Advertisement
ಎಚ್‌ಎಎಲ್ ಮನವಿ ಹಿನ್ನೆಲೆಯಲ್ಲಿ ಹೋರ್ಡಿಂಗ್ ಅಳವಡಿಕೆಗೆ ಅನುಮತಿ ಕೋರಿ ಬಿಬಿಎಂಪಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಶರತ್ತುಬದ್ಧ ಅನುಮತಿ ನೀಡಿ ಆದೇಶಿಸಿತು.
Related Articles
Advertisement
ಶೇ.100ರಷ್ಟು ಕಾಟನ್ ಬಳಕೆ: ಅದೇ ರೀತಿ ಹೋರ್ಡಿಂಗ್‌ಗಳಲ್ಲಿ ಶೇ.100ರಷ್ಟು ಕಾಟನ್ ಬಳಕೆ ಮಾಡುತ್ತೇವೆ. ಫೆ.15ರಿಂದ 25ವರೆಗೂ ಹೋರ್ಡಿಂಗ್ಸ್ ಅಳವಡಿಸಿ, ಏರ್ ಶೋ ಮುಗಿದ ಕೂಡಲೇ ತೆರವುಗೊಳಿಸಿ ಬಿಬಿಎಂಪಿಗೆ ವರದಿ ಸಲ್ಲಿಸುವಂತೆ ಎಚ್‌ಎಎಲ್‌ಗೆ ಸೂಚಿಸಲಾಗುವುದು. ಆದ್ದರಿಂದ ಏರೋ ಇಂಡಿಯಾಗೆ ಸಿಮೀತವಾಗಿ ಆಯ್ದ ಕಡೆಗಳಲ್ಲಿ ಜಾಹಿರಾತು ಅಳವಡಿಕೆಗೆ ಅನುಮತಿ ನೀಡುವಂತೆ ಬಿಬಿಎಂಪಿ ಅಫಿಡವಿಟ್‌ನಲ್ಲಿ ನ್ಯಾಯಪೀಠವನ್ನು ಮನವಿ ಮಾಡಿತು. ಇದನ್ನು ನ್ಯಾಯಪೀಠ ಮಾನ್ಯ ಮಾಡಿದೆ.
ಡಿಸಿಪಿ ಖುದ್ದು ಹಾಜರಿಗೆ ಸೂಚನೆ: ನಗರದ ಕೋರಮಂಗಲ, ಜಾನ್ಸನ್ ಮಾರುಕಟ್ಟೆ ಹಾಗೂ ರೆಸ್‌ಕೋರ್ಸ್ ರಸ್ತೆಗಳಲ್ಲಿ ಅನಧಿಕೃತವಾಗಿ ಜಾಹೀರಾತುಗಳನ್ನು ಅಳವಡಿಸಿರುವ ಫೋಟೋಗಳನ್ನು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಈ ಜಾಹೀರಾತು ಅವಳವಡಿಸಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆಯೇ?
ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು. ನಂತರ ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ? ಎಫ್ಐಆರ್ ದಾಖಲಿಸಲಾಗಿದೆಯೇ? ದಾಖಲಿಸಿದ್ದರೆ, ಅವುಗಳನ್ನು ಕೋರ್ಟ್‌ಗೇಕೆ ಸಲ್ಲಿಸಲ್ಲ? ಎಂದು ಪ್ರಶ್ನಿಸಿದ್ದು, ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಫೆ.22ರಂದು ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಗರ ಅಪರಾಧ ವಿಭಾಗದ ಡಿಸಿಪಿ ಅವರಿಗೆ ತಾಕೀತು ಮಾಡಿತು.