Advertisement
ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಐದನೇ ದಿನದ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶದ ಬಗ್ಗೆ ಉಪನ್ಯಾಸ ನೀಡಿದ ಅವರು, ರಾಕೆಟ್ ಎಂಜಿನ್, ತಯಾರಿಕೆಯಲ್ಲಿ ಇತರೆ ರಾಷ್ಟ್ರಗಳು ಮುಂದಿ ದ್ದರೂ ಉಪಗ್ರಹದ ತಂತ್ರಜ್ಞಾನವನ್ನು ಸಾಮಜಿಕ ಜಾಲತಾಣ ವ್ಯವಸ್ಥೆಯಲ್ಲಿ ಬಳಸಿಕೊಂಡು ಶ್ರೀ ಸಾಮಾನ್ಯರಿಗೂ ತಂತ್ರಜ್ಞಾನದ ಉಪಯೋಗ ಬಳಕೆಯಾಗುವಂತೆ ಮಾಡಿದ್ದೇವೆ. ಎಟಿಎಂ, ಹವಾಮಾನ ಮುನ್ಸೂಚನೆ, ಟೀವಿ, ಮೊಬೈಲ್ ಮೊದಲಾದ ದಿನನಿತ್ಯದ ಬಳಕೆಯಲ್ಲಿ ಉಪಗ್ರಹ ತಂತ್ರಜ್ಞಾನ ಉಪಯೋಗಿಸುತ್ತಿದ್ದೇವೆ ಎಂದರು.
Related Articles
ಐದನೇ ಅತಿ ದೊಡ್ಡ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಮೊದಲನೇ ಸ್ಥಾನಕ್ಕೆ ಬರಬೇಕಾದರೆ ದೇಶದ ಯುವಜನತೆ, ತಂತ್ರಜ್ಞಾನ ಬಳಸಿಕೊಂಡು ಹೊಸ ಆವಿಷ್ಕಾರ ಮಾಡಲು ಮುಂದಾಗಬೇಕು. ವಿಜ್ಞಾನದ ಜತೆಗೆ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲಾ ಜಾತಿ ಧರ್ಮವರು ಒಟ್ಟಾಗಿ ಜೀವನ ನಡೆಸಿದರೆ ನಮ್ಮ ದೇಶದ ಏಳಿಗೆ ಸಾದ್ಯ ಎಂಬುದು ತರಳಬಾಳು ಶ್ರೀಗಳ ಆಶಯವಾಗಿದ್ದು, ಅದರಂತೆ ನಾವು ಜೀವನ ನಡೆಸಬೇಕು ಎಂದು ತಿಳಿಸಿದರು.
Advertisement