ಭಾರತೀನಗರ: ಟ್ರ್ಯಾಕ್ಟರ್ ಪಲ್ಟಿ ಹೊಡೆಯುವುದು, ಎತ್ತಿನಗಾಡಿಗಳು ಉರುಳಿ ಬೀಳುವುದು, ಸಂಚಾರ ಅಸ್ತವ್ಯಸ್ತವಾಗುವುದು, ಸ್ಥಳೀಯರಿಗೆ ವ್ಯಾಪಾರದಲ್ಲಿ ನಷ್ಟ ಸಂಭವಿಸುವುದು ಹೀಗೆ ನಿತ್ಯ ಒಂದಲ್ಲಾ ಒಂದು ಸಮಸ್ಯೆ ಭಾರತೀನಗರದ ಹಲಗೂರು ರಸ್ತೆಯಲ್ಲಿ ಸೃಷ್ಟಿಸುತ್ತಿದ್ದು ಜನ ಹೈರಾಣಾಗಿದ್ದಾರೆ!
ಹೌದು, ಇಲ್ಲಿನ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಸುತ್ತ-ಮುತ್ತಲಿನ ಹಳ್ಳಿಗಳ ರೈತರು ಕಬ್ಬು ಸರಬ ರಾಜು ಮಾಡುತ್ತಾರೆ. ಈ ವೇಳೆ ಪ್ರತಿದಿನ ಒಂದಲ್ಲ ಒಂದು ಅವಘಡ ಸಂಭ ವಿ ಸುತ್ತಿವೆ. ಕಬ್ಬು ಸಾಗಿರುವ ಟ್ರಾÂಕ್ಟರ್‌ಗಳು ಪಲ್ಟಿ ಹೊಡೆಯುವುದು ಸಾಮಾನ್ಯವೆಂಬಂತಾಗಿದೆ. ಇತ್ತೀಚೆಗೆ ಭಾರತೀನಗರದ ಮದ್ದೂರು-ಮಳವಳ್ಳಿ ಹೆದ್ದಾರಿ ಅರಳಿ ಮರದ ಬಳಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಕಬ್ಬು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿರಲಿಲ್ಲ. ಜತೆಗೆ ರಸ್ತೆಯಲ್ಲೇ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಈ ಮೂಲಕ ರಸ್ತೆ ಸಂಚಾ ರಕ್ಕೆ ನಿತ್ಯ ತೊಡಕಾಗು ತ್ತಿದೆ ಎಂದು ರೈತಸಂಘದ ಮುಖಂಡ ಅಣ್ಣೂರು ರಾಜಣ್ಣ ಆರೋಪಿಸಿದ್ದಾರೆ.
ಭಾರತೀ ನಗರ ಕೇಂದ್ರ ಬಿಂದುವಾಗಿದ್ದು ಸುತ್ತ- ಮುತ್ತಲಿನ ಗ್ರಾಹಕರು ವ್ಯಾಪಾರಕ್ಕಾಗಿ ಬರುತ್ತಿದ್ದಾರೆ. ಈ ರಸ್ತೆಯಲ್ಲಿ ಪ್ರತಿ ದಿನ ಸಮಸ್ಯೆ ಸೃಷ್ಟಿಸುವುದರಿಂದ ಸಂಚರಿಸಲು ಜನ ಹೆದರುತ್ತಿದ್ದಾರೆ. ಕಬ್ಬು ತುಂಬಿದ ವಾಹನಗಳು ಕಾರ್ಖಾನೆಯ ಯಾರ್ಡ್‌ಗೆ ಹೋಗಬೇಕಾದರೆ ಕಿರಿದಾದ ಹಲಗೂರು ರಸ್ತೆಯಲ್ಲೇ ಹೋಗಬೇಕು. ಹೀಗಾಗಿ ಗ್ರಾಹಕರು ಹಲಗೂರು ರಸ್ತೆ ಕಡೆಗೆ ಮುಖ ಮಾಡುತ್ತಿಲ್ಲ. ಇದರಿಂದ ಅಂಗಡಿ ಮಾಲೀಕರಿಗೆ ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಇದರ ಗೋಳನ್ನು ಕೇಳುವವರು ಯಾರೂ ಇಲ್ಲ ಎಂದು ಹಲಗೂರು ರಸ್ತೆಯ ಸಿಮೆಂಟ್ ಅಂಗಡಿ ಮಾಲಿಕ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಈಡೇರದ ಬದಲಿ ರಸ್ತೆ ಬೇಡಿಕೆ: ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬುಸಾಗಿಸಲು ಪ್ರತ್ಯೇಕ ರಸ್ತೆ ನಿರ್ಮಾಣ ಮಾಡಲು ಹಲವಾರು ವರ್ಷಗಳಿಂ ದಲೂ ಒತ್ತಾಯ ಮಾಡಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಇಂತಹ ಸಮಸ್ಯೆ ಬಾರದ ರೀತಿಯಲ್ಲಿ ಕ್ರಮಕೈಗೊ ಳ್ಳಬೇಕೆಂಬುದೇ ಪ್ರತಿಯೊಬ್ಬರ ಒತ್ತಾಯವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಪರ್ಯಾಯ ರಸ್ತೆ ಗುರುತಿಸಿಕೊಡಬೇಕು. ಆಗ ಮಾತ್ರ ಇಲ್ಲಿನ ಸಮಸ್ಯೆಗೆ ಪರಿಹಾರ ಸಾಧ್ಯವೆಂದು ರೈತರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕ್ರಮ ಕೈಗೊಳ್ಳದ ಅಧಿಕಾರಿಗಳು: ಭಾರತೀನಗರ ದಿನದಿಂದ ದಿನಕ್ಕೆ ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತನ್ನದೆ ಯಾದ ಪ್ರಭುತ್ವ ಸಾಧಿಸಿರುವುದರಿಂದ ಸಾವಿರಾರು ರೈತರು, ವಿದ್ಯಾರ್ಥಿಗಳು ಪ್ರತಿದಿನ ಬಂದು ಹೋಗುತ್ತಾರೆ. ಕಬ್ಬು ತುಂಬಿದ ಎತ್ತಿನಗಾಡಿ, ಲಾರಿ ಮತ್ತು ಟ್ರ್ಯಾಕ್ಟರ್‌ಗಳಿಂದಾಗಿ ರಸ್ತೆ ಸಂಚಾರ ಸಮಸ್ಯೆ ಆಗುತ್ತಿದೆ. ಇದರಿಂದಾಗಿ ಹಲಗೂರು, ಮದ್ದೂರು-ಮಳ್ಳವಳ್ಳಿ ಮಾರ್ಗವಾಗಿ ಬಸ್‌ನಲ್ಲಿ ಚಲಿ ಸುವ ವಿದ್ಯಾರ್ಥಿಗಳಿಗೂ ತೀವ್ರ ತೊಂದರೆ ಆಗುತ್ತಿದೆ. ಹಾಗೆಯೇ ಕಬ್ಬು ಸರಬರಾಜು ಮಾಡುವ ವೇಳೆ ರಸ್ತೆ ಸಂಚಾರ ಅವಸ್ಥೆ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಸಂಚಾರ ಸಮಸ್ಯೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ಮೌನಕ್ಕೆ ಶರಣಾಗಿದ್ದಾರೆ.
ಕೆಲವು ಅಧಿಕಾರಿಗಳ ಬೇಜವಾಬ್ದಾರಿಯಿಂದ ನಿತ್ಯ ಸಮಸ್ಯೆ ಆಗಿದೆ. ಜನ ಪ್ರತಿನಿಧಿಗಳು, ತಹಶೀಲ್ದಾರರು, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
– ಅಣ್ಣೂರು ರಾಜಣ್ಣ, ರೈತಸಂಘದ ಮುಖಂಡ
ಕಬ್ಬು ತುಂಬಿದ ಎತ್ತನಗಾಡಿ, ಟ್ರ್ಯಾಕ್ಟರ್ ಮತ್ತು ಲಾರಿಗಳು ಅಂಗಡಿ ಮುಂದೆ ನಿಲ್ಲುತ್ತಿ ರುವುದರಿಂದ ಗ್ರಾಹಕರು ಬಾರದೆ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಕೂಡಲೇ ಕಾರ್ಖಾನೆಯವರು ಬದಲಿ ರಸ್ತೆ ನಿರ್ಮಿಸಿಕೊಳ್ಳಬೇಕು.
-ಲಕ್ಷ್ಮಣ್, ಹಲಗೂರು ರಸ್ತೆ ಅಂಗಡಿ ಮಾಲೀಕ
ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇ ಕೆಂದು ಕಾರ್ಖಾನೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಆದರೂ, ದಿನೇ-ದಿನೆ ಎತ್ತಿನ ಗಾಡಿ, ಟ್ರ್ಯಾಕ್ಟರ್,ಲಾರಿಗಳಿಂದ ಸಂಚಾರ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಶಿಸ್ತು ಕ್ರಮಕೈಗೊಳ್ಳುತ್ತೇನೆ.
-ಶಿವಮಲವಯ್ಯ, ಸರ್ಕಲ್ ಇನ್ಸ್‌ಪೆಕ್ಟರ್
– ಅಣ್ಣೂರು ಸತೀಶ್