ಕೋಟ : ಜನಸಂಚಾರ ಹೆಚ್ಚಿರುವ ಹಾಗೂ ಪ್ರಮುಖ ವಿದ್ಯಾಸಂಸ್ಥೆಗಳಿರುವ ಕೋಟ ಮೂರ್ಕೈಯಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು, ಈ ಬಗ್ಗೆ ಇಂದು(ಜೂ. 23, ಬುಧವಾರ) ಉದಯವಾಣಿ ವಿಸ್ಕೃತ ವರದಿ ಪ್ರಕಟಿಸಿತ್ತು. ಈ ಬೆನ್ನಿಗೆ ಇದೀಗ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕೂಡ ಮೇಲ್ಸೇತುವೆಗೆ ಕ್ರಮಕೈಗೊಳ್ಳುವಂತೆ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಉತ್ತರ ಪ್ರದೇಶದ ಕಾಂಗ್ರೆಸ್ ಗೆ ಪ್ರಿಯಾಂಕ ಅವರದ್ಧೇ ನೇತೃತ್ವ : ಸಲ್ಮಾನ್ ಖುರ್ಷಿದ್
ಇಲ್ಲಿನ ವಿವೇಕ ವಿದ್ಯಾಸಂಸ್ಥೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ ಮತ್ತು ಸಾಕಷ್ಟು ಶಿಕ್ಷಕರು, ಸಿಬಂದಿಗಳು, ಸಾರ್ವಜನಿಕರು ಇಲ್ಲಿ ರಸ್ತೆ ದಾಟುತ್ತಾರೆ. ಈ ಪ್ರದೇಶದಲ್ಲಿ ಆಗಾಗ ವಾಹನ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಕೂಡ ಇದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಇಲ್ಲಿಗೆ ಪಾದಚಾರಿ ಮೇಲ್ಸೇತುವೆ ಅಗತ್ಯವಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ವಿವೇಕ ವಿದ್ಯಾಸಂಸ್ಥೆಯವರು ನೀಡಿದ ಮನವಿಯನ್ನು ಉಲ್ಲೇಖಿಸಿ ಸಂಸದರಿಗೆ ಪತ್ರ ಮೂಲಕ ವಿನಂತಿಸಿದ್ದಾರೆ.
ಇದನ್ನೂ ಓದಿ : ವ್ಯಾಕ್ಸಿನ್ ನೆರವಿಗಾಗಿ ನನ್ನನ್ನು ಸಂಪರ್ಕಿಸಿ : ಕೆಪಿಸಿಸಿಅಧ್ಯಕ್ಷಡಿ.ಕೆ.ಶಿವಕುಮಾರ್