Advertisement

ಸರ್ಕಾರಿ ಶಾಲೆಗಳಲ್ಲಿ ಎಚ್‌ಎಎಲ್‌ ಬೆಳಕು

05:21 PM Dec 09, 2019 | Suhan S |

ತುಮಕೂರು: ರಂಗಭೂಮಿ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಡಾ. ಗುಬ್ಬಿ ವೀರಣ್ಣ ಅವರ ತವರು, ಗುಬ್ಬಿ ತಾಲೂಕು ಈಗ ಭೂಪಟದಲ್ಲಿ ಗುರುತಿಸಿಕೊಳ್ಳು ವಂತಹ ಎಚ್‌ಎಎಲ್‌ ಘಟಕ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಹೀಗಾಗಿ ಸಂಸ್ಥೆಯಿಂದ ಗುಬ್ಬಿ ತಾಲೂಕಿನ 76ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಸೋಲಾರ್‌ ವಿದ್ಯುತ್‌ ನೀಡಿ ಶಾಲೆಗಳಲ್ಲಿ ಬೆಳಕು ಮೂಡಿಸಿದೆ.

Advertisement

ಗುಬ್ಬಿ ತಾಲೂಕಿನ ಸರ್ಕಾರಿ ಶಾಲೆಗಳು ಈಗ ಹೈಟೆಕ್‌ ಆಗುತ್ತಿವೆ. ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಸ್ಮಾರ್ಟ್‌ ಆಗುತ್ತಿವೆ. ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳೆಂದರೆ ಮೂಗು ಮರಿಯುವವರೇ ಜಾಸ್ತಿ. ಇಂತಹ ಕಾಲಘಟ್ಟದಲ್ಲಿ ಜಿಲ್ಲೆಯ ಗುಬ್ಬಿ ತಾಲೂಕಿನ ಸರ್ಕಾರಿ ಶಾಲೆಗಳು ಸೋಲಾರ್‌ ಬೆಳಕಿನಲ್ಲಿ ಸ್ಮಾರ್ಟ್‌ ಶಾಲೆಗಳಾಗಿ ಬದಲಾಗುತ್ತಿವೆ. ಇದಕ್ಕೆಲ್ಲಾ ಬಿದರೆಹಳ್ಳಿ ಕಾವಲ್‌ನಲ್ಲಿ ಸ್ಥಾಪನೆಯಾಗುತ್ತಿರುವ ಎಚ್‌ಎಎಲ್‌ ಘಟಕ ಕಾರಣ. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಎಚ್‌ಎಎಲ್‌ ನಾಲ್ಕು ಮತ್ತು ಎರಡು ಕಿಲೋ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪ್ಲಾಂಟ್‌, 36 ಶಾಲೆಗಳಿಗೆ ನಾಲ್ಕು ಕೆ.ವಿ. ವಿದ್ಯುತ್‌ ಸಾಮರ್ಥ್ಯದ ಸೋಲಾರ್‌ ಗಳು, 40 ಶಾಲೆಗಳಿಗೆ ಎರಡು ಕಿಲೋ ವ್ಯಾಟ್‌ ವಿದ್ಯುತ್‌ ಸಾಮರ್ಥ್ಯದ ಸೋಲಾರ್‌ ಪ್ಲಾಂಟ್‌ ಅಳವಡಿಸಿದೆ.

ಈ ಯೋಜನೆಗೆ ಪ್ರಸಕ್ತ ವರ್ಷ 3.70 ಕೋಟಿ ರೂ. ಮೀಸಲಿಡಲಾಗಿದ್ದು, ಈಗ ಹೈಯರ್‌ ಪ್ರೈಮರಿ ಶಾಲೆಗಳು ಮತ್ತು ಪ್ರೌಢ ಶಾಲೆಗಳಲ್ಲಿ ಸೋಲಾರ್‌ ಅಳವಡಿಸಲಾಗಿದ್ದು, ಮುಂದಿನ ದಿನದಲ್ಲಿ ಪದವಿಪೂರ್ವ ಕಾಲೇಜಿಗೂ ವಿಸ್ತರಿಣೆಯಾಗಲಿದೆ. ಅನೇಕ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್‌ ಇರಲಿಲ್ಲ, ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಬಳಸುವುದು ಕಷ್ಟವಾಗುತಿತ್ತು. ಇಂತಹ ಸಂದರ್ಭ ಎಚ್‌ಎಎಲ್‌ ಸೋಲಾರ್‌ ಅಳವಡಿಸಿರುವುದರಿಂದ ಸ್ಮಾರ್ಟ್‌ ಕ್ಲಾಸ್‌ರೂಮ್‌, ಕಂಪ್ಯೂಟರ್‌, ಫ್ಯಾನ್‌, ಅಕ್ಷರ ದಾಸೋಹದ ಅಡುಗೆಗೆ ಸಹಾಯಕವಾಗಲಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ಎಚ್‌ಎಎಲ್‌ ನಂತಹ ಸಂಸ್ಥೆಗಳ ಉತ್ತೇಜನಕಾರಿ ಕ್ರಮಗಳಿಂದ ಸರ್ಕಾರಿ ಶಾಲೆಗಳಲ್ಲಿ ಮತ್ತೆ ಆತ್ಮವಿಶ್ವಾಸ ಗರಿಗೆದರಿದೆ. ಎಚ್‌ಎಎಲ್‌ನ ಈ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮಕ್ಕಳಿಗೆ ಅನುಕೂಲ: ವಿದ್ಯುತ್‌ ಸಂಪರ್ಕ ಇಲ್ಲದಿರುವ ಬಹುತೇಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ಇದ್ದರೂ ಬಳಕೆಯಾಗುತಿರಲಿಲ್ಲ. ಇಂತಹ ಶಾಲೆಗಳಿಗೆ ಸೋಲಾರ್‌ ಸೌಲಭ್ಯ ಒದಗಿಸಿದ್ದರಿಂದ ಕಂಪ್ಯೂಟರ್‌ ಬಳಕೆಗೆ ಸಹಕಾರಿಯಾಗಿದೆ. ಇನ್ನು ಹಳ್ಳಿಗಳಲ್ಲಿ ವಿದ್ಯುತ್‌ ಕಣ್ಣಮುಚ್ಚಾಲೆಯಿಂದ ಕಂಪ್ಯೂಟರ್‌ ಇದ್ದರೂ ಪಾಠ ಮಾಡಲು ಆಗುತ್ತಿರಲಿಲ್ಲ. ಇನ್ನು ಬೇಸಿಗೆಯಲ್ಲಂತೂ ಬಿಸಿಲ ಝಳಕ್ಕೆ ವಿದ್ಯಾರ್ಥಿಗಳು ಪಾಠ ಕೇಳುವುದೇ ಕಷ್ಟವಾಗುತಿತ್ತು. ಸೋಲಾರ್‌ ಅಲವಡಿಕೆಯಿಂದ ತರಗತಿಗಳಲ್ಲಿ ಫ್ಯಾನ್‌ ತಿರುಗುವಂತಾ ಗಿದೆ. ಸೌರ ವಿದ್ಯುತ್‌ನಿಂದ ಕಂಪ್ಯೂಟರ್‌, ಬ್ಯಾಟರಿ, ಪ್ರಾಜೆಕ್ಟರ್‌, ಪ್ರಿಂಟರ್‌, ಸ್ಕಾ ನರ್‌, ಜೆರಾಕ್ಸ್‌ ಯಂತ್ರ ಬಳಸಬಹುದಾಗಿದೆ. ಕಂಪ್ಯೂಟರ್‌ ಶಿಕ್ಷಣ, ಸ್ಮಾರ್ಟ್‌ ಕ್ಲಾಸ್‌ನಂತಹ ಸೌಲಭ್ಯ ಮಕ್ಕಳಿಗೆ ದಕ್ಕುತ್ತಿವೆ ಎನ್ನುತ್ತಾರೆ ನಿಟ್ಟೂರು ಶಾಲೆ ಮುಖ್ಯಶಿಕ್ಷಕ ಲಕ್ಷಯ್ಯ.

ಗುಬ್ಬಿ ತಾಲೂಕಿನ ಗ್ರಾಮೀಣ ಪ್ರದೇಶದ 76 ಶಾಲೆಗಳಲ್ಲಿ ಎಚ್‌ ಎಎಲ್‌ನಿಂದ ಸೋಲಾರ್‌ ವಿದ್ಯುತ್‌ ಅಳವಡಿಸಲಾಗಿದೆ. 36 ಶಾಲೆಗಳಲ್ಲಿ 2 ಕೆ.ವಿ, 40 ಶಾಲೆಗಳಲ್ಲಿ 2 ಕೆ.ವಿ ವಿದ್ಯುತ್‌ ಸಾಮರ್ಥ್ಯದ ಸೋಲಾರ್‌ ಅಳವಡಿಸಲಾಗಿದ್ದು, ಇದರ ನಿರ್ವಹಣೆ ಟೆಕ್ಸರ್‌ ಕಂಪನಿಗೆ ನೀಡಲಾಗಿದ್ದು, ವಿದ್ಯುತ್‌ ಇಲ್ಲದಿದ್ದರೂ ಸ್ಮಾರ್ಟ್‌ ಕ್ಲಾಸ್‌ಗಳ ಮೂಲಕ ನಗರ ಪ್ರದೇಶದ ಮಕ್ಕಳಂತೆ ಗ್ರಾಮೀಣ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ.ಸಿದ್ದಲಿಂಗಸ್ವಾಮಿ, ಬಿಆರ್‌ಸಿ ಗುಬ್ಬಿ

Advertisement

 

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next