Advertisement

ತರಳಬಾಳು ಹುಣ್ಣಿಮೆ ಮಹೋತ್ಸವ ಸಂಪನ್ನ

04:43 PM Feb 10, 2020 | Naveen |

ಹಳೇಬೀಡು: ಕಳೆದ 8 ದಿನಗಳಿಂದ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಸಂಪನ್ನಗೊಂಡಿದ್ದು ಕೊನೇ ದಿನವಾದ ಭಾನುವಾರ ಹಳೇಬೀಡಿಗೆ ಜನಸಾಗರವೇ ಹರಿದು ಬಂದಿತ್ತು.

Advertisement

ಡಾ.ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಯವರ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಸಾವಿ ರಾರು ಜನರು ಪಾಲ್ಗೊಂಡು ತರಳಬಾಳು ಉತ್ಸವಕ್ಕೆ ಸಾಕ್ಷಿಯಾದರು. ಹಳೆಬೀಡಿ ನಿಂದ ಸುಮಾರು 3 ಕಿ.ಮೀ. ದೂರದ ಮಾಯಗೌಡಹಳ್ಳಿಗೆ ಹಾಗೂ ಜಾವಗಲ್‌ ಕಡೆಯಿಂದ ಸಾವಿರಾರು ವಾಹನಗಳಲ್ಲಿ ಸಾವಿರಾರು ಜನರು ಉತ್ಸವಕ್ಕೆ ಬಂದು ಸೇರಿ ಕೊನೇ ದಿನದ ಕಾರ್ಯಕ್ರಮ ಕಣ್ತುಂಬಿಕೊಂಡರು.

ಕಳೆದ 10 ವರ್ಷ ಗಳಿಂದ ಒಣಗಿ ಹೋ ಗಿದ್ದ ಹಳೆಬೀಡು ದ್ವಾರ ಸಮುದ್ರ ಕೆರೆ ಭರ್ತಿಯಾಗಿದ್ದು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಯವರ ಕೃಪೆ ಹಾಗೂ ತರಳ ಬಾಳು ಹುಣ್ಣಿಮೆ ಸಂದರ್ಭದಲ್ಲಿಯೇ ಕೆರೆ ತುಂಬಿತು ಎಂದು ಕಾರ್ಯಕ್ರಮದಲ್ಲಿ ಹಲವು ಮುಖಂಡರು ಸ್ಮರಿಸಿದರು. ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ಪುಷ್ಪಗಿರಿ ಮಠದ ಡಾ.ಸೋಮಶೇಖರ್‌ ಶಿವಾಚಾರ್ಯ ಸ್ವಾಮೀಜಿಗಳು, ಶ್ರೀಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮೀಜಿ ಗೃಹ ಸಚಿವ ಬಸವ ರಾಜು ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಸಚಿವ ಬಿ.ಸಿ ಪಾಟೀಲ್‌, ಶಾಸಕರಾದ, ಶ್ಯಾಮ ನೂರು ಶಿವಶಂಕರಪ್ಪ, ಬೆಳ್ಳಿ ಪ್ರಕಾಶ್‌, ಶಾಸಕ ಪ್ರೀತಂಗೌಡ, ಬೇಲೂರಿನ ಶಾಸಕ ಕೆ.ಎಸ್‌.ಲಿಂಗೇಶ್‌. ಹೊಳಲ್ಕೆರೆ ಶಾಸಕ ಚಂದ್ರಪ್ಪ, ಚಿತ್ರಕಲಾ ಪರಿಷತ್‌ ಸದಸ್ಯ ಬಿ.ಎಲ್‌.ಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

ಮಠದ ಸಾಧನೆ: ತರಳು ಬಾಳು ಹುಣ್ಣಿಮೆ ಮಹೋತ್ಸವ ಇದು ಕೇವಲ ತರಳಬಾಳು ಮಹೋತ್ಸವ ಅಲ್ಲ ಇದು ನಾಡಿನ ಹಬ್ಬಗಳಲ್ಲಿ ಒಂದಾಗಿದೆ ಎಂದು ಮಾಜಿ ಸಚಿವರಾದ ಜಿ.ಎಂ. ಸಿದ್ದೇಶ್ವರ್‌ ತಿಳಿಸಿದ್ದಾರೆ.

ಪಟ್ಟಣದ ನಾಟ್ಯರಾಣಿ ಶಾಂತಲ ರಾಣಿ ವೇದಿಕೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮಾತ ನಾಡಿದರು. ನಾಡಿಗೆ ಬರಗಾಲದ ಬಂದತಂಹ ಸಂದರ್ಭದಲ್ಲಿ ಶ್ರೀಗಳು ನೀರು, ಆಹಾರ, ಬಟ್ಟೆ, ಇನ್ನಿತರ ಸೌಲಭ್ಯಗಳನ್ನು ಬಡ ಜನರಿಗೆ ಒದಗಿಸಿದ್ದು ಸಾಧನೆ ಯಾಗಿದೆ. ನಾಡಿನ ಜನರ ಸಮೃದ್ಧ ಜೀವನಕ್ಕಾಗಿ ಶ್ರೀಗಳು ಹಗಲಿ ರುಳು ದುಡಿದಿದ್ದಾರೆ. ಈ ಭಾಗದ ಬಹು ವರ್ಷಗಳ ಕನಸಾಗಿರುವ ರಣಘಟ್ಟ ಯೋ ಜನೆ ಮೂಲಕ ದ್ವಾರಸಮುದ್ರ ಕೆರೆಗೆ ನೀರು ಹರಿಸುವ ಕಾರ್ಯವನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಬಿ.ಎಸ್‌.ಯಡಿ ಯೂರಪ್ಪ ಮಾಡಿಕೊಡುವ ಭರವಸೆ ಕೂಡ ಇದೆ ಎಂದು ಹೇಳಿದರು.

Advertisement

ತರಳಬಾಳು ಹುಣ್ಣಿಮೆ ಕಾರ್ಯ ಕ್ರಮದಲ್ಲಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ತರಲಬಾಳು ಹುಣ್ಣಿಮೆಮಹೋತ್ಸವ ಹಳೆಬೀಡಿನಲ್ಲಿ  ನಡೆಯುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ. ಶ್ರೀಗಳು ಎಲ್ಲೆಲ್ಲಿ ತಮ್ಮ ಪಾದ ಇಡುತ್ತಾರೆ ಆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ. ಕಾರಣ ಶ್ರೀಗಳು ಕೇವಲ ಧಾರ್ಮಿಕ ಕಾರ್ಯಗಳನ್ನು ಮಾತ್ರ ಮಾಡಲಿಲ್ಲ, ಬದಲಾಗಿ ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದವರು. ಅದಕ್ಕಾಗಿ ಪ್ರತಿ ಗ್ರಾಮಗಳ ಕೆರೆ ತುಂಬಿಸುವ ಮಹತ್ತರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next