Advertisement

ಶಾಸಕ ಹಾಲಪ್ಪ ಸಾಗರದ ಜನತೆಯ ಕ್ಷಮೆ ಕೋರಬೇಕು; ತೀನ ಒತ್ತಾಯ

04:57 PM Mar 30, 2022 | Team Udayavani |

ಸಾಗರ: ಪ್ರತಿಷ್ಟಿತ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ 56ನೇ ಸರ್ವಸದಸ್ಯರ ಸಭೆಯಲ್ಲಿ ಶಾಸಕರ ಸಮ್ಮುಖದಲ್ಲಿಯೇ ಇಬ್ಬರು ಪ್ರಮುಖರ ಮೇಲೆ ನಡೆದಿರುವ ಹಲ್ಲೆ ಖಂಡನೀಯ.

Advertisement

ಶಾಸಕರು ಹಲ್ಲೆ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡುವ ಜೊತೆಗೆ ಸಾಗರದ ಜನರ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಸಭೆಗೆ ವಿಶೇಷ ಆಹ್ವಾನಿತರಾಗಿ ಹೋದವರು. ಸಭೆಯಲ್ಲಿದ್ದು ಗೌರವಯುತವಾಗಿ ಸಭೆ ನಡೆಯುವಂತೆ ನೋಡಿಕೊಳ್ಳಬೇಕಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ತಾವೇ ನಿಂತು ಸಮಾಧಾನಪಡಿಸಿ ತಹಬಂದಿಗೆ ತರುವ ಕೆಲಸ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಹಲ್ಲೆ ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇದ್ದದ್ದು ಅಕ್ಷಮ್ಯ ಅಪರಾಧ ಎಂದರು.

ಶಾಸಕರು ಹೇಗೆ ಹಳೆ ವಿದ್ಯಾರ್ಥಿಯೋ, ನಾನು ಸಹ ಎಲ್‌ಬಿ ಕಾಲೇಜಿನ ಹಳೆಯ ವಿದ್ಯಾರ್ಥಿ. ಶಾಸಕರಾದವರಿಗೆ ಯಾವ ರೀತಿ ಸಭೆಯನ್ನು ನಡೆಸಿಕೊಂಡು ಹೋಗಬೇಕು ಎನ್ನುವ ಕನಿಷ್ಠ ಅರಿವು ಇರಬೇಕಾಗಿತ್ತು. ಆದರೆ ಹರತಾಳು ಹಾಲಪ್ಪ ಹಲ್ಲೆಗೆ ಪ್ರಚೋದನೆ ನೀಡುವಂತೆ ವರ್ತನೆ ಮಾಡಿದ್ದು ನಾಚಿಕೆಗೇಡಿನ ಸಂಗತಿ. ಈ ಘಟನೆಯಿಂದ ಇಡೀ ಸಾಗರದ ಜನರು ರಾಜ್ಯದೆದುರು ತಲೆತಗ್ಗಿಸುವಂತೆ ಆಗಿದೆ. ಇದರ ಜೊತೆಗೆ ಕೆಲವರು ಹಲ್ಲೆ ನಡೆಯುತ್ತಿದ್ದಾಗಲೂ ನೋಡಿಕೊಂಡು ಮೂಕ ಪ್ರೇಕ್ಷಕರಂತೆ ನಿಂತಿದ್ದು ಅವರ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ. ಇದೊಂದು ಪೂರ್ವನಿಯೋಜಿತ ಹೊಡೆದಾಟ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಆರ್‌.ಎನ್‌.ನಾಯಕ್‌ ಕೊಲೆ ಕೇಸ್ : ಬನ್ನಂಜೆ ರಾಜಾ ಸೇರಿ 9 ಮಂದಿ ತಪ್ಪಿತಸ್ಥರು

Advertisement

ಘಟನೆಗೆ ಸಂಬಂಧಪಟ್ಟಂತೆ ಹಲ್ಲೆಗೆ ಒಳಗಾದವರು ಪೊಲೀಸರಿಗೆ ದೂರು ನೀಡಿ ಸಾಕಷ್ಟು ದಿನಗಳಾಯಿತು. ಈತನಕ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಎಫ್.ಐ.ಆರ್. ದಾಖಲು ಮಾಡದೆ ಇರುವುದು ಪೊಲೀಸ್ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈಚೆಗೆ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಸರ್ವಸದಸ್ಯರ ಸಭೆಗೂ ಶಾಸಕರ ಕುಮ್ಮಕ್ಕಿನಿಂದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನುಗ್ಗಿ ಸದಸ್ಯರಲ್ಲದ ೫೦ ಜನರನ್ನು ಕರೆದುಕೊಂಡು ಹೋಗಿ ಗಲಾಟೆ ಮಾಡಿಸಿದ್ದಾರೆ. ಶಾಸಕರು ಎಲ್ಲ ಕಡೆಯೂ ಇರಬೇಕು ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತದೆ. ಸಾಗರದ ಪ್ರಜ್ಞಾವಂತ ನಾಗರೀಕರು ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಾಸಕರ ಇಂತಹ ದಬ್ಬಾಳಿಕೆ, ದೌರ್ಜನ್ಯದ ನಡವಳಿಕೆಗಳು ಮುಂದುವರೆದರೆ ಉಗ್ರವಾದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಮಹ್ಮದ್ ಖಾಸಿಂ, ಸಿದ್ದಪ್ಪ ಕೆ., ಪ್ರೇಮ್ ಸಿಂಗ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next