Advertisement

ಹಜ್‌ಭವನ ಇನ್ನು ಕೋವಿಡ್‌ 19 ಆಸ್ಪತ್ರೆ

05:37 AM Jun 21, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತೆರದ ಮಾದರಿಯ ಆಸ್ಪತ್ರೆಗಳನ್ನು ಪ್ರಾರಂಭಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ನಗರ ಹಜ್‌ಭವನವನ್ನು ಸೋಂಕು ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಲಾಗಿದೆ.

Advertisement

ಹಜ್‌ಭವನದಲ್ಲಿ 500 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ (ಎಸಿಮ್‌ಟಂಸ್‌) ಅವರಿಗೆ ಚಿಕಿತ್ಸೆ ನೀಡಲು ಪಾಲಿಕೆ  ಮುಂದಾಗಿದೆ. ಕೋವಿಡ್‌ 19 ಎ-ಸಿಮ್‌ಟಂಸ್‌ ಸೋಂಕಿತರ ಚಿಕಿತ್ಸೆಗೆ ಹಜ್‌ಭವನದಲ್ಲಿ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದಲ್ಲಿ ಎ-  ಸಿಮ್‌ಟಂಸ್‌ ಸೋಂಕು ಕಾಣಿಸಿಕೊಂಡ ವರನ್ನು ಅವರ ಮನೆಗಳಲ್ಲೇ ಚಿಕಿತ್ಸೆ ನೀಡಲು ಪಾಲಿಕೆ ಚಿಂತನೆ ನಡೆಸಿತ್ತು. ಎ ಸಿಮ್‌ಟಂಸ್‌ ಸೋಂಕು ಇರು ವವರು (ಕೋವಿಡ್‌ 19 ಸೋಂಕು ಇದ್ದರೂ, ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದ ಸ್ಥಿತಿ)  ಇರುವವರಿಗೆ ಚಿಕಿತ್ಸೆ ನೀಡಲು ಚಿಂತನೆ ನಡೆಸಿತ್ತು. ಎ- ಸಿಮ್‌ಟಂಸ್‌ನವರು ಉಳಿದವರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಇದ್ದು, ಆಸ್ಪತ್ರೆಗಳಿಗಿಂತ ಮನೆಯಲ್ಲೇ ಚಿಕಿತ್ಸೆ ನೀಡಬಹುದು.

ಈ ಮೂಲಕ ಆಸ್ಪತ್ರೆಗಳಲ್ಲಿನ ಹಾಸಿಗೆ  ಕೊರತೆ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎನ್ನುವುದು ಪಾಲಿಕೆಯ ಲೆಕ್ಕಾಚಾರವಾಗಿತ್ತು. ಇದರ ಭಾಗವಾಗಿಯೇ ಸದ್ಯ ನಗರದಲ್ಲಿನ ವಿಶಾಲ ಪ್ರದೇಶಗಳಾದ ಕ್ರೀಡಾಂಗಣ, ಸಮುದಾಯ ಭವನ ಹಾಗೂ  ಸರ್ಕಾರಿ ಪ್ರದೇಶಗಳಲ್ಲಿ ತೆರೆದ ಮಾದರಿಯ ಕೊವೀಡ್‌ 19 ಚಿಕಿತ್ಸಾ ಕೇಂದ್ರಗಳನ್ನು ಪಾಲಿಕೆ ಪ್ರಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next