Advertisement
ಪಂಚಾಯತ್ ಕುಟುಂಬಶ್ರೀ, ಸ್ವಸಹಾಯ ಸಂಘಗಳು, ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದೊಂದಿಗೆ ಬದಿಯಡ್ಕ ಗುರುಸದನದಲ್ಲಿ ಜರಗಿದ ಹಲಸು ಮೇಳವನ್ನು ಉದ್ಘಾಟಿಸಿ ಹೇಳಿದರು.
Related Articles
Advertisement
ಹೆಚ್ಚಿದ ಬೇಡಿಕೆ
ನೂರಾರು ಹಲಸು ಪ್ರಿಯರು ಹಲಸಿನ ಮೇಳಕ್ಕೆ ಆಗಮಿಸಿದ್ದು ತಿನಿಸುಗಳನ್ನು ಕೊಂಡು ಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರಿದರು. ಪ್ರತಿ ಸ್ಟಾಲ್‌ನಲ್ಲಿಯೂ ಜನರ ಗುಂಪು ಆವರಿಸಿರುವುದು ಕಂಡುಬಂತು. ಹಲಸು ಮತ್ತು ವಿವಿಧ ಖಾದ್ಯಗಳ ಆಕರ್ಷಣೆ ವೈವಿಧ್ಯಮಯವಾದ, ಶುಚಿ ರುಚಿಯಾದ 50ಕ್ಕೂ ಮಿಕ್ಕ ಹಲವು ತರದ ಖಾದ್ಯಗಳು ಹಲಸು ಪ್ರಿಯರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಹಲಸಿನ ದೋಸೆ, ಹಲಸಿನ ಕಡುಬು, ಹಲಸಿನ ಪಾಯಸ, ಹಲಸಿನ ಚಿಪ್ಸ್, ಹಲಸು ಮಂಚೂರಿ, ಹಲಸಿನ ಕಾಯಿ ಹಪ್ಪಳ, ಹಲಸಿನ ಹಣ್ಣಿನ ಹಪ್ಪಲ, ಹಲಸಿನ ಸೆಂಡಿಗೆ, ಹಲಸಿನ ಹಲ್ವಾ, ಹಲಸು ಸೋಳೆ, ಹಲಸಿನ ಮಾಂಬಳ, ಹಲಸು ಡ್ರೈ, ಬೇಯಿಸಿದ ಹೆಬ್ಬಲಸು, ಹಲಸಿನ ಐಸ್‌ಕ್ರೀಂ, ಬೇಯಿಸಿದ ಮಾವು, ಬೇಯಿಸಿದ ಅತ್ತಿಕಾಯಿ, ನೆಲ್ಲಿಕಾಯಿ ಉಪ್ಪುನೀರು, ಮಾವಿನ ಮಾಂಬಳ, ಬೆಳ್ಳುಳ್ಳಿ ಸಂಡಿಗೆ, ನೀರುಳ್ಳಿ ಸಂಡಿಗೆ, ಅಕ್ಕಿ ಸಂಡಿಗೆ, ನುಗ್ಗೆ ಸೊಪ್ಪು ಸಂಡಿಗೆ, ರಾಗಿ ಸಂಡಿಗೆ, ಸಾಬಕ್ಕಿ ಸಂಡಿಗೆ, ಒಣಗಿಸಿದ ಲಿಂಬೆ, ಒಣಗಿಸಿದ ಹಲಸಿನ ಬೀಜ, ಮಜ್ಜಿಗೆ ಮೆಣಸು, ರಾಗಿ ಮಾಲ್ಟ್, ಕಷಾಯ ಹುಡಿ, ರಸಂ ಮತ್ತು ಅವಲಕ್ಕಿ ಮಸಾಲೆ, ಸಾಂಬಾರು ಹುಡಿ, ಹುರಿದ ಹುಣಸೆ ಬೀಜ, ಕೆತ್ತೆ ಹುಳಿ, ಬಟಾಟೆ ಹಪ್ಪಲ, ಗೆಣಸಿನ ಹಪ್ಪಲ, ಮಾವಿನ ಉಪ್ಪಿನಕಾಯಿ, ದೊಡ್ಲಿ ಉಪ್ಪಿನಕಾಯಿ, ಅಪ್ಪೆಮಿಡಿ ಉಪ್ಪಿನಕಾಯಿ, ಮಿಡಿ ಅಂಬಟೆವ ಉಪ್ಪಿನಕಾಯಿ, ಕರಂಡಿ ಉಪ್ಪಿನಕಾಯಿ, ನೆಲ್ಲಿ ಉಪ್ಪಿನಕಾಯಿ, ಉದ್ದಿನ ಖಾರ ಹಪ್ಪಲ, ಗಜನಿಂಬೆ ಉಪ್ಪಿನಕಾಯಿ, ಬೇಯಿಸಿ ಒಣಗಿಸಿದ ಗೆಣಸು, ಈಂದ್ ಹುಡಿ, ಜುಮ್ಮನ ಕಾಯಿ (ಕಾವಂಟೆ ಕಾಯಿ) ಸೇರಿದಂತೆ ಬಣ್ಣ ಬಣ್ಣದ ರುಚಿ ರುಚಿಯಾದ ತಿನಿಸುಗಳ ಪರಿಮಳ ಬಾಯಿ ಚಪ್ಪರಿಸುವಂತೆ ಮಾಡಿತು, ಸುಲಭವಾಗಿ ಲಭ್ಯವಾಗುವ ಹಲಸನ್ನು ಉಪಯೋಗಿಸಿ ತಯಾರಿಸಿದ ವಸ್ತುಗಳಿಗೆ ಬಹಳ ಬೇಡಿಕೆಯಿದೆ. ನಾವು ಬೇರೆ ಬೇರೆ ವಸ್ತುಗಳನ್ನು ಮನೆಯಲ್ಲಿ ತಯಾರಿಸಿ ಮಾರಾಟ ಮಾಡುತ್ತೇವೆ. ಆದರೆ ಹಲಸಿಗಿರುವ ಬೇಡಿಕೆ ಬೇರೆ ಯಾವ ವಸ್ತುಗಳಿಗಿಲ್ಲ.
ವಿಜಯಲಕ್ಷ್ಮಿ ಮಾನ್ಯ, ಸ್ಥಳೀಯ ಹಲಸಿನ ಉತ್ಪನ್ನಗಳ ಮಾರಾಟಗಾರರು. ಸತ್ವಯುತವಾದ ಆಹಾರವಾಗಿರುವ ಹಲಸಿನಕಾಯಿ, ಹಣ್ಣುಗಳಲ್ಲಿ ಇರುವ ಪೌಷ್ಠಿಕಾಂಶ ಮತ್ತು ಪ್ರಕೃತಿದತ್ತವಾದ ಗುಣಗಳು ಇಂದಿನ ಫಾಸ್ಟ್‌ಫುಡ್‌ಗಳಿಂದ ಲಭಿಸದು. ಕೃತಕ ಬಣ್ಣ, ಪರಿಮಳದಿಂದ ನಾಲಗೆಗೆ ರುಚಿಯೆನಿಸುವ ತಿನಿಸುಗಳು ದೇಹಕ್ಕೆ ಅಪಾಯಕಾರಿ. ಆದರೆ ಹಲಸಿನ ರುಚಿ, ಪರಿಮಳ, ಸತ್ವ ಎಲ್ಲವೂ ದೇಹಕ್ಕೆ ಹಿತ ಆದುದರಿಂದ ಮಳಿಗೆಯಲ್ಲಿ ಹೆಚ್ಚು ಹಲಸಿನ ಉತ್ಪನ್ನಗಳು ಮಾರಾಟ ಆಗುತ್ತಿವೆ.
ಗಣೇಶ ಪ್ರಭು ಮೂಲ್ಕಿ, ಹಲಸಿನ ಉತ್ಪನ್ನಗಳ ಮಾರಾಟಗಾರರು.