ಪಡುಬಿದ್ರಿ: ಹೆಜಮಾಡಿ ಮೀನುಗಾರಿಕಾ ಬಂದರಿನ 138.6ಕೋಟಿ ರೂ. ಗಳ ಯೋಜನೆಗೆ ಈಗಾಗಲೇ ಕೇಂದ್ರ, ರಾಜ್ಯಗಳ ಹಣಕಾಸಿನ ಹೊಂದಾಣಿಕೆ ಆಗಿದೆ. ಎಲ್ಲಾ ಪರವಾನಿಗೆಗಳನ್ನು ಹೊಂದಿದ್ದು ಇದೀಗ ಟೆಂಡರು ಹಂತದಲ್ಲಿದೆ. ಪೂರ್ಣ ನೂತನ ತಂತ್ರಜ್ಞಾನದೊಂದಿಗೆ ಭೂಮಿ, ಪರಿಸರಗಳಿಗಿರುವ ಯಾವುದೇ ಪರವಾನಿಗೆಗಳಿಲ್ಲದೇ ಸಮುದ್ರದಲ್ಲೇ ತೇಲುವ ಜಟ್ಟಿಯನ್ನು ಹೊಂದಿರುವ ಬಂದರನ್ನು ಹೆಜಮಾಡಿಯಲ್ಲಿ ಕಾರ್ಯರೂಪಕ್ಕಿಳಿಸಲಾಗುವುದು ರಾಜ್ಯ ಪಶುಸಂಗೋಪನಾ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ಇಂತಹ ಸಣ್ಣ ಪ್ರಮಾಣದ ತೇಲುವ ಜಟ್ಟಿ ಯೋಜನೆಯಿರುವ ಗೋವಾ ರಾಜ್ಯಕ್ಕೆ ಅಧಿಕಾರಿಗಳ ದಂಡು ತೆರಳಿ ಪರಿಶೀಲಿಸಲಿದೆ. ನಂತರ ಅಧಿಕಾರಿಗಳು, ಈ ಭಾಗದ ಶಾಸಕರು, ಪರಿಣಿತರ ಸಭೆ ನಡೆಸಿ ಯಾàಜನಾನುಷ್ಟಾನಕ್ಕೆ ಪ್ರಾಯೋಗಿಕವಾಗಿ ಇಲಾಖೆ ಮುಂದಾಗುವುದಾಗಿ ಸಚಿವ ನಾಡಗೌಡ ಹೇಳಿದರು.
ಕರಾವಳಿಗೆ ಭೀತಿ ಬೇಡ, ಅವೈಜ್ಞಾನಿಕ ರಸ್ತೆ, ಸೇತುವೆ ವಿಚಾರ ಪರಿಶೀಲನೆ ಮಾಡುವ ಭರವಸೆ, ಪಶುಸಂಗೋಪನೆ ಇಲಾಖೆ ಸಿಬಂದಿ ಕೊರತೆ ನೀಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ. ಪಂ. ಸದಸ್ಯೆ ರೇಣುಕಾ ಪುತ್ರನ್,ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಸುಧಾಕರ ಶೆಟ್ಟಿ, ಮುಖಂಡರುಗಳಾದ ಹರೀಶ್ ಎನ್. ಪುತ್ರನ್, ಮೀನುಗಾರ ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷ ಗಂಗಾಧರ ಸುವರ್ಣ ಎರ್ಮಾಳು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ, ರತ್ನಾಕರ ಸುವರ್ಣ, ಜೀವನ್ ಕೆ. ಶೆಟ್ಟಿ, ಇಕ್ಬಾಲ್ ಅಹ್ಮದ್, ಪ್ರಕಾಶ್ ಕಾಂಚನ್, ವಾಸುದೇವ ರಾವ್, ಇಸ್ಮಾಯಿಲ್ ಪಲಿಮಾರು, ವೆಂಕಟೇಶ್, ಮೀನುಗಾರ ಮುಖಂಡರುಗಳಾದ ವಿಜಯ ಬಂಗೇರ, ಸದಾಶಿವ ಕೋಟ್ಯಾನ್, ಗುರುವಪ್ಪ ಕೋಟ್ಯಾನ್, ವಿನೋದ್ ಕೋಟ್ಯಾನ್, ಹರಿಶ್ಚಂದ್ರ ಮೆಂಡನ್, ಕರುಣಾಕರ ಕರ್ಕೇರ, ರಾಜು ಕರ್ಕೇರ, ಏಕನಾಥ ಕರ್ಕೇರ, ಮೀನುಗಾರಿಕಾ ಇಲಾಖಾ ನಿರ್ದೇಶಕ ವೀರಪ್ಪ ಗೌಡ, ಜಂಟಿ ನಿರ್ದೇಶಕ ಎಮ್. ಎಲ್. ದೊಡ್ಡಮನಿ, ಉಪ ನಿರ್ದೇಶಕ ಪಾರ್ಶ್ವನಾಥ, ಸಹಾಯಕ ನಿರ್ದೇಶಕ ಕಿರಣ್, ಮೀನುಗಾರಿಕಾ ಫೆಡರೇಶನ್ ಆಡಳಿತ ನಿರ್ದೇಶಕ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.