ಹೊಸದಿಲ್ಲಿ: ಪ್ರಸಕ್ತ ವರ್ಷದಿಂದಲೇ ಅನ್ವಯವಾಗುವಂತೆ ಹಜ್ ಸಬ್ಸಿಡಿಯನ್ನು ರದ್ದು ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಸರಕಾರ ಇದುವರೆಗೆ ನೀಡುತ್ತಿದ್ದ ಸಬ್ಸಿಡಿ ಅಥವಾ ಅಗ್ಗದ ದರದ ವಿಮಾನ ಟಿಕೆಟ್ ಈ ವರ್ಷದಿಂದ ರದ್ದು ಮಾಡಲಾಗಿದ್ದು, ಯಾತ್ರಿಗಳು ಸ್ವಂತ ಖರ್ಚಿನಿಂದಲೇ ಯಾತ್ರೆ ಕೈಗೊಳ್ಳಬೇಕು ಎಂದು ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವ ಮುಖಾ¤ರ್ ಅಬ್ಟಾಸ್ ನಖೀÌ ಮಂಗಳವಾರ ಘೋಷಿಸಿದ್ದಾರೆ.
ವಿಶೇಷವೆಂದರೆ ಹಜ್ ಸಬ್ಸಿಡಿ ರದ್ದಾದರೂ ಪ್ರಸಕ್ತ ವರ್ಷ ಭಾರತದಿಂದ ದಾಖಲೆ ಸಂಖ್ಯೆಯ ಅಂದರೆ ಬರೋಬ್ಬರಿ 1.75 ಲಕ್ಷ ಮುಸ್ಲಿಮರು ಹಜ್‌ಗೆ ತೆರಳಲಿದ್ದಾರೆ ಎಂದು ತಿಳಿಸಿದ ಸಚಿವ ನಖೀÌ, ಅಲ್ಪಸಂಖ್ಯಾಕರು ಘನತೆಯಿಂದ ಬದುಕಬೇಕು ಮತ್ತು ಯಾವುದೇ ಓಲೈಕೆಗೆ ಒಳಗಾಗಬಾರದು ಎಂಬ ಉದ್ದೇಶವೂ ಇದರಲ್ಲಿ ಸೇರಿದೆ ಎಂದಿದ್ದಾರೆ.
ಮುಸ್ಲಿಮರಿಗೆ ಲಾಭವಾಗಿಲ್ಲ: ಈವರೆಗೆ ಜಾರಿ ಯಲ್ಲಿದ್ದ ಹಜ್ ಸಬ್ಸಿಡಿಯಿಂದ ಮುಸ್ಲಿಮರಿಗೆ ಯಾವುದೇ ಅನುಕೂಲವಾಗಿಲ್ಲ. ಮಧ್ಯವರ್ತಿಗಳೇ ಲಾಭ ಮಾಡಿಕೊಂಡರು. ಅಭಿವೃದ್ಧಿಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಸಬ್ಸಿಡಿಗೆಂದು ವ್ಯಯಿಸಲಾಗುತ್ತಿದ್ದ ಮೊತ್ತವನ್ನು ಅಲ್ಪಸಂಖ್ಯಾಕ ಹೆಣ್ಣುಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಬಳಸುತ್ತೇವೆ ಎಂದಿದ್ದಾರೆ ನಖೀÌ.ಅಲ್ಲದೆ, ಹಡಗುಗಳ ಮೂಲಕ ಹಜ್ ಯಾತ್ರೆ ಕೈಗೊಳ್ಳುವ ಬಗ್ಗೆ ಸೌದಿ ಸರಕಾರದ ಜತೆ ಮಾತುಕತೆ ನಡೆಸಲಾಗಿದೆ. ಅವರೂ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಸರಕಾರ ಹಜ್ ಸಬ್ಸಿಡಿ ರದ್ದು ಮಾಡಲಿದೆ ಎಂದು ಇತ್ತೀಚೆಗಷ್ಟೇ ಸಚಿವ ನಖೀÌ ಮಾಹಿತಿ ನೀಡಿದ್ದರು. 2012ರಲ್ಲಿ ಯುಪಿಎ ಸರಕಾರ ಆಡಳಿತದಲ್ಲಿದ್ದ ಅವಧಿಯಲ್ಲೇ ಹಜ್ ಸಬ್ಸಿಡಿ ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಆದೇಶಿಸಿತ್ತು. ಪೀಠದ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.