Advertisement
ಇಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತಹ ಸರ್ಕಲ್ ನಿರ್ಮಾಣ ಮಾಡಲು ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಯೋಜನೆ ತಯಾರಿಸಲಾ ಗಿದೆ. ಆದರೆ ಅದಕ್ಕೆ ಬೇಕಾದ ಜಾಗದ ಒತ್ತುವರಿ ಪ್ರಕ್ರಿಯೆ ಸ್ಥಳೀಯಾಡಳಿತದಿಂದ ಇನ್ನೂ ಆಗದಿರುವ ಕಾರಣ ಈ ಸರ್ಕಲ್ ನಿರ್ಮಾಣ ಬೇಡಿಕೆ ನನೆಗುದಿಗೆ ಬಿದ್ದಿದೆ.
ಹೆಬ್ರಿ, ಅಮಾಸೆಬೈಲು, ಕುಂದಾಪುರ, ಶಂಕರನಾರಾಯಣ ಹೀಗೆ 4 ಕಡೆಗಳಿಂದಲೂ ವಾಹನಗಳು ಸಂಚರಿಸುವ ಪ್ರಮುಖ ಜಂಕ್ಷನ್ ಆಗಿರುವುದರಿಂದ, ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಕಾರಣಕ್ಕೆ ಬ್ಲಾಕ್ ಸ್ಪಾಟ್ ಎಂದು ಗುರುತಿಸಿ, ಹಾಲಾಡಿ ಪೇಟೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮುತುವರ್ಜಿಯಲ್ಲಿ 3.10 ಕೋ.ರೂ. ಮಂಜೂರಾಗಿತ್ತು. ಅದರಂತೆ ವಿರಾಜಪೇಟೆ – ಬೈಂದೂರು ರಾಜ್ಯ ಹೆದ್ದಾರಿ, ಹಾಲಾಡಿ, ಅಮಾಸೆಬೈಲು, ಕೋಟೇಶ್ವರ – ಹಾಲಾಡಿ ಕಡೆಗಳಿಗೆ ತೆರಳುವ ರಸ್ತೆ ವಿಸ್ತ ರ ಣೆ ಮಾಡಲಾಗಿದೆ. ಆದರೆ ಈಗ ರಸ್ತೆ ವಿಸ್ತ ರಣೆ ಮಾಡಿದ್ದರೂ, ಈ 4 ರಸ್ತೆಗಳು ಸಂಧಿಸುವಲ್ಲಿ ಎಲ್ಲೂ ವೇಗ ನಿಯಂತ್ರಕಗಳಿಲ್ಲದೆ ಅಪಾಯಕಾರಿಯಾಗಿದೆ. ಸುಸಜ್ಜಿತ ಸರ್ಕಲ್ ನಿರ್ಮಿಸಿದರೆ ಬಹಳಷ್ಟು ಪ್ರಯೋಜನವಾಗಲಿದೆ ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ. ಪ್ರಮುಖ ಜಂಕ್ಷನ್
ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿ, ಕುಂದಾಪುರ, ಸಿದ್ದಾಪುರ, ಶಂಕರ ನಾರಾಯಣ, ಅಮಾಸೆಬೈಲು, ಬೆಳ್ವೆ, ಗೋಳಿಯಂಗಡಿ, ಶೃಂಗೇರಿ, ಧರ್ಮಸ್ಥಳ, ಉಡುಪಿ, ಮಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ ಹೀಗೆ ಹತ್ತಾರು ಪ್ರಮುಖ ಊರುಗಳನ್ನು ಸಂಧಿಸುವ ಪ್ರಮುಖ ಜಂಕ್ಷನ್ ಹಾಲಾಡಿ. ನಿತ್ಯ ಹತ್ತಾರು ಬಸ್‌ಗಳು, ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೂ ಇಲ್ಲಿ ಸೂಕ್ತ ವೇಗ ನಿಯಂತ್ರಕಗಳಿಲ್ಲ, ಯಾವ ಊರಿಗೆ ಹೋಗುವ ರಸ್ತೆ ಎನ್ನುವ ಮಾರ್ಗಸೂಚಿಗಳಿಲ್ಲ. ಬೆಳಕಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ.
Related Articles
ಸರ್ಕಲ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯವರು ಹೊಸ ನಕ್ಷೆ ತಯಾರಿಸಿದ್ದಾರೆ. ಆದರೆ ಅದಕ್ಕಾಗಿ 2-3 ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕಾಗಿದೆ. ಅದರಲ್ಲೂ ಎರಡು ಕಡೆ ಪಟ್ಟಾ ಜಾಗವಿದ್ದು, ಅದಕ್ಕೆ ಎಸಿಯವರ ಮೂಲಕ ಒಪ್ಪಿಗೆ ಬೇಕಾಗಿದೆ. ಕೆಲವೆಡೆಗಳಲ್ಲಿ ಅಂಗಡಿ ಕಟ್ಟಿಕೊಂಡಿದ್ದು, ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದ ತೆರವು ಮಾಡುವ ಕೆಲಸ ಪಂಚಾಯತ್‌ನಿಂದ ಆಗಬೇಕಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆ ಇತ್ಯರ್ಥವಾಗದೇ ವೃತ್ತ ನಿರ್ಮಾಣ ಕಾಮಗಾರಿಗೆ ಅನುದಾನ ಕೇಳಲು ಆಗುವುದಿಲ್ಲ. ಜಾಗ ಒತ್ತುವರಿಯಾದ ಬಳಿಕ ಹೆಚ್ಚುವರಿ ಅನುದಾನಕ್ಕೆ ಬೆಂಗಳೂರಿನ “ಪ್ರಾಮಿÕ’ ಇಲಾಖೆಗೆ ಇಲ್ಲಿನ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಲಿದ್ದಾರೆ.
Advertisement
ಭೂಸ್ವಾಧೀನ ಆಗಬೇಕುಈಗಾಗಲೇ ಹಾಲಾಡಿ ಜಂಕ್ಷನ್‌ನಲ್ಲಿ ಎಲ್ಲ ಕಡೆಗಳಿಂದ ಕೂಡುವ ರಸ್ತೆಗಳನ್ನು ವಿಸ್ತ ರಣೆ ಮಾಡಲಾಗಿದೆ. ಸರ್ಕಲ್ ನಿರ್ಮಾಣ ಬೇಡಿಕೆ ಮೊದಲ ಯೋಜನೆಯಲ್ಲಿ ಇರಲಿಲ್ಲ. ಪಂಚಾಯತ್, ಜನರು, ಹೋರಾಟ ಸಮಿತಿ ಬೇಡಿಕೆಯಿಂದ ಸರ್ಕಲ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಆದರೆ ಅದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪಂಚಾಯತ್‌ನವರು ಮಾಡಿಕೊಡಬೇಕಿದೆ.
-ದುರ್ಗಾದಾಸ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಭೆ ಕರೆದು ತೀರ್ಮಾನ
ಹಾಲಾಡಿಯಲ್ಲಿ ಸರ್ಕಲ್ ನಿರ್ಮಾಣ ಸಂಬಂಧ ಜಾಗ ಒತ್ತುವರಿ ಬಗ್ಗೆ ಲೋಕೋಪಯೋಗಿ ಇಲಾಖೆಯವರು ಗಮನಕ್ಕೆ ತಂದಿದ್ದು, ಈ ಬಗ್ಗೆ ಆದಷ್ಟು ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರು, ಎಲ್ಲ ಸದಸ್ಯರ ವಿಶೇಷ ಸಭೆ ಕರೆದು, ಅದರಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ವಸಂತ ಕುಮಾರ್, ಹಾಲಾಡಿ ಪಿಡಿಒ