Advertisement

ಹಾಲಾಡಿ ಜೆಡಿಎಸ್‌ ಸೇರ್ಪಡೆ ವದಂತಿ: ನಿರಾಕರಣೆ

07:30 AM Mar 21, 2018 | Team Udayavani |

ಕುಂದಾಪುರ: ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬುತ್ತಿದೆ. ಆದರೆ ಇದನ್ನು ಸ್ವತಃ ಶ್ರೀನಿವಾಸ ಶೆಟ್ಟಿ ನಿರಾಕರಿಸಿದ್ದಾರೆ.

Advertisement

ಬಿಜೆಪಿ ವಿರುದ್ಧ ಬಂಡೆದ್ದು, ಪಕ್ಷೇತರ ರಾಗಿ ಸ್ಪರ್ಧಿಸಿ, ಗೆದ್ದು, ದಾಖಲೆ ನಿರ್ಮಿಸಿದ ಹಾಲಾಡಿಯವರು ಅವಧಿ ಪೂರ್ಣಗೊಳ್ಳುವ ಮೊದಲೇ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಕ್ಷೇತರರಾಗಿದ್ದು ಸಂಸತ್‌ ಹಾಗೂ ಸ್ಥಳೀಯ ಚುನಾವಣೆ ಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ಬಿಜೆಪಿಯ ಪರಿವರ್ತನಾ ಯಾತ್ರೆ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಹಾಲಾಡಿ ಯವರು ಕುಂದಾಪುರದ ಬಿಜೆಪಿ ಅಭ್ಯರ್ಥಿಯೆಂದು ಘೋಷಿಸಿದಾಗ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಆ ಬಳಿಕ ಹಾಲಾಡಿ ಬಿಜೆಪಿ ಸೇರ್ಪಡೆ ಬೆಂಗಳೂರಿನಲ್ಲಿ ನಡೆದಿತ್ತು.

ಆದರೆ ಬಿಜೆಪಿಯ ಒಂದು ವರ್ಗ ಅವರನ್ನು ಪೂರ್ಣವಾಗಿ ಸ್ವೀಕಾರ ಮಾಡಿರಲಿಲ್ಲ. ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸುತ್ತಿದೆ. ಇದಿಷ್ಟು ಬೆಳವಣಿಗೆಗಳ ಮಧ್ಯೆ ಹಾಲಾಡಿಯವರು ಜೆಡಿಎಸ್‌ಗೆ ಸೇರಲಿದ್ದಾರೆ, ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ, ಈಗಾಗಲೇ 2 ಸುತ್ತಿನ ಮಾತುಕತೆ ಮುಗಿದಿದೆ. ಹೆಗ್ಡೆಗೆ ಬಿಜೆಪಿ ಸೀಟು ಸಿಕ್ಕರೆ, ಹಾಲಾಡಿ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂದೆಲ್ಲ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಇದನ್ನು ಸ್ವತಃ ಅವರು ಅಲ್ಲಗಳೆ ದಿದ್ದು, ತಾನು ಎಂದೆಂದೂ ಬಿಜೆಪಿ. ಬೆಂಗಳೂರಲ್ಲಿ ಬಿಜೆಪಿ ಸೇರಿದ ಬಳಿಕ ಉಡುಪಿ ಜಿಲ್ಲೆ ಬಿಟ್ಟು ಎಲ್ಲೂ ಹೋಗಿಲ್ಲ. ಮತ್ತೆ ಹೇಗೆ ಸಕಲೇಶಪುರದಲ್ಲಿ ದೇವೇಗೌಡ ಭೇಟಿ ಸಾಧ್ಯವೆಂದು ಪ್ರಶ್ನಿಸಿದರು. ಬೇರೆ ಯಾವುದೇ ಪಕ್ಷದ ನಾಯಕ ರನ್ನು ಭೇಟಿಯಾಗಿಲ್ಲ ಎಂದು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next