ್ಕ್ ಧರಿಸದೆ ನಿಯಮ ಪಾಲಿಸಿದವರ ವಿರುದ್ಧ 100 ರೂ. ದಂಡ ಹಾಕುವ ಮೂಲಕ ಜಾಗೃತಿ ಮೂಡಿ ಸಲುಸೂಚಿಸಿದ್ದೇನೆ ಎಂದು ಹಳೇಬೀಡು ಉಪನಿರೀಕ್ಷಕ ದೇವರಾಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next