Advertisement

ಸುಖೋಯ್‌ ಫೈಟರ್‌ ಜೆಟ್‌ ಪತನ :ಪೈಲಟ್‌ಗಳಿಬ್ಬರು ಪಾರು 

02:54 PM Jun 27, 2018 | |

ನಾಶಿಕ್‌:ಇಲ್ಲಿ ಬುಧವಾರ ನಿರ್ಮಾಣ ಹಂತದ ಸುಖೋಯ್‌ ಎಸ್‌ಯು 30 ಫೈಟರ್‌ ಜೆಟ್‌ ಪತನವಾಗಿದ್ದು, ಅದೃಷ್ಟವಷಾತ್‌ ಇಬ್ಬರು ಪೈಲಟ್‌ಗಳು ಪಾರಾಗಿದ್ದಾರೆ.

Advertisement

ಎಚ್‌ಎಎಲ್‌ ವಿಮಾನದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದ್ದು, ಈ ವೇಳೆ ಅವಘಡ ಸಂಭವಿಸಿದೆ. ಈ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಬೇಕಿತ್ತು. 

ಪಾರಾಗಿರುವ ಪೈಲಟ್‌ಗಳಲ್ಲಿ ಒಬ್ಬರು ವಾಯುಪಡೆಯ ಅಧಿಕಾರಿಯಾಗಿದ್ದು, ಇನ್ನೋರ್ವರು ನಿವೃತ್ತ ವಾಯುಪಡೆಯ ಸಿಬಂದಿಯಾಗಿದ್ದಾರೆ. 

ಪತನವಾದ ಸ್ಥಳಕ್ಕೆ ವಾಯುಪಡೆ ಸಿಬಂದಿಗಳು ಮತ್ತು ಅಧಿಕಾರಿಗಳು ದೌಡಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next