Advertisement

ಹೊಯ್ಸಳ ಶಿಲ್ಪ ಕಲೆಗೆ ಆಧ್ಯಾತ್ಮ ಪ್ರೇರಣೆ

05:25 PM Feb 05, 2020 | Naveen |

ಹಳೇಬೀಡು: ಎಲ್ಲಾ ಧರ್ಮಗಳಿಗೂ ಆಧ್ಯಾತ್ಮವೇ ಮೂಲ ಎಂದು ಸಂಶೋಧಕ ಮತ್ತು ಸಾಹಿತಿ ಶ್ರೀವತ್ಸ ಎಸ್‌.ವಟಿ ಅಭಿಪ್ರಾಯಪಟ್ಟರು.

Advertisement

ಹಳೇಬೀಡಿನ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಹೊಯ್ಸಳರ ಕಾಲದಲ್ಲಿ ದೇವಾಲಯಗಳು ಮತ್ತು ಆಧ್ಯಾತ್ಮಿಕತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಹೊಯ್ಸಳರ ಕಾಲದ ದೇವಾಲಯದ ನಿರ್ಮಾಣಕ್ಕೆ ಆಧ್ಯಾತ್ಮಿಕತೆಯೇ ಪ್ರೇರಣೆಯಾಗಿದೆ. ಆಧ್ಯಾತ್ಮ ಎಂಬುದು ನಮ್ಮ ನಂಬಿಕೆಗಳಲ್ಲಿ ಒಂದಾಗಿದೆ. ಭಾರತೀಯ ಸಮಾಜದಲ್ಲಿ ದೇವರನ್ನು ಆರಾಧಿಸುವುದು ಸಹಜ. ಅದನ್ನು ಮೂರ್ತರೂಪದಲ್ಲಿ ಪೂಜಿಸಿ ದೇವರನ್ನು ಕಂಡುಕೊಳ್ಳುವ ರೀತಿಯಲ್ಲಿ ಒಂದಾಗಿದೆ.

ಆಧ್ಯಾತ್ಮಿಕತೆ ಆಧರಿಸಿ ಚಿಂತನೆ ಬೆಳೆದಂತೆ ವಿವಿಧ ಉಪ ಪ್ರಕಾರಗಳು ವಿಸ್ತೀರ್ಣವಾದವು. ದೇವರ ರೂಪವನ್ನು ಯಾರೂ ಕಂಡಿಲ್ಲ. ಮಾನವನ ಚಿಂತನೆಗೆ ಅನುಗುಣವಾಗಿ ದೇವರ ಮೂರ್ತಿ ರೂಪ ಪಡೆಯತೊಡಗಿತು ಎಂದರು.

ಧರ್ಮದ ಮೂಲ ದೇವರು: ಧರ್ಮದ ಮೂಲ ದೇವರು. ದೇವರನ್ನು ಆರಾಧಿಸುವುದಕ್ಕೆ ದೇಗುಲಗಳು ನಿರ್ಮಾಣವಾಗಿದೆ. ಶೈವ, ವೈಷ್ಣವ ಜೈನ ಸೇರಿದಂತೆ ಎಲ್ಲಾ ಧರ್ಮದ ಅನುಯಾಯಿಗಳಿಗೆ ಆಶ್ರಯ ನೀಡಿದ ಕೀರ್ತಿ ಹೊಯ್ಸಳರ ಅರಸರಿಗೆ ಸಲ್ಲುತ್ತದೆ. ಹೊಯ್ಸಳರ ಕಾಲದಲ್ಲಿ ನಿತ್ಯ ಮರಣ ದೇವಾಲಯಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಕುಟುಂಬದಲ್ಲಿ ಮೃತರಾದ ವ್ಯಕ್ತಿಯ ನೆನಪಿಗೆ ದೇವಾಲಯಗಳು ನಿರ್ಮಾಣವಾಗಿದೆ.

ಉದಾಹರಣೆ ವಿಷ್ಣುವರ್ಧನನ ತಮ್ಮ ಉದಾಯದಿತ್ಯ ಮೃತಪಟ್ಟಾಗ ಕೆಲವತ್ತಿ ಗ್ರಾಮದಲ್ಲಿ ವಿಷ್ಣು ದೇವಾಲಯ ನಿರ್ಮಾಣವಾದ ಉಲ್ಲೇಖವಿದೆ. ಹಾಗೆಯೇ ನಾಟ್ಯರಾಣಿ ಶಾಂತಲೆ ಮೃತಪಟ್ಟಾಗ ಶಾಂತಲೇಶ್ವರ ದೇವಾಲಯ ಸೇರಿದಂತೆ ಇನ್ನೂ ಅನೇಕ ದೇವಾಲಯಗಳು ನಿರ್ಮಾಣವಾಗಿರುವ ಉಲ್ಲೇಖವಿದೆ ಎಂದು ಹೇಳಿದರು.

Advertisement

ಜಿನಾಲಯಗಳಿಗೆ ಪ್ರಾಮುಖ್ಯತೆ: ಹೊಯ್ಸಳರ ಕಾಲದಲ್ಲಿ ಜೈನ, ಶೈವ, ವೈಷ್ಣವ ಧರ್ಮಗಳು ಪ್ರಧಾನ ಆಚರಣೆಯಲ್ಲಿದ್ದವು. ಹೊಯ್ಸಳರ ಆರಂಭಕಾಲದಲ್ಲಿ ಮೂಡಿಗೆರೆ ತಾಲೂಕು ಅಂಗಡಿಗ್ರಾಮದಲ್ಲಿ ಜೈನ ಜಿನಾಲಯಗಳಿಗೆ ಪ್ರಾಮುಖ್ಯತೆ ನೀಡಿ ನಂತರದಲ್ಲಿ ವೈಷ್ಣವ ಮತ್ತು ಶೈವ ದೇವಾಲಯದ ನಿರ್ಮಾಣಕ್ಕೆ ಮುಂದಾದರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next