Advertisement

ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ; ಹಾಲಪ್ಪ ಹರತಾಳು ಸವಾಲು

04:34 PM Aug 23, 2021 | Team Udayavani |

ಸಾಗರ: ಓಸಿ ಮಟ್ಕಾ, ಗಾಂಜಾ ಮತ್ತು ಮರಳು ಸಾಗಾಣಿಕೆಯಲ್ಲಿ ನಾನು ಅಥವಾ ನನ್ನ ಹಿಂಬಾಲಕರು, ಪಕ್ಷದ ಕಾರ್ಯಕರ್ತರು ಒಂದು ರೂಪಾಯಿ ಲಂಚ ಪಡೆದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಅದಕ್ಕೆ ಅವರು ಸಾಕ್ಷ್ಯ ಕೊಡುವುದು ಬೇಡ. ಆತ್ಮಸಾಕ್ಷಿಯ ಆಧಾರದಲ್ಲಿ ಖಾಸಗಿಯಾಗಿ ಹೇಳಿದರೂ ಸಾಕು ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಹಾಲಪ್ಪ ಹರತಾಳು ಸವಾಲು ಹಾಕಿದರು.

Advertisement

ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ನಾನು ಪೊಲೀಸ್ ಇಲಾಖೆಯಲ್ಲಿ ದುಡ್ಡು ತೆಗೆದುಕೊಂಡಿದ್ದೇನೆ ಎಂದರೆ ಬಾಯಲ್ಲಿ ಹುಳ ಬೀಳುತ್ತದೆ. ಪೊಲೀಸ್ ಇಲಾಖೆಯಲ್ಲಿ ಅವರದ್ದೇ ಸಂಬಂಧಿಕರು, ಸ್ನೇಹಿತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಿಂದೆಲ್ಲ ಲಂಚ ಪಡೆದಿರುವವರಿಗೆ ಇಂತಹ ಅನುಮಾನಗಳು ಹುಟ್ಟುವುದು ಸಹಜ. ಪೊಲೀಸ್, ರೆವಿನ್ಯೂ ಇಲಾಖೆಯವರಿಂದ ವರ್ಗಾವಣೆಯ ವ್ಯವಹಾರವನ್ನೂ ಮಾಡಿ ಹಣ ಪಡೆದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಛೇಡಿಸಿದರು.

ಇದನ್ನೂ ಓದಿ :ಕಣಕುಂಬಿ, ಆಲಮಟ್ಟಿ, ತಲಕಾಡು ಹಾಗೂ ಸಕಲೇಶಪುರದಿಂದ ಜೆಡಿಎಸ್ ಪಾದಯಾತ್ರೆ: ಎಚ್ ಡಿಕೆ

ಓಸಿ, ಮಟ್ಕಾ, ಲಿಕ್ಕರ್, ಮರಳು, ಗಾಂಜಾದವರ ಹಣ ಪಡೆಯುವುದು ಎಂದರೆ ಹಣ ಮಲದಲ್ಲಿರುವ ಹಣ ಪಡೆದಂತೆ. ಓಸಿ. ಮತ್ತು ಗಾಂಜಾವನ್ನು ನೂರಕ್ಕೆ ನೂರರಷ್ಟು ನಿರ್ಮೂಲನೆಗೆ ಪೊಲೀಸರು ಮುಂದಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next